ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಅಮಿತಾಬ್ ಹೇಳುವಂತೆ ಕೊರೊನಾ ವೈರಸ್ ನೊಣಗಳಿಂದಲೂ ಹರಡುತ್ತಾ?

|
Google Oneindia Kannada News

ನವದೆಹಲಿ, ಮಾರ್ಚ್ 27: ಬಾಲಿವುಡ್ ನಟ ಅಮಿತಾಬ್‌ ಬಚ್ಚನ್ ಕೊರೊನಾ ವೈರಸ್ ಕುರಿತು ಎಚ್ಚರಿಕೆ ನೀಡಿದ್ದಾರೆ.

ಈ ಕೊರೊನಾ ವೈರಸ್ ಮನುಷ್ಯನ ಮಲಮೂತ್ರಗಳಲ್ಲಿ ಕೂಡ ವಾರಗಟ್ಟಲೆ ಆಕ್ಟೀವ್ ಆಗಿರಲಿದೆ ಎಂದು ಕೂಡ ಹೇಳಿದ್ದಾರೆ.

ಚಪ್ಪಾಳೆ ತಟ್ಟಿದರೆ ವೈರಸ್ ಸಾಯುತ್ತದೆ ಎಂದ ಅಮಿತಾಬ್ ಬಚ್ಚನ್ ಟ್ವೀಟ್ ಡಿಲೀಟ್!

ಪ್ರತಿನಿತ್ಯ ನೀವು ಮಲವಿಸರ್ಜನೆ ಮಾಡಿದ ಬಳಿಕ ಟಾಯ್ಲೆಟ್ ಬಾಗಿಲುಗಳನ್ನು ಸರಿಯಾಗಿ ಹಾಕಿ, ಮನೆಯೊಳಗೆ ನೊಣಗಳನ್ನು ಬರಲು ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ವೈರಸ್‌ ದಾಳಿ ಎದುರಿಸಿ ಸುರಕ್ಷಿತವಾಗಿ ಇರೋದು ಹೇಗೆ..? ಈ ಸಂಬಂಧ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಒಂದು ಕವಿತೆ ಬರೆದಿದ್ಧಾರೆ. ಆ ಕವಿತೆಯನ್ನು ಅವರೇ ಹಾಡಿದ್ದಾರೆ.

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

ಅಮಿತಾಬ್‌ ಬಚ್ಚನ್‌ ಅವರ ಈ ವಿನೂತನ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಕೊರೊನಾ ವೈರಸ್‌ ಜಾಗೃತಿಗೆ ಅಮಿತಾಬ್ ಮಾಡಿರುವ ಈ ಪ್ರಯತ್ನ ಶ್ಲಾಘನೀಯವಾಗಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿಯಲು ಈ ಸುದ್ದಿ ಓದಿ...

ಟ್ವಿಟ್ಟರ್‌ನಲ್ಲಿ 2 ನಿಮಿಷಗಳ ವಿಡಿಯೋ

ಟ್ವಿಟ್ಟರ್‌ನಲ್ಲಿ 2 ನಿಮಿಷಗಳ ವಿಡಿಯೋ

ಬಿಗ್‌ಬಿ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 2 ನಿಮಿಷಗಳ ವಿವಿಯೋ ಒಂದನ್ನು ಹಾಕಿ ಪ್ರಧಾನಮಂತ್ರಿಯವರಿಗೆ ಟ್ಯಾಗ್ ಮಾಡಿದ್ದರು. ಮಲಮೂತ್ರಗಳ ಮೇಲೆ ಕುಳಿತಿರುವ ನೊಣಗಳು ಆಹಾರದ ಮೇಲೆ ಕುಳಿತಾಗಲೂ ವೈರಸ್ ಹರಡಬಹುದು ಎಂದು ಆ ವಿಡಿಯೋದ ಮೂಲಕ ಹೇಳಿದ್ದರು.

ದರ್ವಾಜ್ ಬಂದ್‌ ತೋ ಭಿಮಾರಿ ಬಂದ್

ದರ್ವಾಜ್ ಬಂದ್‌ ತೋ ಭಿಮಾರಿ ಬಂದ್

ಯಾರೇ ಬೇಕಾದರೂ ಯಾವಾಗ ಬೇಕಾದರೂ ಟಾಯ್ಲೆಟ್ ಬಳಕೆ ಮಾಡಿ ಆದರೆ ಬಾಗಿಲು ಮಾತ್ರ ಸರಿಯಾಗಿ ಹಾಕಿಕೊಳ್ಳಿ, ಟಾಯ್ಲೆಟ್ ಬಾಗಿಲು ಹಾಕಿದರೆ ರೋಗಕ್ಕೂ ಬಾಗಿಲು ಹಾಕಿದಂತೆ ಎಂದು ಹೇಳಿದ್ದಾರೆ.

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

ಅಧ್ಯಯನ ಏನು ಹೇಳುತ್ತೆ?

ಅಧ್ಯಯನ ಏನು ಹೇಳುತ್ತೆ?

ಜರ್ನಲ್ ಒಂದರ ಅಧ್ಯಯನ ಪ್ರಕಾರ ವೈರಸ್‌ಗೆ ತುತ್ತಾಗಿರುವ ವ್ಯಕ್ತಿಯ ಕಫ ಇನ್ನಿತರೆ ಉಸಿರಾಟದ ಮಾದರಿಗಳನ್ನು ಪರೀಕ್ಷಿಸಿದಾಗ ಎಲ್ಲಕ್ಕಿಂತ ವ್ಯಕ್ತಿಯ ಮಲದಲ್ಲಿ ಈ ವೈರಸ್ ಹೆಚ್ಚು ಹೊತ್ತುಗಳ ಕಾಲ ಇರಲಿದೆ ಎನ್ನುವುದು ತಿಳಿದುಬಂದಿದೆ. ಕೊರೊನಾವೈರಸ್‌ನಿಂದ ವ್ಯಕ್ತಿ ಗುಣವಾದ ಬಳಿಕವೂ ಮಲದಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಶುಚಿತ್ವ ಹಾಗೂ ಸೋಶಿಯಲ್ ಡಿಸ್ಟೆನ್ಸ್ ಅತಿ ಮುಖ್ಯವಾಗಿರಲಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಇದು ಒಂದು ಸೋಂಕು, ನಾನು ಬಚ್ಚನ್ ಅವರ ಟ್ವೀಟ್‌ ನೋಡಿಲ್ಲ, ಆದರೆ ತಾಂತ್ರಿಕವಾಗಿ ನಾನು ಹೇಳುವುದಾದರೆ ಈ ವೈರಸ್ ನೊಣಗಳಿಂದ ಹರಡುವುದಿಲ್ಲ. ಅಷ್ಟೇ ಅಲ್ಲದೆ ಇದು ಸೊಳ್ಳೆಗಳಿಂದ ಕೂಡ ಬರುವಂತಹ ಕಾಯಿಲೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಚೀನಾ ಸಂಶೋಧನೆ ದೃಢಪಡಿಸಿದೆ

ಚೀನಾ ಸಂಶೋಧನೆ ದೃಢಪಡಿಸಿದೆ

ಚೀನಾದ ಹೊಸ ಸಂಶೋಧನೆಯು ನೊಣದಿಂದಲೂ ಕೊರೊನಾ ವೈರಸ್ ಹರಡಬಹುದು ಎಂಬುದನ್ನು ಸಾಬೀತುಪಡಿಸಿದೆ. ಭಾರತ ಸರ್ಕಾರವು ಈ ಮಾಹಿತಿಯನ್ನು ಕೆಲವೇ ದಿನಗಳ ಹಿಂದೆ ದೃಢಪಡಿಸಿಕೊಂಡಿದೆ.

English summary
Amitabh Bachchan tweeted a video where he talks of Chinese experts discovering that that the common housefly, which sits on excreta, can transmit the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X