ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಜರ್ಮನಿಯಲ್ಲಿ ಮೂರು ಕಣ್ಣಿನ ಮಗು ಜನನ!

|
Google Oneindia Kannada News

ದೆಹಲಿ, ಜುಲೈ 20: ಮೂರು ಕಣ್ಣುಗಳುಳ್ಳ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗುವಿಗೆ ಎಲ್ಲ ಮನುಷ್ಯರಂತೆ ಎರಡು ಕಣ್ಣು ಹಾಗೂ ಹಣೆಯ ಮೇಲೆ ಮೂರನೇ ಕಣ್ಣಿದೆ.

ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ನಿಜಕ್ಕೂ ಮನುಷ್ಯನಿಗೆ ಮೂರು ಕಣ್ಣು ಇರಲು ಸಾಧ್ಯನಾ? ಅದ್ಭುತ ಎನ್ನುವಂತೆ ಆ ಮಗುವಿಗೆ ಮೂರು ಕಣ್ಣು ಇರಬಹುದಾ ಎಂಬ ಚರ್ಚೆಗಳು ಹುಟ್ಟಿಕೊಂಡಿದೆ.

ಸೊಳ್ಳೆಯಿಂದ ಕೊರೊನಾವೈರಸ್ ಹರಡುತ್ತಾ? ಉತ್ತರ ಇಲ್ಲಿದೆಸೊಳ್ಳೆಯಿಂದ ಕೊರೊನಾವೈರಸ್ ಹರಡುತ್ತಾ? ಉತ್ತರ ಇಲ್ಲಿದೆ

ಜರ್ಮನಿಯಲ್ಲಿ ಈ ಮಗು ಹುಟ್ಟಿದ್ದು, ಈ ಮಗು ಮೂರನೇ ಕಣ್ಣು ಹೊಂದಿದೆ ಎಂದು ನಂಬಲಾಗಿದೆ. ಇದಕ್ಕೂ ಇದು ಆಧುನಿಕ ಕಾಲದ ಅಧ್ಬುತವೇ ಸರಿ ಎಂದು ಬಿಂಬಿಸಲಾಗಿದೆ. ಈ ವಿಡಿಯೋ ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

Fact Check: Did Three Eyed Baby Born In Germany?

ಆದರೆ, ಈ ವಿಡಿಯೋ ಅಸಲಿನಾ ಅಥವಾ ನಕಲಿನಾ ಎಂದು ಸುದ್ದಿ ಸಂಸ್ಥೆಯೊಂದು ಪರಿಶೀಲಿಸಿದಾಗ ಇದು ನಕಲಿ ಎಂದು ತಿಳಿದಿದೆ. ಫೋಟೋಶಾಪ್ ಮೂಲಕ ಈ ವಿಡಿಯೋ ಎಡಿಟ್ ಮಾಡಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಮಗುವಿನ ಎಡ ಭಾಗದ ಕಣ್ಣನ್ನು ಹಣೆಯ ಮೇಲೆ ಸೂಪರ್ ಇಂಫೋಸ್ ಮಾಡಿ ಎಡಿಟ್ ಮಾಡಲಾಗಿದೆ ಎಂದು ಹೇಳಿದೆ.

17ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಜ್ಯೋತಿಷಿಯೊಬ್ಬರು ಮೂರು ಕಣ್ಣುಗಳ ಮಗು ವಿದೇಶದಲ್ಲಿ ಜನಿಸುತ್ತದೆ ಎಂದು ಭವಿಷ್ಯ ಹೇಳಿದ್ದರಂತೆ. ಅದು ನಿಜವಾಗಿರಬಹುದು ಎಂದು ಅನೇಕರು ಚರ್ಚೆ ಮಾಡ್ತಿದ್ದಾರೆ. ಆದರೆ, ಇದು ನಕಲಿ ಎಂದು ಸಾಬೀತಾಗಿದೆ.

English summary
Fact Check: Video of Three Eyed miracle baby goes viral. but, its not true. it's edited video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X