ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ: ಮೋದಿ ವಿರುದ್ದ ತಿರುಗಿಬಿದ್ದ ಪತ್ನಿ ಜಶೋಧಾ ಬೆನ್, ಸತ್ಯಾಸತ್ಯತೆ

|
Google Oneindia Kannada News

ನವದೆಹಲಿ, ಜ 23: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕಬ್ಬಿಣದ ಕಡಲೆಯಂತಾಗಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದದ ಹೋರಾಟದ ಕಾವು ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

"ಯಾವುದೇ ಕಾರಣಕ್ಕೂ ಮಸೂದೆಯನ್ನು ಹಿಂದಕ್ಕೆ ಪಡೆಯುವುದಿಲ್ಲ" ಎಂದು ಹೇಳಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಈ ಬಗ್ಗೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷಗಳಿಗೆ ಸವಾಲು ಎಸೆದಿದ್ದಾರೆ.

ದೇಶಕ್ಕೆ ಶನಿಗಳಂತೆ ವಕ್ಕರಿಸಿಕೊಂಡಿರುವ ಮೋದಿ, ಅಮಿತ್ ಶಾದೇಶಕ್ಕೆ ಶನಿಗಳಂತೆ ವಕ್ಕರಿಸಿಕೊಂಡಿರುವ ಮೋದಿ, ಅಮಿತ್ ಶಾ

Recommended Video

ಹೋರಾಟಕ್ಕಿಳಿದಿದ್ದಾರಾ ಮೋದಿ ಪತ್ನಿ? ONEINDIA KANNADA

ಈ ನಡುವೆ, "ಸ್ವತಃ ಪ್ರಧಾನಿ ಮೋದಿಯವರ ಪತ್ನಿ ಜಶೋಧ ಬೆನ್, ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದ ತಿರುಗಿಬಿದ್ದು, ಹೋರಾಟಕ್ಕೆ ಇಳಿದಿದ್ದಾರೆ" ಎನ್ನುವ ಸುದ್ದಿ, ಫೋಟೋ ಜೊತೆ, ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Fact Check Modi Wife Protest Against CAA Is, Three Year Old Photo

"ದೆಹಲಿಯ ಶಹೀನಾ ಭಾಗ್​ನಲ್ಲಿ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಮೋದಿ ಪತ್ನಿ ಜಶೋಧಾ ಬೆನ್ ಭಾಗಿ" ಎನ್ನುವ ಒಕ್ಕಣೆಯ ಮೂಲಕ ಹರಿದಾಡಿದ ಪೋಸ್ಟ್, ಸುದ್ದಿವಾಹಿನಿಗಳಲ್ಲಿ ಭರ್ಜರಿ ಚರ್ಚೆಗೆ ಆಹಾರವಾಗಿತ್ತು.

ದೀಪಿಕಾ ಸಿಂಗ್ ರಾವತ್ ಎನ್ನುವವರು ಇದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದು ಸಿಕ್ಕಾಪಟ್ಟೆ ಶೇರ್ ಆಗಿದ್ದವು. ಇದರ ಸತ್ಯಾಸತ್ಯತೆಯ ಏನಿರಬಹುದು ಎಂದು ಫಾಸ್ಟ್ ಚೆಕ್ ಮಾಡಿದಾಗ ಇದೊಂದು ಹಳೆಯ ಪೋಸ್ಟ್ ಎನ್ನುವುದು ಬಹಿರಂಗವಾಗಿದೆ.

ಮುಂಬೈನಲ್ಲಿ ಮೂರು ವರ್ಷದ ಹಿಂದೆ ನಡೆದ ಪ್ರತಿಭಟನೆಯ ಫೋಟೋ ಇದಾಗಿದೆ. ಮುಂಬೈನಲ್ಲಿರುವ ಸ್ಲಂಗಳನ್ನು ತೆರೆವುಗೊಳಿಸಲು ಮುಂದಾಗಿದ್ದ ಅಂದಿನ ಸರಕಾರದ ವಿರುದ್ದ ಜಶೋಧಾ ಬೆನ್ ಸ್ಥಳೀಯರ ಜೊತೆಗೆ ಒಟ್ಟಾಗಿ ಪ್ರತಿಭಟನೆ ನಡೆಸಿದ ಫೋಟೋವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಲಲಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

English summary
Fact Check: Prime Minister Narendra Modi Wife Jasodaben Protest Against CAA Is, Three Year Old Photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X