ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದ : ರಾಹುಲ್‌ಗೆ ಟ್ವೀಟ್ ಮೂಲಕ ಜೇಟ್ಲಿ ತಿರುಗೇಟು

|
Google Oneindia Kannada News

ನವದೆಹಲಿ, ನವೆಂಬರ್ 13 : ರಫೇಲ್ ಒಪ್ಪಂದದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ವಾಕ್ಸಮರ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಈ ಕುರಿತು ಸಾಲು ಸಾಲು ಟ್ವೀಟ್‌ಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಸುಳ್ಳು ಆರೋಪಗಳು ಅವರ ಪತನಗೊಂಡ ರಾಜಕೀಯಕ್ಕೆ ಯಾವುದೇ ಲಾಭ ತರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

'ಕಳ್ಳತನ' ಒಪ್ಪಿಕೊಂಡ ಮೋದಿ: ರಾಹುಲ್ ಗಾಂಧಿ ಮತ್ತೆ ಟೀಕೆ'ಕಳ್ಳತನ' ಒಪ್ಪಿಕೊಂಡ ಮೋದಿ: ರಾಹುಲ್ ಗಾಂಧಿ ಮತ್ತೆ ಟೀಕೆ

ದೇಶದ ವಾಯುಸೇನೆಯನ್ನು ಆಧುನೀಕರಣಗೊಳಿಸಲು ರಫೇಲ್ ಒಪ್ಪಂದ ಅಗತ್ಯವಾಗಿತ್ತು. ಆದರೆ, ಯುಪಿಎ ಸರ್ಕಾರ ಈ ಒಪ್ಪಂದವನ್ನು ವಿಳಂಬಗೊಳಿಸಲು ಕಾರಣವೇನು? ಎಂದು ಅರುಣ್ ಜೇಟ್ಲಿ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ರಿಲಯನ್ಸ್‌ ಆಯ್ದುಕೊಂಡದ್ದು ನಾವೇ, ಸುಳ್ಳು ಹೇಳಲ್ಲ: ಡಸ್ಸಾಲ್ಟ್‌ ಸಿಇಓರಿಲಯನ್ಸ್‌ ಆಯ್ದುಕೊಂಡದ್ದು ನಾವೇ, ಸುಳ್ಳು ಹೇಳಲ್ಲ: ಡಸ್ಸಾಲ್ಟ್‌ ಸಿಇಓ

ರಫೇಲ್ ಒಪ್ಪಂದದಲ್ಲಿ 'ಕಳ್ಳತನ' ಮಾಡಿರುವುದನ್ನು ನರೇಂದ್ರ ಮೋದಿ ಅವರು ಸುಪ್ರೀಂಕೋರ್ಟ್‌ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇದಕ್ಕೆ ಅರುಣ್ ಜೇಟ್ಲಿ ಅವರು ಪ್ರತ್ಯುತ್ತರ ನೀಡಿದ್ದಾರೆ.

ಮೋದಿ ಸರ್ಕಾರದ ದೊಡ್ಡ ಹಗರಣ ರಫೆಲ್‌ ಅಲ್ಲ, ಬೆಳೆ ವಿಮೆ: ಆರೋಪಮೋದಿ ಸರ್ಕಾರದ ದೊಡ್ಡ ಹಗರಣ ರಫೆಲ್‌ ಅಲ್ಲ, ಬೆಳೆ ವಿಮೆ: ಆರೋಪ

ಸುಳ್ಳು ಆರೋಪದ ರಾಜಕೀಯ

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಹುಲ್ ಗಾಂಧಿ ಅವರ ಸುಳ್ಳು ಆರೋಪಗಳು ಅವರ ಪತನಗೊಂಡ ರಾಜಕೀಯಕ್ಕೆ ಯಾವುದೇ ಲಾಭ ತರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಯುಪಿಎಗಿಂತ ಕಡಿಮೆ ದರ

ರಫೇಲ್ ಒಪ್ಪಂದದಲ್ಲಿ ಯುಪಿಎ ಸರ್ಕಾರ ನೀಡಿದ ದರಕ್ಕಿತ ಕಡಿಮೆ ದರದಲ್ಲಿ ವಿಮಾನ ಖರೀದಿಯಾಗಿದೆ.

ವಿಳಂಬ ಮಾಡಿದ್ದು ಏಕೆ?

ರಫೇಲ್ ಯುದ್ಧ ವಿಮಾನ ಖರೀದಿ ವಾಯುಸೇನೆಯ ಆಧುನೀಕರಣಕ್ಕೆ ಅಗತ್ಯವಾಗಿತ್ತು. ಯುಪಿಎ ಸರ್ಕಾರ ಒಪ್ಪಂದವನ್ನು ಏಕೆ ವಿಳಂಬ ಮಾಡಿತು?

ರಾಹುಲ್ ಗಾಂಧಿ ಟ್ವೀಟ್

ರಫೇಲ್ ಒಪ್ಪಂದದಲ್ಲಿ 'ಕಳ್ಳತನ' ಮಾಡಿರುವುದನ್ನು ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ.

English summary
In a series of tweet Finance minister Arun Jaitley said that UPA delayed the Rafale purchase, much required for improving the combat ability of Indian Air force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X