ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: App ಬಳಸಿ ಆನ್ಲೈನ್ ನಲ್ಲಿ ಸಿಬಿಎಸ್ ಇ ಪರೀಕ್ಷೆ?

|
Google Oneindia Kannada News

ನವದೆಹಲಿ, ಜೂನ್ 2: ಕೊರೊನಾಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಡುವೆ ಈ ಕುರಿತಂತೆ ಮಾರ್ಗಸೂಚಿ ಹೊರಡುವ ಮೊದಲೇ ನಕಲಿ ಸಂದೇಶಗಳು ಹಬ್ಬುತ್ತಿವೆ. ಸಿಬಿಎಸ್ ಇ ಪರೀಕ್ಷೆಗಳು ಆನ್ ಲೈನ್ ನಲ್ಲಿ ನಡೆಯಲಿದ್ದು, ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಬಳಸಿ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

"ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಶಾಲೆಗಳಿಗೆ ಸಿಬಿಎಸ್ ಇ ನಿರ್ದೇಶಿಸಿದೆ. ವಿಎಚ್ ಸಾಫ್ಟ್ ವೇರ್ ಸಂಸ್ಥೆ ಹೊರ ತಂದಿರುವ ಮೊಬೈಲ್ ಫೋನ್ ಅಪ್ಲಿಕೇಷನ್ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಬೇಕು, ಈ ಆಪ್ ಮೂಲಕ ಆನ್ ಲೈನ್ ಪರೀಕ್ಷೆ ನಡೆಸಲಾಗುತ್ತದೆ, ಪರೀಕ್ಷೆ ಮೇಲ್ವಿಚಾರಿಕೆಗಾಗಿ ಸಾಹಿಲ್ ಗೆಹ್ಲೋಟ್ ಅವರನ್ನು ಒಎಸ್ ಡಿಯಾಗಿ ನೇಮಿಸಲಾಗಿದೆ" ಎಂಬ ಸುದ್ದಿ ಹಬ್ಬಿದೆ.

ದೇಶದಾದ್ಯಂತ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಸರ್ಕಾರದೇಶದಾದ್ಯಂತ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ

ಸಂದೇಶದಲ್ಲಿ ಏನಿದೆ?: "ಹಲವು ರಾಜ್ಯಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮಹಾರಾಷ್ಟ್ರದ ಪರಿಸ್ಥಿತಿ ಬಗ್ಗೆ ಬೋರ್ಡಿಗೆ ಅರಿವಿದೆ. ಆನ್ ಲೈನ್ ಪರೀಕ್ಷೆ ನಡೆಸುವುದು ಬಹಳ ಕಷ್ಟಕರ ಕೆಲಸ. ಇದಕ್ಕಾಗಿ ಆನ್ ಲೈನ್ ಪರೀಕ್ಷಾ ವಿಧಾನವಾದ ಇ-ಪರೀಕ್ಷಾ ವ್ಯವಸ್ಥೆ ತರಲಾಗಿದೆ. ಈ ಸಾಫ್ಟ್ ವೇರ್ ಮೂಲಕ ಯಾವುದೇ ವಂಚನೆ ಇಲ್ಲದೆ, ವಿದ್ಯಾರ್ಥಿಗಳ ಆಡಿಯೋ, ವಿಡಿಯೋ ಚಲನವಲನ ಮೇಲೆ ನಿಗಾವಹಿಸಬಹುದಾಗಿದೆ. ಈ ಅಪ್ಲಿಕೇಷನ್ ಎಲ್ಲರೂ ಬಳಸಿ'' ಎಂದು ಸುದ್ದಿ ಹಬ್ಬಿದೆ.

Fake: CBSE has not recommended online exam through this app

ಸತ್ಯಾಸತ್ಯತೆ: ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ. ಸಿಬಿಎಸ್ ಇ ಇಂಥ ಯಾವುದೇ ಅಪ್ಲಿಕೇಷನ್ ಬಳಸಲು ಸೂಚಿಸಿಲ್ಲ, ಆನ್ ಲೈನ್ ಪರೀಕ್ಷಾ ವಿಧಾನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಿಎಚ್ ಸಾಫ್ಟ್ ವೇರ್ ಅಥವಾ ವಿಎಸ್ ಸ್ಟಡೀಸ್ ಸಂಸ್ಥೆಯಿಂದ ಹೊರ ಬಂದಿರುವ ಅಪ್ಲಿಕೇಷನ್ ಬಳಸುವಂತೆ ಸೂಚಿಸಿಲ್ಲ. ಈ ಬಗ್ಗೆ ಯಾವುದೇ ಸುದ್ದಿ ಬಂದರೂ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ನಂಬುವುದು ಬೇಡ ಎಂದು ಸಿಬಿಎಸ್ ಇ ಹೇಳಿದೆ.

English summary
There is a claim that the CBSE has directed schools to conduct online exams by purchasing an application developed by V H Softwares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X