ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಸ್ಟ್ ಕಾರ್ಡ್ ನ್ಯೂಸ್ ಪೇಜ್ ಕಿತ್ತು ಹಾಕಿದ ಫೇಸ್ ಬುಕ್

By Mahesh
|
Google Oneindia Kannada News

ಬೆಂಗಳೂರು, ಜುಲೈ 17: ಸುಳ್ಳು ಸುದ್ದಿ ವಿರುದ್ಧ ವಾಟ್ಸಾಪ್, ಟ್ವಿಟ್ಟರ್ ಕ್ರಮ ಕೈಗೊಳ್ಳಲು ಮುಂದಾದ ಬೆನ್ನಲ್ಲೇ, ಫೇಸ್ ಬುಕ್ ಕೂಡಾ ತನ್ನ ಸ್ವಚ್ಛತಾ ಅಭಿಯಾನ ಆರಂಭಿಸಿದೆ. ವ್ಯಾಪಕವಾಗಿ ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಕಾರಣಕ್ಕೆ postcard.news ವೆಬ್ ತಾಣದ ಅಧಿಕೃತ ಪುಟವನ್ನು ಫೇಸ್ ಬುಕ್ ತೆಗೆದು ಹಾಕಿದೆ

ಫೇಸ್ ಬುಕ್ ನಲ್ಲಿ postcard.news ನ ಪುಟವನ್ನು ಭಾನುವಾರದಂದು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ. ಕೆಲವು ಫೇಸ್ ಬುಕ್ ಬಳಕೆದಾರರು postcard.news ನ " ಸುಳ್ಳು ಸುದ್ದಿಗಳ ವಿರುದ್ಧ ಜಾಗೃತಿ ಮೂಡಿಸಿ ಫೇಸ್ ಬುಕ್ ಗೆ ದೂರು ನೀಡಿದ್ದು ಫಲ ನೀಡಿದೆ. ಫೇಸ್ ಬುಕ್ ಅದರ ಪೇಜ್ ಅನ್ನು ತೆಗೆದು ಹಾಕಿದೆ " ಎಂದು ಕೆಲ ಫೇಸ್ ಬುಕ್ ಬಳಕೆದಾರರು ಸ್ಟೇಟಸ್ ಹಾಕಿದ್ದಾರೆ.

ಟ್ವಿಟ್ಟರ್ ಸ್ವಚ್ಛತಾ ಅಭಿಯಾನ, ಹಿಂಬಾಲಕರನ್ನು ಕಳೆದುಕೊಂಡ ಮೋದಿ ಟ್ವಿಟ್ಟರ್ ಸ್ವಚ್ಛತಾ ಅಭಿಯಾನ, ಹಿಂಬಾಲಕರನ್ನು ಕಳೆದುಕೊಂಡ ಮೋದಿ

postcard.news ವಿರುದ್ಧ ನೀಡಿದ್ದ ದೂರಿಗೆ ಸ್ಪಂದಿಸಿ ಅದರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಫೇಸ್ ಬುಕ್ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ. ಫೇಸ್ ಬುಕ್ ನಲ್ಲಿ postcardnewsನ ಅಧಿಕೃತ ಪೇಜ್ ತೆರೆಯಲು ಹೋದಾಗ ಈ ಮೆಸೇಜ್ ಬರುತ್ತದೆ.

Facebook removes Postcard News page

"The page you requested cannot be displayed at the moment. It may be temporarily unavailable, the link you clicked on may be broken or expired. or you may not have permission to view this page". ಎಂಬ ಸಂದೇಶ ಸಿಗುತ್ತಿದೆ.

postcard.news ನ ಫೇಸ್ ಬುಕ್ ಪೇಜ್ ನಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ ಫಾಲೋ ಮಾಡುತ್ತಿದ್ದರು.

ಜೈನ ಮುನಿ ಒಬ್ಬರ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದರು ಎಂದು ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ವೆಬ್ ಸೈಟ್ ಸ್ಥಾಪಕರಲ್ಲಿ ಒಬ್ಬರಾದ ಮಹೇಶ್ ವಿಕ್ರಂ ಹೆಗ್ಡೆ ಅವರು ಬಂಧನಕ್ಕೊಳಗಾಗಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು

English summary
The official Facebook page of Postcard news, a news portal which has repeatedly been in the limelight for peddling fake news, was removed on Sunday, 15 July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X