ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿ ರಫ್ತು ನಿರ್ಬಂಧ

|
Google Oneindia Kannada News

ನವದೆಹಲಿ, ಜೂನ್.18: ಜಗತ್ತಿಗೆ ಜಗತ್ತು ಕೊರೊನಾವೈರಸ್ ಸೋಂಕಿನಿಂದ ಕಂಗೆಟ್ಟು ಹೋಗಿದ್ದ ಸಂದರ್ಭದಲ್ಲಿ ವಿಶ್ವದ ಎದುರಿಗೆ ರಾಮಬಾಣದಂತೆ ಕಂಡಿದ್ದೇ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿ. ಇದೇ ಔಷಧಿಯನ್ನು ರಫ್ತು ಮಾಡದಿರುವುದಕ್ಕೆ ಭಾರತ ತೀರ್ಮಾನಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ರಫ್ತು ಮಾಡುವುದನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈ ಹಿಂದೆ ಕಳೆದ ಮಾರ್ಚ್.24ರಂದು ಕೊರೊನಾವೈರಸ್ ಹರಡುವಿಕೆ ಹಿನ್ನೆಲೆ ಮೊದಲ ಬಾರಿಗೆ ಹೈಡ್ರೋಕ್ಸಿ ಕ್ಲೋರೊಕ್ವಿನ್ ರಫ್ತಿಗೆ ನಿರ್ಬಂಧ ವಿಧಿಸಲಾಗಿತ್ತು.

ಕೊವಿಡ್ 19: ಏಕಾಏಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆ ನಿಲ್ಲಿಸಿದ ಅಮೆರಿಕಕೊವಿಡ್ 19: ಏಕಾಏಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆ ನಿಲ್ಲಿಸಿದ ಅಮೆರಿಕ

ಸಕ್ರಿಯ ಔಷಧಿ ಪದಾರ್ಥಗಳ ರಫ್ತು ನೀತಿಯನ್ನು ತಕ್ಷಣದಿಂದಲೇ ಸಡಿಲಗೊಳಿಸಲಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಸಕ್ರಿಯ ಷಧೀಯ ಪದಾರ್ಥಗಳು(ಎಪಿಐ) ರಫ್ತು ನೀತಿ ಮತ್ತು ಅದರ ಸೂತ್ರೀಕರಣಗಳನ್ನು ತಕ್ಷಣದಿಂದ ಜಾರಿಗೆ ತರಲು ನಿಷೇಧಿಸಲಾಗಿದೆ "ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಎಫ್ ‌ಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

India: Export Of Hydroxychloroquine Drug Used To Treat Malaria Banned

ಕೊರೊನಾವೈರಸ್ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕ್ವಿನ್ ಬಳಕೆ:

ಭಾರತದಲ್ಲೇ ಅತಿಹೆಚ್ಚು ಉತ್ಪಾದನೆಯಾಗುವ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ಅಸಲಿಗೆ ಮಲೇರಿಯಾ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬಳಕೆ ಮಾಡಲಾಗುತ್ತದೆ. ಆದರೆ ವಿಶ್ವವನ್ನು ಕೊರೊನಾವೈರಸ್ ಕಾಡುತ್ತಿರುವ ಆರಂಭಿಕ ಹಂತದಲ್ಲಿ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನೇ ಸೋಂಕಿತರ ಮೇಲೆ ಪ್ರಯೋಗಿಸಲು ತೀರ್ಮಾನಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿರುವ ಹಲವು ಕೊವಿಡ್-19 ಸೋಂಕಿತರಿಗೆ ಇದೇ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ನೀಡಲಾಗುತ್ತಿತ್ತು. ಮೊದಮೊದಲು ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಗಾಗಿ ಭಾರತ ಬೆನ್ನು ಬಿದ್ದ ಅಮೆರಿಕಾ ನಂತರದಲ್ಲಿ ಈ ಔಷಧಿಯಿಂದ ಅಡ್ಡ ಪರಿಣಾಮಗಳು ಆಗುತ್ತಿವೆ. ಹೀಗಾಗಿ ಹೈಡ್ರೋಕ್ಸಿ ಕ್ಲೋರೊಕ್ವಿನ್ ಔಷಧಿಯನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸಲು ಆಗುವುದಿಲ್ಲ ಎಂದು ತಿಳಿಸಿತ್ತು.

English summary
India: Export of hydroxychloroquine drug used to treat malaria banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X