ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಾಸಿವೆ ಎಣ್ಣೆ ಮೂಗಿನೊಳಗೆ, ಕೊರನಾ ಹೊರಗೆ?

|
Google Oneindia Kannada News

ನವದೆಹಲಿ, ಮೇ 28: ಸಾಸಿವೆ ಎಣ್ಣೆ ಬಳಕೆಯಿಂದ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸಬಹುದು ಎಂಬ ಸುದ್ದಿಯನ್ನು ನಂಬಬಹುದು. ಆದರೆ, ಇದರ ಜೊತೆಗೆ ಸಾಸಿವೆ ಎಣ್ಣೆಯನ್ನು ಬಳಸಿ ಕೊರೊನಾವೈರಸ್ ಕೊಲ್ಲಬಹುದು, ಕೊವಿಡ್19ರಿಂದ ಮುಕ್ತಿ ಪಡೆಯಬಹುದು ಎಂಬ ಸುಳ್ಳು ಸುದ್ದಿಗಳು ವಾಟ್ಸಾಪ್ ನಲ್ಲಿ ಹಬ್ಬುತ್ತಿವೆ. ಆದರೆ ಇದೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಗಳನ್ನು ಸಾಸಿವೆ ಎಣ್ಣೆ ಕೊಲ್ಲಬಹುದೇ ಹೊರತೂ ಕೊರೊನಾವೈರಸ್ ಆಗಲಿ ಯಾವುದೇ ವೈರಸ್ ಆಗಲಿ ಕೊಲ್ಲಲು ಸಾಧ್ಯವಿಲ್ಲ ಎಂದು ಆಹಾರ ತಜ್ಞೆ ಕಿರಣ್ ಕೆ ಹೇಳಿದ್ದಾರೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಏನೆಂದು ಸುದ್ದಿ ಹಬ್ಬಿದೆ?: ಸಾಸಿವೆ ಎಣ್ಣೆಯನ್ನು ಮೂಗಿನೊಳಗೆ ಬಿಟ್ಟುಕೊಂಡರೆ ಸಾಕು, ಮೂಗು, ಗಂಟಲಲ್ಲಿ ಸಿಲುಕಿರುವ ವೈರಸ್ ಹೊಟ್ಟೆ ಸೇರುತ್ತದೆ. ಹೊಟ್ಟೆಯಲ್ಲಿ ಕೊರೊನಾವೈರಸ್ ನಾಶವಾಗುತ್ತದೆ. ಇದಕ್ಕೆ ಕರುಳಿನಲ್ಲಿ ಉತ್ಪತ್ತಿಯಾಗುವ ಆಮ್ಲ, ಜೀವರಸಗಳು ವೈರಸ್ ಕೊಲ್ಲಲು ಸಾಸಿವೆ ಎಣ್ಣೆ ನೆರವಾಗುತ್ತದೆ ಎಂದೆಲ್ಲ ಸುದ್ದಿ ಹಬ್ಬಿಸಲಾಗಿದೆ.

Fact check: Does putting mustard oil into the nose kill coronavirus

Fact Check: ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು, ಅರಿಶಿನ ರಾಮಬಾಣವೇ? Fact Check: ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು, ಅರಿಶಿನ ರಾಮಬಾಣವೇ?

ಸತ್ಯಾಸತ್ಯತೆ: ಮೊದಲೆ ಹೇಳಿದಂತೆ, ಗಂಟಲಲ್ಲಿ ವೈರಸ್ ಸಿಲುಕಿಕೊಳ್ಳುವುದು ನಂಬಿಕೆಗೆ ದೂರವಾಗಿದೆ. ಸಾಸಿವೆ ಅಲ್ಲದೇ ಬೇರೆ ಯಾವುದೇ ಎಣ್ಣೆ ಮೂಗಿಗೆ ಹಾಕಿಕೊಳ್ಳುವ ಅಪಾಯಕಾರಿ. ಇದರಿಂದ ವೈರಸ್ ಸಾಯುವುದಿಲ್ಲ ಅಥವಾ ವೈರಸ್ ನಿಂದ ಪ್ರತಿರೋಧಕ ಶಕ್ತಿ ನಿಮಗೆ ನೀಡುವುದಿಲ್ಲ. ಸಾಸಿವೆ ಎಣ್ಣೆಯಲ್ಲಿ Anti ಬ್ಯಾಕ್ಟಿರಿಯಾ ಅಂಶಗಳಿವೆ ಹೊರತೂ Anti ವೈರಲ್ ಕಣಗಳಿಲ್ಲ. ಹೀಗಾಗಿ, ಇಂಥ ಸುದ್ದಿಯನ್ನು ನಂಬುವುದು ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?

ಕೊರೊನಾ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ. ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

English summary
There is a message that has been circulating on social media that applying mustard oil to one's nostrils can kill the virus in a person's stomach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X