ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಮಿತಿ ಮುಂದೆ ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥರು ಹಾಜರು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 02: ಭಾರತದ ಫೇಸ್ ಬುಕ್ ಮುಖ್ಯಸ್ಥ ಅಜಿತ್ ಮೋಹನ್ ಸಂಪುಟ ಸಮಿತಿ ಮುಂದೆ ಹಾಜರಾಗಿದ್ದರು. ಫೇಸ್ ಬುಕ್ ಬಿಜೆಪಿ ಪರ ನಿಲುವು ಹೊಂದಿದೆ ಎಂಬ ಆರೋಪದ ಬಗ್ಗೆ ಸಮಿತಿ ವಿಚಾರಣೆ ನಡೆಸುತ್ತಿದೆ.

Recommended Video

Indian Generic ‌ಔಷಧ ತಯಾರಕರಿಗೆ ಲಾಭ | Oneindia Kannada

ಬುಧವಾರ ಅಜಿತ್ ಮೋಹನ್ ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ ನೇತೃತ್ವದ ಸಂಪುಟ ಸಮಿತಿ ಮುಂದೆ ಹಾಜರಾಗಿದ್ದರು. ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಬಂದ ವರದಿ ಬಗ್ಗೆ ಸಮಿತಿ ವಿವರಣೆಯನ್ನು ಪಡೆದಿದೆ.

ಫೇಸ್ ಬುಕ್ ಪ್ರೇಮ; ಪ್ರೇಯಸಿ ನೋಡಲು ಪಾಕ್‌ಗೆ ಹೊರಟವ ಬಂಧನ ಫೇಸ್ ಬುಕ್ ಪ್ರೇಮ; ಪ್ರೇಯಸಿ ನೋಡಲು ಪಾಕ್‌ಗೆ ಹೊರಟವ ಬಂಧನ

ಫೇಸ್ ಬುಕ್ ಇಂಡಿಯಾ ಮತ್ತು ಬಿಜೆಪಿ ನಡುವಿನ ಸಂಬಂಧದ ಬಗ್ಗೆ ವರದಿಗಳು ಬಂದ ಬಳಿಕ ದೇಶದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಬಿಜೆಪಿಯ ದ್ವೇಷಯುಕ್ತ ಪೋಸ್ಟ್, ನಕಲಿ ಸುದ್ದಿಗಳು ಹರಿದಾಡುತ್ತಿದ್ದರೂ ಫೇಸ್ ಬುಕ್ ಇಂಡಿಯಾ ಕಂಡೂ ಕಾಣದಂತಿತ್ತು ಎಂಬುದು ಆರೋಪವಾಗಿದೆ.

ಪ್ರಧಾನಿ ಮೋದಿ ವಿರುದ್ಧ ಫೇಸ್‌ಬುಕ್ ಉದ್ಯೋಗಿಗಳಿಂದ ಬಹಿರಂಗ ಟೀಕೆ: ಫೇಸ್‌ಬುಕ್ ಸಿಇಒಗೆ ಪತ್ರಪ್ರಧಾನಿ ಮೋದಿ ವಿರುದ್ಧ ಫೇಸ್‌ಬುಕ್ ಉದ್ಯೋಗಿಗಳಿಂದ ಬಹಿರಂಗ ಟೀಕೆ: ಫೇಸ್‌ಬುಕ್ ಸಿಇಒಗೆ ಪತ್ರ

Facebook India Head Ajit Mohan Appeared Before Parliamentary Panel

ಮತ್ತೊಂದು ಕಡೆ ಬಿಜೆಪಿ ಸಂಸದ ನಿಶಾಂತ್ ದುಬೆ ಕಾಂಗ್ರೆಸ್ ನಾಯಕರು ಸಂಪುಟ ಸಮಿತಿಯನ್ನು ತಮ್ಮ ಪಕ್ಷದ ರಾಜಕೀಯ ನಿಲುವುಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಸಮಿತಿಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

 ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ

ಫೇಸ್ ಬುಕ್ ಬಿಜೆಪಿ ಪರ ನಿಲುವು ಹೊಂದಿದೆ ಎಂಬ ಆರೋಪಗಳ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಶ್ನೆ ಮಾಡಿದ್ದರು. ಬಳಿಕ ಈ ವಿಚಾರದ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿದೆ.

ಫೇಸ್ ಬುಕ್ ಇಂಡಿಯಾದ ಚಟುವಟಿಕೆ ಕುರಿತು ತನಿಖೆಗೆ ಆದೇಶ ನೀಡಿರುವ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

English summary
Facebook India head Ajit Mohan appeared before a parliamentary panel. Panel which is discussing alleged misuse of social media platform. Parliamentary standing committee headed by senior Congress leader Shashi Tharoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X