ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿದಷ್ಟು ಅಪಾಯವೂ ಹೆಚ್ಚು"

|
Google Oneindia Kannada News

ನವದೆಹಲಿ, ಜೂನ್ 12: ಕೊರೊನಾ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿದಷ್ಟು, ಕೊರೊನಾ ರೂಪಾಂತರ ಸೋಂಕಿಗೆ ಗುರಿಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ. ಆಂಥೊನಿ ಫೌಸಿ ಶುಕ್ರವಾರ ಹೇಳಿದ್ದಾರೆ.

"ಎನ್‌ಡಿಟಿವಿ"ಯೊಂದಿಗೆ ಮಾತನಾಡಿರುವ ಅವರು, ಲಸಿಕೆ ಡೋಸ್‌ಗಳ ಅಂತರವನ್ನು ಹೆಚ್ಚುಗೊಳಿಸಿದರೆ ಸೋಂಕಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಬ್ರಿಟನ್‌ನಲ್ಲಿ ಈ ಅಂತರ ವಿಸ್ತರಣೆ ಮಾಡಿದ ಕಾರಣಕ್ಕೆ ಸೋಂಕಿಗೆ ತುತ್ತಾಗಿರುವ ಪ್ರಕರಣಗಳು ಕಂಡುಬಂದಿವೆ" ಎಂದು ಹೇಳಿದ್ದಾರೆ. mRNA ಲಸಿಕೆಗಳ ಡೋಸ್‌ಗಳ ನಡುವೆ ಮೂರು ವಾರಗಳ ಅಂತರವಿರಬೇಕು. ಫೈಜರ್ ಅಥವಾ ಮಾಡೆರ್ನಾ ಲಸಿಕೆಗಳಿಗೆ ನಾಲ್ಕು ವಾರಗಳ ಅಂತರವಿರುವುದು ಸೂಕ್ತ ಎಂದು ತಿಳಿಸಿದ್ದಾರೆ.

Extending Vaccine Intervals Can Increase Risk Of Virus Says US Medical Advisor

ಕಳೆದ ತಿಂಗಳಷ್ಟೆ ಕೊರೊನಾ ಲಸಿಕೆ ಕುರಿತು ಭಾರತ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಲಸಿಕೆ ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿತ್ತು. ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ಏರಿಕೆ ಮಾಡಿತ್ತು. ಮೂರು ತಿಂಗಳಿನಲ್ಲಿ ಎರಡನೇ ಬಾರಿ ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿತ್ತು.

ಸದ್ಯಕ್ಕೆ ಕೊರೊನಾ ಸೋಂಕಿನಿಂದ ದೂರವುಳಿಯಲು ಜನರಿಗೆ ಅತಿ ವೇಗವಾಗಿ ಲಸಿಕೆ ನೀಡಬೇಕಾಗಿದೆ. ಡೆಲ್ಟಾದಂಥ ಅಪಾಯಕಾರಿ ರೂಪಾಂತರದಿಂದ ತಪ್ಪಿಸಿಕೊಳ್ಳಳು ಇದು ಅತ್ಯವಶ್ಯಕವಾಗಿದೆ ಎಂದು ಫೌಸಿ ಹೇಳಿದ್ದಾರೆ.

ಭಾರತದಲ್ಲಿ ಒಂದೇ ದಿನ 30 ಲಕ್ಷ ಫಲಾನುಭವಿಗಳಿಗೆ ಕೊರೊನಾ ಲಸಿಕೆಭಾರತದಲ್ಲಿ ಒಂದೇ ದಿನ 30 ಲಕ್ಷ ಫಲಾನುಭವಿಗಳಿಗೆ ಕೊರೊನಾ ಲಸಿಕೆ

ಶುಕ್ರವಾರವಷ್ಟೇ ಈ ಸಂಬಂಧ ಕೇಂದ್ರ ಸರ್ಕಾರ ಹೇಳಿಕೆಯೊಂದನ್ನು ನೀಡಿದೆ. ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿಗಳ ಆಧಾರದಲ್ಲಿ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಆದರೆ ಈ ವರದಿಯಿಂದ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ನಿರ್ಧಾರಗಳನ್ನು ತಜ್ಞರ ಕೂಲಂಕಷ ಪರೀಕ್ಷೆಗಳ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ ವಿಕೆ ಪೌಲ್ ತಿಳಿಸಿದ್ದರು.

ಭಾರತದಲ್ಲಿ ಕೋವಿಶೀಲ್ಡ್‌ನ ಎರಡು ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡುವ ರಕ್ಷಣೆ ದೀರ್ಘಕಾಲ ಇರುತ್ತದೆ ಎಂಬ ಅಂತಾರಾಷ್ಟ್ರೀಯ ಅಧ್ಯಯನಗಳ ಆಧಾರದ ಮೇಲೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಎರಡನೇ ಡೋಸ್ ವಿಳಂಬಗೊಳಿಸಬಹುದು ಎಂದು ಡಾ. ಪೌಲ್ ಹೇಳಿದ್ದಾರೆ.

English summary
Extending intervals between vaccine doses could leave people vulnerable to infection says Dr Anthony Fauci, the medical advisor to the United States President
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X