ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಅಧ್ಯಕ್ಷ ಕೆ. ಶಿವನ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಕಿಡಿಗೇಡಿಗಳು ನಕಲಿ ಖಾತೆಗಳನ್ನು ತೆರೆದಿದ್ದಾರೆ.

ಚಂದ್ರಯಾನ-2 ನೌಕೆಯನ್ನು ಚಂದ್ರನಲ್ಲಿ ಇಳಿಸುವ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಕೈಲಾಸವಡಿವೂ ಶಿವನ್ ಎಂಬ ಹೆಸರಿನ ಟ್ವಿಟ್ಟರ್ ಖಾತೆ ಅನೇಕ ವಿಡಿಯೋ, ಟ್ವೀಟ್ ಮತ್ತು ಫೋಟೊಗಳನ್ನು ಹಂಚಿಕೊಂಡಿದೆ. ಈ ಖಾತೆದಾರನ ಮೂಲಕ ಹೆಸರು ಸುಜಿತ್ ಅಗರವಾಲ್ ಎಂದಿದ್ದರೂ ಪ್ರದರ್ಶನವಾಗುವ ಹೆಸರು ಮತ್ತು ಚಿತ್ರ ಕೆ. ಶಿವನ್ ಅವರದ್ದಾಗಿದೆ. ಇದನ್ನು ಅರಿಯದ ಅನೇಕರು ಇದು ಶಿವನ್ ಅವರ ಅಧಿಕೃತ ಟ್ವಿಟ್ಟರ್ ಖಾತೆ ಎಂದು ಅದನ್ನು ಹಿಂಬಾಲಿಸಿದ್ದಾರೆ. ಅವರ ಪೋಸ್ಟ್‌ಗಳನ್ನು ಲೈಕ್ ಮಾಡುವ, ಕಾಮೆಂಟ್ ಮಾಡುವ ಮತ್ತು ರೀಟ್ವೀಟ್ ಮಾಡುವ ಕಾರ್ಯಗಳನ್ನು ಸಹ ಮಾಡಿದ್ದಾರೆ.

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಸಹ ಈ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ. ಚಂದ್ರಯಾನ ಕಾರ್ಯಾಚರಣೆಯ ಬಗ್ಗೆ ತಾಂತ್ರಿಕವಾದ ಮಾಹಿತಿಗಳನ್ನು ನೀಡುತ್ತಿರುವುದರಿಂದ ಇದು ಶಿವನ್ ಅವರದೇ ಖಾತೆ ಎಂದು ಅನೇಕರು ನಂಬಿದ್ದಾರೆ. ಇದೇ ರೀತಿ ಅನೇಕ ನಕಲಿ ಖಾತೆಗಳನ್ನು ತೆರೆಯಲಾಗಿದೆ.

Fake Accounts In The Name Of K Sivan ISRO Clarification

ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯುವುದು ಸಾಮಾನ್ಯ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈಗ ಕೆ. ಶಿವನ್ ಅವರ ಹೆಸರಿನಲ್ಲಿಯೂ ಖಾತೆಗಳನ್ನು ತೆರೆದಿರುವುದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ.

ಇದನ್ನು ಅರಿತ ಇಸ್ರೋ, ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದೆ. ಜತೆಗೆ ಇಸ್ರೋ ಹೊಂದಿರುವ ಅಧಿಕೃತ ಖಾತೆಗಳ ಬಗ್ಗೆ ಕೂಡ ಮಾಹಿತಿ ನೀಡಿದೆ.

ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

'ಕೈಲಾಸವಡಿಯೂ ಶಿವನ್ ಅವರ ಹೆಸರಿನಲ್ಲಿ (ಕೆ. ಶಿವನ್ ಅವರ ಚಿತ್ರಗಳೊಂದಿಗೆ) ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳು ಕಾರ್ಯಾಚರಣೆ ಮಾಡುತ್ತಿರುವುದು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿರುವುದು ಗಮನಕ್ಕೆ ಬಂದಿದೆ. ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ವೈಯಕ್ತಿಕ ಖಾತೆಯನ್ನು ಹೊಂದಿಲ್ಲ. ಹೀಗಾಗಿ ಅಂತಹ ಖಾತೆಗಳಲ್ಲಿ ನೀಡುತ್ತಿರುವ ಮಾಹಿತಿಗಳು ಅಧಿಕೃತವಲ್ಲ' ಎಂದು ಇಸ್ರೋ ತಿಳಿಸಿದೆ.

ಅದರ ಜತೆಯಲ್ಲಿ ಇಸ್ರೋ ತಾನು ಸಕ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳ ಪಟ್ಟಿಯನ್ನು ನೀಡಿದೆ. ಟ್ವಿಟ್ಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನ ತನ್ನ ತಲಾ ಒಂದು ಖಾತೆಗಳು ಮಾತ್ರ ಅಧಿಕೃತ ಎಂದು ಅದು ತಿಳಿಸಿದೆ.

English summary
ISRO has given clarification that president K Sivan does not have any personal account social media. The accounts in the name of K Sivan or fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X