ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈಲ್ವೆ ಇಲಾಖೆ ಸಿಬ್ಬಂದಿಗೆ ವೇತನ ನೀಡಲಾಗುತ್ತಿಲ್ಲವೇ?

|
Google Oneindia Kannada News

ಬೆಂಗಳೂರು, ಆಗಸ್ಟ್.23: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಸಾರ್ವಜನಿಕ ರೈಲ್ವೆ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಸರಕು ಸಾಗಣೆ ರೈಲುಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಾಮಾನ್ಯ ರೈಲುಗಳ ಸಂಚಾರಕ್ಕೆ ಅನುಮತಿಯಿಲ್ಲ.

ರೈಲ್ವೆ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ರೈಲ್ವೆ ಸಿಬ್ಬಂದಿ ವೇತನ ಹಾಗೂ ರೈಲ್ವೆ ಇಲಾಖೆಯ ನಿವೃತ್ತ ಸಿಬ್ಬಂದಿಯ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ಆದರೆ ಇದೊಂದು ಶುದ್ಧ ಸುಳ್ಳುಸುದ್ದಿ ಎಂದು ಪತ್ರಿಕಾ ಮಾಹಿತಿ ಕಚೇರಿ (ಪಿಐಬಿ) ಸ್ಪಷ್ಟಪಡಿಸಿದೆ.

Fact Check: ಕೇಂದ್ರದಿಂದ 3 ಸಾವಿರ ಭಿಕ್ಷುಕರಿಗೆ ರೈಲಿನಲ್ಲಿ ಹಾಡುವ ತರಬೇತಿ?Fact Check: ಕೇಂದ್ರದಿಂದ 3 ಸಾವಿರ ಭಿಕ್ಷುಕರಿಗೆ ರೈಲಿನಲ್ಲಿ ಹಾಡುವ ತರಬೇತಿ?

ಭಾರತ ಲಾಕ್ ಡೌನ್ ನಿಂದಾಗಿ ರೈಲ್ವೆ ಇಲಾಖೆಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಸಿಬ್ಬಂದಿಗೆ ವೇತನ ನೀಡುವಷ್ಟು ಹಣವಿಲ್ಲ. 2020-21ನೇ ಸಾಲಿನಲ್ಲಿ 13 ಲಕ್ಷ ಸಿಬ್ಬಂದಿಗೆ ವೇತನ ಮತ್ತು 15 ಲಕ್ಷ ಸಿಬ್ಬಂದಿಗೆ ಪಿಂಚಣಿ ನೀಡುವುದಕ್ಕೆ 53000 ಕೋಟಿ ಹಣ ಬೇಕಾಗುತ್ತದೆ. ಈ ಹಿನ್ನೆಲೆ ಹಣಕಾಸು ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ.

Fact check: Does The Railway Department Plan To Curb Staff Pay And Pensions By 2020-21?.

ಭಾರತೀಯ ರೈಲ್ವೆ ಸಿಬ್ಬಂದಿ ವೇತನ ನಿಲ್ಲಿಸಿಲ್ಲ:

2020-21ನೇ ಆರ್ಥಿಕ ಸಾಲಿನಲ್ಲಿ ಭಾರತ ಲಾಕ್ ಡೌನ್ ನಡುವೆಯೂ ರೈಲ್ವೆ ಇಲಾಖೆಯ ಯಾವುದೇ ಸಿಬ್ಬಂದಿಯ ವೇತನವನ್ನು ತಡೆ ಹಿಡಿದಿಲ್ಲ. ನಿವೃತ್ತ ಸಿಬ್ಬಂದಿಗೂ ಸರಿಯಾಗಿ ಪಿಂಚಣಿ ನೀಡಲಾಗುತ್ತಿದೆ. ಆದರೆ ಸಿಬ್ಬಂದಿಗೆ ನೀಡುವ ವೇತನದಲ್ಲಿ ಸ್ವಲ್ಪ ಪ್ರಮಾಣ ಕಡಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಆರ್ಥಿಕ ಹೊರೆ ತಗ್ಗಿಸಲು ತೆಗೆದುಕೊಂಡ ಕ್ರಮಗಳು:

- 30,000 ಲಿಂಕೆ ಹೊಗ್ಮನ್ ಬಸ್ಜ್ ರೈಲ್ವೆ ಬೋಗಿಗಳಲ್ಲಿ ಡಸ್ಟ್ ಬಿನ್ ಗಳನ್ನು ಬದಲಾಯಿಸುವುದನ್ನು ಕೈ ಬಿಡಲಾಗಿದೆ. ಇದರಿಂದ ರೈಲ್ವೆ ಇಲಾಖೆಗೆ 60 ಕೋಟಿ ರೂಪಾಯಿ ಉಳಿತಾಯವಾಗಲಿದೆ. 30,000 ಬೋಗಿಗಳ ಬದಲು ಮಾಡರ್ನ್ ಕೋಚ್ ಫ್ಯಾಕ್ಟರಿಯಿಂದ 5,000 ರೈಲ್ವೆ ಬೋಗಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ 1.78 ಲಕ್ಷ ಉಳಿತಾಯವಾಗಲಿದೆ.

- ಪ್ರತಿಯೊಂದು ರೈಲಿನಲ್ಲಿ ಎಸಿ ನಿಯಂತ್ರಣ, ಸ್ವಚ್ಛತೆ ಮತ್ತು ನಿರ್ವಹಣೆಗೆ 15 ಸಿಬ್ಬಂದಿ ಬದಲು 11 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

- ಯಾವುದೇ ಹೊಸ ಪೋಸ್ಟ್ ಗಳನ್ನು ರಚಿಸಲಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ತೆರವುಗೊಂಡಿರುವ ಹುದ್ದೆಗಳಿಗೂ ಸಿಬ್ಬಂದಿ ನೇಮಿಸಿಕೊಂಡಿಲ್ಲ.

- ಬ್ರಿಟಿಷ್ ಕಾಲದಲ್ಲಿ ಚಾಲ್ತಿಯಲ್ಲಿದ್ದ ವೈಯಕ್ತಿಕ ಡಾಕ್ ಮೆಸೆಂಜರ್ ಗಳ ಮೂಲಕ ಗೌಪ್ಯ ದಾಖಲೆಗಳ ಕಳುಹಿಸುವ ಅಭ್ಯಾಸವನ್ನು ರದ್ದುಗೊಳಿಸಲಾಗಿದ್ದು, ಆನ್ ಲೈನ್ ಮೂಲಕ ಸಂವಹನ ನಡೆಸಲಾಗುತ್ತಿದೆ.

- ದೇಶದಲ್ಲಿ ಸಾಮಾನ್ಯವಾಗಿ ರೈಲ್ವೆ ಸಂಚಾರವು ಪುನಾರಂಭವಾಗಿಲ್ಲ, ಕಳೆದ ಮೇ ತಿಂಗಳಿನಲ್ಲಿ ಶ್ರಮಿಕ್ ರೈಲ್ವೆ ಸಂಚಾರಕ್ಕಷ್ಟೇ ಅನುಮತಿಸಲಾಗಿದೆ.

English summary
Fact check: Does The Railway Department Plan To Curb Staff Pay And Pensions By 2020-21?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X