• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?

|

ನವದೆಹಲಿ, ಫೆಬ್ರವರಿ 7: ಕೊರೊನಾ ವೈರಸ್ ದಾಳಿಯಿಂದ ತತ್ತರಿಸಿರುವ ಚೀನಾ, ಸೋಂಕು ಪೀಡಿತರಿಗೆ ಚಿಕಿತ್ಸೆ ಹಾಗೂ ಆಶ್ರಯ ಕಲ್ಪಿಸಲು ಸಾಧ್ಯವಾಗದೆ ಸುಮಾರು 20,000 ಸಾವಿರ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವೆಬ್‌ಸೈಟ್‌ ಒಂದು ಅಧಿಕೃತ ಮಾಹಿತಿಗಳಿಲ್ಲದೆ ಪ್ರಕಟಿಸಿದ ಈ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನೇ ಬಂಡವಾಳವನ್ನಾಗಿಸಿಕೊಂಡ ದೃಶ್ಯ ಮಾಧ್ಯಮಗಳು 'ನರಮೇಧ'ದ ಪರಿಕಲ್ಪನೆಯಲ್ಲಿ ಪುಂಖಾನುಪುಂಖವಾಗಿ ವರದಿಗಳನ್ನು ಬಿತ್ತರಿಸುತ್ತಿವೆ.

ಆದರೆ ಈ ಸುದ್ದಿ ಸತ್ಯವೇ? ದೇಶವೊಂದು ವೈರಸ್‌ಗೆ ಹೆದರಿ ತನ್ನ ಪ್ರಜೆಗಳಿಗೆ ಚಿಕಿತ್ಸೆ ಕೊಡಿಸದೆಯೇ ಹೀಗೆ ಕೊಲೆ ಮಾಡುವ ಕೃತ್ಯಕ್ಕೆ ಇಳಿಯಲಿದೆಯೇ ಎಂಬುದನ್ನು ಅನೇಕರು ಚಿಂತಿಸುವ ಗೋಜಿಗೂ ಹೋಗದೆ ಹಂಚಿಕೊಳ್ಳುತ್ತಿದ್ದಾರೆ. ಚೀನಾ ಕೊರೊನಾ ವೈರಸ್ ಚಿಕಿತ್ಸೆಗಾಗಿ ಹತ್ತೇ ಹತ್ತು ದಿನಗಳಲ್ಲಿ ಆಸ್ಪತ್ರೆ ನಿರ್ಮಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

ನರಮೇಧದ ವದಂತಿ ಹಬ್ಬಲು ಕಾರಣವಾಗಿದ್ದು 'ಎಬಿ-ಟಿಸಿ' ಅಥವಾ 'ಸಿಟಿ ನ್ಯೂಸ್' ಎಂಬ ಹೆಸರಿನ ವೆಬ್‌ಸೈಟ್. ಕೊರೊನಾ ವೈರಸ್ ಸೋಂಕು ಇನ್ನಷ್ಟು ವ್ಯಾಪಿಸದಂತೆ ನಿಯಂತ್ರಿಸಲು ಸುಮಾರು 20,000 ಕೊರೊನಾ ವೈರಸ್ ರೋಗಿಗಳನ್ನು ಹತ್ಯೆ ಮಾಡಲು ಚೀನಾ ಸರ್ಕಾರ ಅಲ್ಲಿನ ಸುಪ್ರೀಂಕೋರ್ಟ್ ಅನುಮತಿ ಕೋರಿದೆ ಎಂದು 'ಎಬಿ-ಟಿಸಿ' ವೆಬ್‌ಸೈಟ್ ಲೇಖನವೊಂದು ಹೇಳಿತ್ತು.

ಸಾಮೂಹಿಕ ಹತ್ಯೆಗೆ ಅನುಮತಿ ಕೋರಿಕೆ

ಸಾಮೂಹಿಕ ಹತ್ಯೆಗೆ ಅನುಮತಿ ಕೋರಿಕೆ

ಮಾರಕ ಕಾಯಿಲೆಯಿಂದ ತಮ್ಮ ಆರೋಗ್ಯ ಸೇವಕರನ್ನು ರಕ್ಷಿಸಲು ಚೀನಾ ಅಧಿಕಾರಿಗಳು ಈ ರೋಗಿಗಳನ್ನು ಸಾಯಿಸಲು ಉದ್ದೇಶಿಸಿದೆ ಎಂದು ವೆಬ್‌ಸೈಟ್ ಪ್ರಕಟಿಸಿತ್ತು.

ಈ ಲೇಖನವು ತನ್ನ ಮೊದಲ ಸಾಲಿನಲ್ಲಿ 'ಚೀನಾ'ವನ್ನು 'ಛೀನಾ' (Chhina) ಎಂದು ಕರೆದಿದೆ. 'ಛೀನಾದಲ್ಲಿನ ಅತ್ಯುನ್ನತ ಮಟ್ಟದ ನ್ಯಾಯಾಲಯ, ಸುಪ್ರೀಂ ಪೀಪಲ್ಸ್ ಕೋರ್ಟ್, ಮಾರಕ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೊರೊನಾ ವೈರಸ್‌ ಪೀಡಿತರ ಸಾಮೂಹಿಕ ಹತ್ಯೆಗೆ ಶುಕ್ರವಾರ ಅನುಮತಿ ನೀಡುವ ನಿರೀಕ್ಷೆಯಿದೆ' ಎಂದು ಲೇಖನದಲ್ಲಿ ಹೇಳಲಾಗಿದೆ.

ಜನಸಂಖ್ಯೆಯನ್ನೇ ಕಳೆದುಕೊಳ್ಳುತ್ತದೆ

ಜನಸಂಖ್ಯೆಯನ್ನೇ ಕಳೆದುಕೊಳ್ಳುತ್ತದೆ

ಚೀನಾ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ ಎನ್ನಲಾದ ದಾಖಲೆಯೊಂದನ್ನೂ ಅದು ಹಂಚಿಕೊಂಡಿದೆ. 'ವೈರಸ್ ವಿರುದ್ಧದ ಹೋರಾಟ ಫಲಪ್ರದವಾಗುವ ಭರವಸೆಗಳು ಕಾಣದೆ ಇರುವುದರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಕೋಟ್ಯಂತರ ಜನರ ಜೀವ ಉಳಿಸಲು ಕೆಲವು ವೈರಸ್ ಪೀಡಿತರು ತಮ್ಮ ಜೀವವನ್ನು ತ್ಯಾಗ ಮಾಡದೆ ಇದ್ದರೆ ಚೀನಾ ತನ್ನ ಸಂಪೂರ್ಣ ಜನಸಂಖ್ಯೆಯನ್ನು ಕಳೆದುಕೊಳ್ಳಬಹುದು' ಎಂದು ದಾಖಲೆಯಲ್ಲಿ ಹೇಳಲಾಗಿದೆ ಎಂಬುದಾಗಿ ವರದಿಯಾಗಿದೆ.

ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?

ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ

ಯಾವ ಮಾಧ್ಯಮದಲ್ಲಿಯೂ ಬಂದಿಲ್ಲ

ಈ ವರದಿಯ ಬರಹಗಾರನ ಹೆಸರಿಲ್ಲ. ಸ್ಥಳೀಯ ಬಾತ್ಮೀದಾರನಿಂದ ಎಂದು ಪ್ರಕಟಿಸಲಾಗಿದೆ. ವೈರಸ್ ಪೀಡಿತರಿಂದ ಸೋಂಕು ಇನ್ನಷ್ಟು ಹರಡುವುದನ್ನು ತಡೆಯಲು 20,000 ಕೊರೊನಾ ವೈರಸ್ ಸೋಂಕಿತರನ್ನು ಕೊಲ್ಲಲು ಚೀನಾ ಸರ್ಕಾರ ಸುಪ್ರೀಂಕೋರ್ಟ್ ಅನುಮತಿ ಕೋರಿದೆ ಎಂಬುದನ್ನು ಜಗತ್ತಿನ ಯಾವುದೇ ವಿಶ್ವಸನೀಯ ಮಾಧ್ಯಮಗಳು ವರದಿ ಮಾಡಿಲ್ಲ.

ವೆಬ್‌ಸೈಟ್‌ನ ಮೂಲವೇ ತಿಳಿಯುವುದಿಲ್ಲ

ವೆಬ್‌ಸೈಟ್‌ನ ಮೂಲವೇ ತಿಳಿಯುವುದಿಲ್ಲ

ಈ ವೆಬ್‌ಸೈಟ್‌ನಲ್ಲಿ ಅದರ ಮೂಲ, ಹಿನ್ನೆಲೆ ಇತ್ಯಾದಿ ಯಾವುದೇ ವಿವರಗಳಿಲ್ಲ. ಹಾಗೆಯೇ ವರದಿಯ ಅಧಿಕೃತತೆಯನ್ನು ತಿಳಿಸುವ ಅಂಶಗಳೂ ಇಲ್ಲ. ಇದನ್ನು ಯಾರು ನಡೆಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇಲ್ಲ. ಈ ವೆಬ್‌ಸೈಟ್‌ನಲ್ಲಿ ಅನೇಕ ಸುದ್ದಿಗಳಿದ್ದು, ಅವುಗಳಲ್ಲಿ ಹೆಚ್ಚಿನವು ಕಪೋಲಕಲ್ಪಿತ ವರದಿಗಳಾಗಿವೆ. ಆದರೆ ಜನರು ಇದರ ಸತ್ಯಾಸತ್ಯತೆಗಳನ್ನು ಅರಿಯುವ ಗೋಜಿಗೆ ಹೋಗದೆ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಸೂಚನೆ ಮೀರಿ ಚೀನಾಕ್ಕೆ ಹೋದರೆ ಭಾರತೀಯರಿಗೂ ಹಿಂದಿರುಗಲು ಅವಕಾಶವಿಲ್ಲ!

English summary
An article published in a website saying China seek Supreme Court approval to kill over 20,000 coronavirus patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X