ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ಕದನ: 18 ದೇಶಗಳ ಟಾಸ್ಕ್ ಫೋರ್ಸ್‌ಗೆ ಮೋದಿ ನಾಯಕ?

|
Google Oneindia Kannada News

ನವದೆಹಲಿ, ಏಪ್ರಿಲ್ 2: ಕೊರೊನಾ ವಿರುದ್ಧ ಹೋರಾಡಲು ವಿಶ್ವದ 18ಕ್ಕೂ ಅಧಿಕ ರಾಷ್ಟ್ರಗಳು ಒಗ್ಗೂಡಿವೆ. ಈ ಒಕ್ಕೂಟದ ನೇತೃತ್ವವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿಕೊಂಡಿದ್ದಾರೆ ಎಂಬ ಟ್ವಿಟ್ಟರ್ ಸಂದೇಶ ಹಂಚಿಕೆಯಾಗುತ್ತಿದೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಯುಎಸ್, ಯುಕೆ ಸೇರಿದಂತೆ ಅಂತಾರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ಇದಕ್ಕೆ ಮೋದಿ ನಾಯಕರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಜೊತೆಗೆ ನರೇಂದ್ರ ಮೋದಿ.ಇನ್ ವೆಬ್ ತಾಣದಲ್ಲಿರುವ ಲೇಖನವೊಂದನ್ನು ಉಲ್ಲೇಖಿಸಲಾಗಿದೆ.

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿFact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

ಆದರೆ ಆ ಲೇಖನದಲ್ಲಿ ವರ್ಚ್ಯುವಲ್ ಜಿ20 ಸಮ್ಮೇಳನದ ಬಗ್ಗೆ ಬರೆಯಲಾಗಿದೆ. ಮಾರ್ಚ್ 26ರಂದು ನಡೆದ ವರ್ಚ್ಯುವಲ್ ಸಮ್ಮೇಳನದಲ್ಲಿ ಕೊವಿಡ್19 ಬಗ್ಗೆ ಜಾಗತಿಕ ನಾಯಕರು ಚರ್ಚಿಸಿದ್ದರ ಬಗ್ಗೆ ಹೇಳಲಾಗಿದೆ.

Fact Check: PM Modi has not been asked by 18 nations to lead a task force to fight COVID-19

ಜಾಗತಿಕವಾಗಿ ಎಲ್ಲಾ ದೇಶದ ನಾಯಕರು ಒಂದಾಗಿ ಕೊವಿಡ್19 ಸಾಂಕ್ರಾಮಿಕ ಪಿಡುಗನ್ನು ಹೊಗಲಾಡಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾದ ಪ್ರಿನ್ಸ್, ಫ್ರಾನ್ಸ್ ಅಧ್ಯಕ್ಷ ಸೇರಿದಂತೆ ವಿವಿಧ ದೇಶಗಳ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ.

ಕೊರೊನಾ ಭೀತಿಯಿಂದ ತುರ್ತು ಪರಿಸ್ಥಿತಿ ಘೋಷಣೆ: ಫೇಕ್ ಎಂದ ಆರ್ಮಿಕೊರೊನಾ ಭೀತಿಯಿಂದ ತುರ್ತು ಪರಿಸ್ಥಿತಿ ಘೋಷಣೆ: ಫೇಕ್ ಎಂದ ಆರ್ಮಿ

ಹಾಗೆ ನೋಡಿದರೆ ಮೋದಿ ಅವರು ಸಾಕಷ್ಟು ದೇಶಗಳ ಮುಖ್ಯಸ್ಥರೊಡನೆ ಕೊವಿಡ್19 ಬಗ್ಗೆ ಚರ್ಚಿಸಿದ್ದಾರೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಜೊತೆಗೆ ಮಾರ್ಚ್ 12ರಂದು, ಮಾರ್ಚ್ 17ರಂದು ಸೌದಿ ಅರೇಬಿಯಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಮಾರ್ಚ್ 25ರಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮಾರ್ಚ್ 26ರಂದು ಅಬುಧಾಬಿಯ ಪ್ರಿನ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಕತಾರಿನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥನಿ, ಯುರೋಪಿಯನ್ ಕಮಿಷನ್ ನ ಅಧ್ಯಕ್ಷ ಉರ್ಸುಲ ವನ್ ಡರ್ ಲೆಯೆನ್ ಹೀಗೆ ಅನೇಕ ಮಂದಿ ಜೊತೆ ಚರ್ಚಿಸಿದ್ದಾರೆ.

ಆದರೆ, ಎಲ್ಲೂ ಕೂಡಾ ಅಂತಾರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚನೆ, ಮೋದಿ ಅವರ ನಾಯಕತ್ವದ ಬಗ್ಗೆ ಚರ್ಚೆಯಾಗಿಲ್ಲ, ಅಂಥ ಟಾಸ್ಕ್ ಫೋರ್ಸ್ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ.

English summary
Several users on Twitter have posted that 18 nations including the USA and UK want Indian Prime Minister Narendra Modi to lead a task force to fight the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X