• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಹತ್ಯೆಗೆ ಮುಂದಾಗಿದ್ದವನ ಜೀವ ಉಳಿಸಿದ ಫೇಸ್‌ಬುಕ್ ಸಿಬ್ಬಂದಿ: ಹೀಗೊಂದು ರೋಮಾಂಚಕ ಘಟನೆ

|

ರೋಚಕ ಘಟನೆ: ಆತ್ಮಹತ್ಯೆಗೆ ಮುಂದಾಗಿದ್ದವನನ್ನು ಉಳಿಸಿದ ಫೇಸ್‌ಬುಕ್ ಸಿಬ್ಬಂದಿ

ದೆಹಲಿ, ಆಗಸ್ಟ್ 10: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ದೂರದ ಐರ್ಲೆಂಡ್‌ ಮೂಲದ ಫೇಸ್‌ಬುಕ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೆಹಲಿ ಪೊಲೀಸರು ಉಳಿಸಿದ ಕುತೂಹಲಕಾರಿ ಘಟನೆ ನಡೆದಿದೆ.

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ 27 ವರ್ಷದ ವ್ಯಕ್ತಿ, ಆತ್ಮಹತ್ಯೆಗೆ ಮುಂದಾಗುವ ಚಟುವಟಿಕೆಗಳಲ್ಲಿ ತೊಡಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಇದನ್ನು ಅರಿತುಕೊಂಡ ಫೇಸ್ ಬುಕ್ ಉದ್ಯೋಗಿಯೊಬ್ಬರು ಅವರ ಜೀವ ಉಳಿಸಿದ್ದಾರೆ.

ಶಿವಮೊಗ್ಗ: ಮಧ್ಯರಾತ್ರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು

ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ. ಅದರಲ್ಲಿ ಆತ ತನ್ನ ಜೀವವನ್ನು ಅಂತ್ಯಗೊಳಿಸಲು ಹೊರಟಿರುವುದನ್ನು ಸ್ಪಷ್ಟವಾಗಿ ತಿಳಿಸಿತ್ತು. ಇದು ಫೇಸ್‌ಬುಕ್‌ನ ಸಿಬ್ಬಂದಿಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಒಂದು ವೇಳೆ ಆ ವ್ಯಕ್ತಿಯನ್ನು ನೇರವಾಗಿ ಸಂಪರ್ಕಿಸಿದರೆ ಆತ ಕೂಡಲೇ ಜೀವ ತೆಗೆದುಕೊಳ್ಳುವ ಸಂಭವ ಇದೆ ಎಂಬುದನ್ನು ಅರಿತ ಫೇಸ್ ಬುಕ್, ಆ ರೀತಿ ಕ್ರಮ ತೆಗೆದುಕೊಳ್ಳಲು ಹಿಂಜರಿದಿತ್ತು. ಮುಂದೆ ಓದಿ.

ಪೊಲೀಸರ ಹುಡುಕಾಟ

ಪೊಲೀಸರ ಹುಡುಕಾಟ

ಆ ವ್ಯಕ್ತಿಯ ಫೇಸ್ ಬುಕ್ ಖಾತೆ ಸೃಷ್ಟಿಸಿದ ಮೊಬೈಲ್ ಸಂಖ್ಯೆಯು ದೆಹಲಿಯಲ್ಲಿ ನೋಂದಣಿಯಾಗಿದ್ದರಿಂದ ಫೇಸ್ ಬುಕ್ ಕಂಪೆನಿಯ ಉದ್ಯೋಗಿಯೊಬ್ಬರು ದೆಹಲಿಯ ಉಪ ಪೊಲೀಸ್ ಆಯುಕ್ತ (ಸೈಬರ್) ಆನ್ಯೇಶ್ ರಾಯ್ ಅವರನ್ನು ಸಂಪರ್ಕಸಿ ಮಾಹಿತಿ ನೀಡಿದರು.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ರಾಯ್ ಅವರ ಅಧಿಕೃತ ಇ-ಮೇಲ್ ವಿಳಾಸಕ್ಕೆ ಫೇಸ್ ಬುಕ್ ತಂಡ ಆ ವ್ಯಕ್ತಿಯ ಆತ್ಮಹತ್ಯೆ ಚಟುವಟಿಕೆಗಳ ವಿವರಗಳನ್ನು ಕಳುಹಿಸಿತು. ಕೂಡಲೇ ಆ ವ್ಯಕ್ತಿಯನ್ನು ಹುಡುಕಾಡುವ ರೇಸ್ ಶುರುವಾಯ್ತು. ಆ ಫೋನ್ ನಂಬರ್ ಪೂರ್ವ ದೆಹಲಿಯ ಮಹಿಳಾ ನಿವಾಸಿಯೊಬ್ಬರ ಸಂಖ್ಯೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದರು.

ಮುಂಬೈನಲ್ಲಿದ್ದ ವ್ಯಕ್ತಿ

ಮುಂಬೈನಲ್ಲಿದ್ದ ವ್ಯಕ್ತಿ

ಪೂರ್ವ ವಲಯದ ಡಿಸಿಪಿ ಜಸ್ಮೀತ್ ಸಿಂಗ್ ಅವರನ್ನು ಸಂಪರ್ಕಿಸಿದ ರಾಯ್, ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಆ ಫೋನ್ ನಂಬರ್ ನೋಂದಣಿಯಾಗಿದ್ದ ವಿಳಾಸಕ್ಕೆ ತಂಡವೊಂದನ್ನು ಕಳುಹಿಸಿದರು. ಆದರೆ ಅಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಆ ಮಹಿಳೆ ತನ್ನ ಪತಿ ಫೇಸ್ ಬುಕ್ ಬಳಕೆ ಮಾಡುತ್ತಿದ್ದು, ಎರಡು ವಾರಗಳ ಹಿಂದೆ ತನ್ನೊಂದಿಗೆ ಜಗಳವಾಡಿ ಮುಂಬೈಗೆ ತೆರಳಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದರು.

ಪತಿ ಮುಂಬೈನ ಸಣ್ಣ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ಆತನ ಫೋನ್ ನಂಬರ್ ಇದೆ ಆದರೆ, ಅವನ ವಿಳಾಸ ತನ್ನ ಬಳಿ ಇಲ್ಲ ಎಂದು ಹೇಳಿದರು. ಕೂಡಲೇ ಡಿಸಿಪಿ ರಾಯ್, ಮುಂಬೈನ ಸೈಬರ್ ವಿಭಾಗದ ಡಿಸಿಪಿ ರಶ್ಮಿ ಕರಾಂಡಿಕರ್ ಅವರಿಗೆ ಕರೆ ಮಾಡಿ ತಿಳಿಸಿದರು. ಆದರೆ ಆ ವ್ಯಕ್ತಿಯ ಫೋನ್ ನಂಬರ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಭೋಜಪುರಿ ನಟಿ ಫೇಸ್ಬುಕ್ ಲೈವ್ ನಂತರ ಆತ್ಮಹತ್ಯೆಗೆ ಶರಣು

ಮುಂಬೈ ಪೊಲೀಸರ ಸಮಸ್ಯೆ

ಮುಂಬೈ ಪೊಲೀಸರ ಸಮಸ್ಯೆ

ದೆಹಲಿ ಪೊಲೀಸರಿಗೆ ಈ ಮಾಹಿತಿ ತಿಳಿದು ಹುಡುಕಾಟ ಕಾರ್ಯವೆಲ್ಲ ಮುಗಿಸಿ ಮೂರು ಗಂಟೆಯ ಬಳಿಕ, ಅಂದರೆ ರಾತ್ರಿ 11ರ ಸುಮಾರಿಗೆ ರಶ್ಮಿ ಅವರನ್ನು ಸಂಪರ್ಕಿಸಲಾಯಿತು. 'ನಮ್ಮ ಅತಿ ದೊಡ್ಡ ಸವಾಲೆಂದರೆ ಅವರನ್ನು ಅತಿ ಶೀಘ್ರದಲ್ಲೇ ಸಂಪರ್ಕಿಸುವುದಾಗಿತ್ತು. ಏಕೆಂದರೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ಕನಿಷ್ಠ ನಾಲ್ಕು ವಿಡಿಯೋಗಳನ್ನು ಹಾಕಿದ್ದ ಎಂದು ತಿಳಿಸಲಾಗಿತ್ತು. ರಾತ್ರಿ 12.30ರವರೆಗೂ ನಮಗೆ ಯಾವ ಸುಳಿವೂ ಸಿಗಲಿಲ್ಲ' ಎಂದು ಅವರು ತಿಳಿಸಿದ್ದಾರೆ.

ಕೊನೆಗೂ ವ್ಯಕ್ತಿ ಪತ್ತೆ

ಕೊನೆಗೂ ವ್ಯಕ್ತಿ ಪತ್ತೆ

ಕೊನೆಗೆ ಮುಂಬೈ ಪೊಲೀಸರು ಆ ವ್ಯಕ್ತಿಯ ತಾಯಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದರು. ಇದರಿಂದ ಆತ ಇರುವ ಸ್ಥಳ ತಿಳಿಯಬಹುದು ಎನ್ನುವುದು ಅವರ ಆಲೋಚನೆ. ಆದರೆ ಒಂದೇ ರಿಂಗ್‌ಗೆ ಕಾಲ್ ಡಿಸ್ಕನೆಕ್ಟ್ ಮಾಡಿದ್ದ. ಬಳಿಕ ಮತ್ತೊಂದು ಸಂಖ್ಯೆಯಿಂದ ತಾಯಿಯನ್ನು ಸಂಪರ್ಕಿಸಿದ. ಇದರಿಂದ ಆತನ ಲೊಕೇಷನ್ ಕಂಡುಹಿಡಿದರು. ಸುಮಾರು ಒಂದು ಗಂಟೆ ಫೋನ್ ಕರೆಯಲ್ಲಿಯೇ ಇರುವಂತೆ ಮಾಡಿದ ಪೊಲೀಸರು, ದುಡುಕಿನ ನಿರ್ಧಾರ ತೆಗೆದುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು. ರಾತ್ರಿ 1.30ರ ಸುಮಾರಿಗೆ ಆತನ ವಿಳಾಸ ಪತ್ತೆಹಚ್ಚಿ ಮನವೊಲಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.

ಆರ್ಥಿಕ ಹೊರೆ ಕಾರಣ

ಆರ್ಥಿಕ ಹೊರೆ ಕಾರಣ

ಲಾಕ್ ಡೌನ್ ಕಾರಣದಿಂದ ಕೆಲವು ತಿಂಗಳಿನಿಂದ ಅತೀವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ. ಪತ್ನಿ ಜತೆಗಿನ ಜಗಳದಿಂದ ಮತ್ತಷ್ಟು ಹತಾಶೆ ಉಂಟಾಗಿತ್ತು. ಇತ್ತೀಚೆಗಷ್ಟೇ ಹುಟ್ಟಿದ್ದ ಮಗುವಿನ ಪಾಲನೆಗಾಗಿ ಸಾಕಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ತುಂಬಾ ಚಿಂತೆಯುಂಟುಮಾಡಿತ್ತು. ಹೀಗಾಗಿ ಆತ್ಮಹತ್ಯೆಯ ಆಲೋಚನೆ ಮಾಡಿದ್ದಾಗಿ ಆತ ಹೇಳಿದ್ದಾನೆ.

English summary
A Facebook employee from Irland has helped Delhi police to save a man from suicide who was staying in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X