ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

|
Google Oneindia Kannada News

ಬೆಂಗಳೂರು, ಮಾರ್ಚ್ 24: ಕೊರೊನಾವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹತ್ತು ಹಲವು ಭೀತಿ ಹುಟ್ಟಿಸುವ ಪೋಸ್ಟ್ ಗಳು ವಾಟ್ಸಾಪ್, ಫೇಸ್ಬುಕ್ ಮೂಲಕ ಹರಿದಾಡುತ್ತಿವೆ.

Recommended Video

ಜನರ ನಿರ್ಲಕ್ಷ್ಯಕ್ಕೆ ವೈದ್ಯರು ಏನ್ ಹೇಳಿದ್ದಾರೆ ನೋಡಿ

ಈ ಪೈಕಿ ಬಿಸಿನೀರು ಕುಡಿಯಿರಿ, ನಿರಂತರ ನೀರು ಕುಡಿಯುತ್ತಿರಿ ಎಂಬ ಪೋಸ್ಟ್ ಹೆಚ್ಚು ಜನಪ್ರಿಯವಾಗುತ್ತಿದೆ. ನೀರು ಕುಡಿದರೆ ಗಂಟಲಲ್ಲಿರುವ ಕೊರೊನಾವೈರಸ್ ಸೂಸೈಡ್ ಮಾಡಿಕೊಳ್ಳುತ್ತದೆ ಎಂಬ ಸಂದೇಶಗಳು ಹರಡುತ್ತಿವೆ. ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಉತ್ತರ.

A moist throat does not prevent or kill coronavirus

ಸದ್ಯಕ್ಕೆ ಮಹಾಮಾರಿ ಕೊರೊನಾವೈರಸ್ ಸೊಂಕು ತಡೆಗಟ್ಟುವುದೊಂದೆ ಪರಿಹಾರವಾಗಿದೆ. ಸಾಮಾಜಿಕ ದೂರ ಸಾಧಿಸುವುದು, ಕೈ ತೊಳೆದುಕೊಳ್ಳುವುದು, ಆರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮಾತ್ರ ಪರಿಣಾಮಕಾರಿಯಾಗಿದೆ. ಆದರೆ, ನೀರು ಕುಡಿಯುವುದರಿಂದ ವೈರಸ್ ಸಾಯುವುದಿಲ್ಲ.

ಕೊರೊನಾ ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 43 ಸಾವಿರ ಜನ: ಪೊಲೀಸರಿಂದ ವಿಳಾಸ ಪತ್ತೆಕೊರೊನಾ ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 43 ಸಾವಿರ ಜನ: ಪೊಲೀಸರಿಂದ ವಿಳಾಸ ಪತ್ತೆ

ಇಷ್ಟಕ್ಕೂ ಸುಳ್ಳು ಸುದ್ದಿಯಲ್ಲೇನಿದೆ: "ಕೊವಿಡ್19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಪಾನ್ ವೈದ್ಯರು ಹೀಗೆ ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯದ ಗಂಟಲು ಆರ್ದ್ರತೆಯಿಂದ ಕೂಡಿ, ಒಣಗದಂತೆ ನೋಡಿಕೊಳ್ಳುವುದು ಮುಖ್ಯ. ಪ್ರತಿ 15 ನಿಮಿಷಕ್ಕೊಮ್ಮೆ ನೀರು ಕುಡಿಯುವುದರಿಂದ ಏನು ಹಾನಿಯಿಲ್ಲ. ನಿಮ್ಮ ದೇಹದೊಳಗೆ ವೈರಸ್ ಹೊಕ್ಕಿದ್ದರೆ, ಗಂಟಲಲ್ಲಿ ಒಂದಷ್ಟು ದಿನ ಉಳಿದುಕೊಳ್ಳಲಿದೆ. ಆ ಸಂದರ್ಭದಲ್ಲಿ ಗಂಟಲು ಬೇನೆ ಬರಬಹುದು. ಆಗ ಹೆಚ್ಚು ನೀರು ಕುಡಿಯಿರಿ, ಬಿಸಿ ನೀರು ಕುಡಿದರೆ ವೈರಸ್ ನಿಮ್ಮ ಹೊಟ್ಟೆ ಸೇರಿ ಸಾಯುತ್ತದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ತಲುಪಿಸಿ" ಎಂದು ಹೇಳಲಾಗಿತ್ತು.

Fact Check: Drinking water does not kill coronavirus

ಆದರೆ, ಸತ್ಯ ಸಂಗತಿಯೆಂದರೆ ಜಪಾನ್ ಆಗಲಿ, ಚೀನಿ ವೈದ್ಯರಾಗಲಿ ಕುಡಿಯುವ ನೀರಿನಿಂದ ಕೊರೊನಾವೈರಸ್ ಸಾಯುವುದಿಲ್ಲ. ವೈರಸ್ ತಡೆಗಟ್ಟಲು ಸಾಬೂನಿನಿಂದ ಕೈ ತೊಳೆದುಕೊಳ್ಳುವುದು, ಶ್ವಾಸಕೋಶ ಶುದ್ಧಿ, ಕೈ ಬಾಯಿ ಸ್ವಚ್ಛವಾಗಿಟ್ಟುಕೊಳ್ಳುವುದು, ಸೋಷಿಯಲ್ ಡಿಸ್ಟೆನ್ಸ್ ಮಾತ್ರ ಪರಿಣಾಮಕಾರಿ ಎಂದು ವೈದ್ಯರು ಹೇಳಿದ್ದಾರೆ. ಶೀತ, ಜ್ವರ, ಗಂಟಲುಬೇನೆ, ತಲೆನೋವು ಬಂದರೆ ತಪ್ಪದೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳಿ. ಸಾಮಾಜಿಕ ಜಾಲ ತಾಣದಿಂದ ಬರುವ ಪುಕ್ಕಟೆ ಸಲಹೆಗಳನ್ನು ಸುಲಭವಾಗಿ ನಂಬದಿರಿ.

English summary
Fact Check: There is a post being widely circulated on the social media that says drinking water will prevent coronavirus. A moist throat does not prevent or kill coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X