ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿರಂಗಿ ತಯಾರಿಕೆಯಲ್ಲಿ ಅಕ್ರಮ: ರಕ್ಷಣಾ ಇಲಾಖೆಯ ಹೊಸ ಹಗರಣ ಬಯಲಿಗೆ!

ಧನುಷ್ ಫಿರಂಗಿ ತಯಾರಿಕೆಯಲ್ಲಿ ಅಕ್ರಮ. ಸಿಬಿಐನಿಂದ ಪ್ರಕರಣ ದಾಖಲು. ಕಳಪೆ ವಸ್ತುಗಳನ್ನು ತಯಾರಿಸಿ ಧನುಷ್ ಬಿಡಿ ಭಾಗ ತಯಾರಿಸಿದ ಆರೋಪ. ದೆಹಲಿ ಮೂಲದ ಕಂಪನಿ ಹಾಗೂ ರಕ್ಷಣಾ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ ಸಿಬಿಐ.

|
Google Oneindia Kannada News

ನವದೆಹಲಿ, ಜುಲೈ 22: ರಕ್ಷಣಾ ಇಲಾಖೆಗೆ ಧನುಷ್ ಎಂಬ ಅತ್ಯಾಧುನಿಕ ಫಿರಂಗಿ ತಯಾರಿಸಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ದೆಹಲಿ ಮೂಲದ ಕಂಪನಿಯೊಂದು ಕಳಪೆ ವಸ್ತುಗಳನ್ನು ಉಪಯೋಗಿಸಿ ಫಿರಂಗಿಗಳಿಗೆ ಬೇಕಾದ ಪ್ರಮುಖ ಬಿಡಿಭಾಗಗಳನ್ನು ತಯಾರಿಸಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಿಸಿದೆ.

ಅಲ್ಲದೆ, ಈ ಕುಕೃತ್ಯಕ್ಕೆ ಜಲಂಧರ್ ನಲ್ಲಿರುವ ರಕ್ಷಣಾ ಇಲಾಖೆಯ 'ಗನ್ ಕ್ಯಾರಿಯೇಜ್ ಫ್ಯಾಕ್ಟರಿ'ಯ (ಜಿಸಿಎಫ್) ಕೆಲ ಅಧಿಕಾರಿಗಳೂ ಕೈ ಜೋಡಿಸಿರುವುದಾಗಿ ಅದು ಆರೋಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳಪೆ ವಸ್ತುಗಳನ್ನು ಉಪಯೋಗಿಸಿ ಧನುಷ್ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸಿದ ಸಿಧ್ ಸೇಲ್ಸ್ ಸಿಂಡಿಕೇಟ್ ಎಂಬ ಕಂಪನಿ ಹಾಗೂ ಸಿಜಿಎಫ್ ನ ಕೆಲ ಅನಾಮಧೇಯ ಅಧಿಕಾರಿಗಳ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಅಲ್ಲದೆ, ಕಳಪೆ ಬಿಡಿಭಾಗಗಳ ಮೇಲೆ 'ಮೇಡ್ ಇನ್ ಜರ್ಮನಿ' ಎಂದು ನಮೂದಿಸಿ ರಕ್ಷಣಾ ಇಲಾಖೆಗೆ ಪಂಗನಾಮ ಹಾಕಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಏನಿದು ಧನುಷ್ ಫಿರಂಗಿ, ಈ ಹಗರಣ ಹೇಗಾಯ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಧನುಷ್.... ಏನಿದರ ಅರ್ಥ?

ಧನುಷ್.... ಏನಿದರ ಅರ್ಥ?

ಕೆಲ ವರ್ಷಗಳ ಹಿಂದೆ, ಸ್ವೀಡನ್ ನಿಂದ ಭಾರತವು ಬೋಫೋರ್ಸ್ ಎಂಬ ಫಿರಂಗಿಗಳನ್ನು ಆಮದು ಮಾಡಿಕೊಂಡಿದ್ದು ನಿಮಗೆ ನೆನಪಿರಬಹುದು. 'ಧನುಷ್' ಎಂಬುದು ಅದರ ಭಾರತೀಯ ಸ್ವರೂಪ.

ಸ್ವದೇಶಿ ನಿರ್ಮಿತ ಫಿರಂಗಿ

ಸ್ವದೇಶಿ ನಿರ್ಮಿತ ಫಿರಂಗಿ

ಬೋಫೋರ್ಸ್ ಫಿರಂಗಿಗಳನ್ನು ಭಾರತದಲ್ಲೇ ತಯಾರಿಸಲು ಮನಸ್ಸು ಮಾಡಿದ ಅದೇ ತಂತ್ರಜ್ಞಾನವನ್ನು ಉಪಯೋಗಿಸಿ ಭಾರತದಲ್ಲೇ ಸ್ವತಂತ್ರವಾಗಿ ಆ ಫಿರಂಗಿಗಳನ್ನು ತಯಾರಿಸಿತು. ಅಲ್ಲದೆ, ಅವುಗಳಿಗೆ ಧನುಷ್ ಎಂದು ಹೆಸರಿಡಲಾಯಿತು.

ಬೇರಿಂಗ್ ತಯಾರಿಕೆಗೆ ಹೊರ ಒಪ್ಪಂದ

ಬೇರಿಂಗ್ ತಯಾರಿಕೆಗೆ ಹೊರ ಒಪ್ಪಂದ

'ಧನುಷ್' ನ ರೂಪುರೇಷೆಗಳು ಸಿದ್ಧಗೊಂಡು ಸರ್ಕಾರದಿಂದ ಅದರ ತಯಾರಿಕೆಗೆ ಆದೇಶ ಸಿಕ್ಕಿದ ನಂತರ, ಧನುಷ್ ತಯಾರಿಕೆಯನ್ನು ಜಿಸಿಎಫ್ ನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈ ಫಿರಂಗಿಗಳಲ್ಲಿ ಬಹುಮುಖ್ಯವಾದ 'ವೈರ್ ರೇಸ್ ರೋಲರ್ ಬೇರಿಂಗ್'ನ ತಯಾರಿಕೆಗೆ ಹೊರಗಿನ ಕಂಪನಿಗಳಿಂದ ಟೆಂಡರ್ ಕರೆಯಲಾಯಿತು.

ಸಿದ್ ಕಂಪನಿಗೆ ಒಲಿದಿತ್ತು ಆರ್ಡರ್

ಸಿದ್ ಕಂಪನಿಗೆ ಒಲಿದಿತ್ತು ಆರ್ಡರ್

ಇದೆಲ್ಲಾ ಆಗಿದ್ದು 2013ರಲ್ಲಿ. ಆಗ, ನಾಲ್ಕು ಕಂಪನಿಗಳು ಟೆಂಡರ್ ಗಾಗಿ ಅರ್ಜಿ ಸಲ್ಲಿಸಿದ್ದವು. ಕಡೆಗೆ, 35.38 ಲಕ್ಷ ರು. ಮೊತ್ತದ ಈ ಟೆಂಡರ್ ದೆಹಲಿಯ ಸಿದ್ ಸೇಲ್ಸ್ ಸಿಂಡಿಕೇಟ್ ಕಂಪನಿ ಪಾಲಾಯಿತು. ಒಟ್ಟು, ಆರು 'ವೈರ್ ರೇಸ್ ರೋಲರ್ ಬೇರಿಂಗ್'ಗಳನ್ನು ತಯಾರಿಸಲು ಅನುಮತಿ ನೀಡಿ, ಟೆಂಡರ್ ಮೌಲ್ಯವನ್ನು 53.07 ಲಕ್ಷ ರು.ಗಳಿಗೆ ಹೆಚ್ಚಿಸಲಾಯಿತು.

ಜರ್ಮನಿ ಕಂಪನಿ ಹೆಸರಲ್ಲಿ ಎರಡು ಬೇರಿಂಗ್

ಜರ್ಮನಿ ಕಂಪನಿ ಹೆಸರಲ್ಲಿ ಎರಡು ಬೇರಿಂಗ್

ಮೊದಲಿಗೆ, ಎರಡು 'ವೈರ್ ರೇಸ್ ರೋಲರ್ ಬೇರಿಂಗ್'ಗಳನ್ನು ಕ್ರಮವಾಗಿ ಏಪ್ರಿಲ್ 7, 2014 ಹಾಗೂ ಆಗಸ್ಟ್ 12, 2014ರಂದು ರಕ್ಷಣಾ ಇಲಾಖೆಗೆ ಒಪ್ಪಿಸಿದ ಸಿದ್ ಸೇಲ್ಸ್ ಸಿಂಡಿಕೇಟ್, ಇವನ್ನು ತಾನು ಜರ್ಮನಿಯ ಸಿಆರ್ ಬಿ ಆಂತ್ರೆಬ್ ಸ್ಟೆಚಿನಿಕ್ ಎಂಬ ಕಂಪನಿಯಿಂದ ತರಿಸಿದ್ದಾಗಿ ಹೇಳಿತ್ತು. ಈ ಬಗ್ಗೆ ಸೂಕ್ತ ದಾಖಲೆಗಳನ್ನೂ ಕೊಟ್ಟಿತ್ತು. ಆ ಬೇರಿಂಗ್ ಗಳ ಮೇಲೆ ಮೇಡ್ ಇನ್ ಜರ್ಮನಿಯೆಂದೂ ನಮೂದಿಸಲಾಗಿತ್ತು.

ನಕಲಿಗೂ ಸೇನಾಧಿಕಾರಿಗಳ ಸಮ್ಮತಿ

ನಕಲಿಗೂ ಸೇನಾಧಿಕಾರಿಗಳ ಸಮ್ಮತಿ

ಕಂಪನಿ ಕೊಟ್ಟ ಬೇರಿಂಗ್ ಗಳನ್ನು ಪರೀಕ್ಷಿಸಿದಾಗ ಈ ಬೇರಿಂಗ್ ಗಳು ನಕಲಿ ಎಂದು ತಿಳಿದುಬಂದವು. ಹಾಗಾಗಿ, ಇವುಗಳನ್ನು ಯಾವುದೇ ವೆಚ್ಛವನ್ನು ಕೇಳದೆ ಸರಿಪಡಿಸಬೇಕೆಂದು ರಕ್ಷಣಾ ಇಲಾಖೆ ತಾಕೀತು ಮಾಡಿತ್ತು. ಆದರೆ, ಕೆಲ ದಿನಗಳ ನಂತರ, ಜಿಸಿಎಫ್ ನ ಕೆಲ ಅಧಿಕಾರಿಗಳು ಇವುಗಳ ನ್ಯೂನತೆಯಗಳ ಹೊರತಾಗಿಯೂ ಇವನ್ನು ಧನುಷ್ ತಯಾರಿಕೆಗಾಗಿ ಜಿಸಿಎಫ್ ಅಧಿಕಾರಿಗಳು ಸಮ್ಮತಿಸಿದರು! ಅವ್ಯವಹಾರ ಆಗಿರುವುದು ಇಲ್ಲೇ ಎಂದು ಹೇಳಿದೆ ಸಿಬಿಐ.

ಜರ್ಮನಿ ಕಂಪನಿ ಹೆಸರು ದುರ್ಬಳಕೆ!

ಜರ್ಮನಿ ಕಂಪನಿ ಹೆಸರು ದುರ್ಬಳಕೆ!

ತನಿಖೆಯ ಪ್ರಕಾರ, ಈ ಎಲ್ಲಾ ಬೇರಿಂಗ್ ಗಳು ಚೀನಾದ ಸಿನೊ ಯುನೈಟೆಡ್ ಇಂಡಸ್ಟ್ರೀಸ್ (ಲುಯಾಂಗ್) ಲಿಮಿಟೆಡ್ ತಯಾರಿಸಿದೆ ಎಂದು ಹೇಳಲಾಗಿದೆ. ಅಲ್ಲದೆ, ಇದರ ಕಚ್ಚಾವಸ್ತುಗಳಾಗಿ ಕಳಪೆ ಲೋಹದ ಸಾಮಾನುಗಳು, ಬಿಡಿಭಾಗಗಳನ್ನು ಬಳಸಲಾಗಿದೆ. ಸಿಜಿಎಫ್ ನ ಲೆಟರ್ ಹೆಡ್ ಅನ್ನು ಕಾಪಿ ಮಾಡಲಾಗಿದೆ. ಅಲ್ಲದೆ, ಜರ್ಮನಿ ಕಂಪನಿಯೊಂದರ ಹೆಸರು, ಅದರ ಲೋಗೋಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಆರೋಪಿಸಿದೆ.

English summary
Chinese parts camouflaged as 'Made in Germany' ones allegedly found their way to the production line of Indian-made Bofors artillery guns called Dhanush used by the Army, prompting the CBI to file a case against a Delhi-based company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X