ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರ ಏಕೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ?

By ಒನ್ ಇಂಡಿಯಾ ಸಿಬ್ಬಂದಿ
|
Google Oneindia Kannada News

ಇತ್ತೀಚಿಗೆ ಆಗ್ರಾದಲ್ಲಿ ನಡೆದ ಮತಾಂತರ ಈಗ ದೇಶದೆಲ್ಲೆಡೆ ಚರ್ಚೆಗೊಳಲ್ಪಟ್ಟಿದೆ. ಈ ನಡುವೆ ಡಿಸೆಂಬರ್ 25ರಂದು ಕ್ರಿಸ್ಮಸ್‌ನ ದಿನ ಅಲಿಗಡದಲ್ಲಿ ಅಪಾರ ಸಂಖ್ಯೆಯ ಜನರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಹಿಂದೂ ಸಂಘಟನೆಯೊಂದು ಹೇಳಿಕೊಂಡಿದೆ.

ಮತಾಂತರ ವಿಷಯ ಸಂಸತ್ತಿನ ಉಭಯ ಸದನದಲ್ಲೂ ಪ್ರತಿಧ್ವನಿಸುತ್ತಿದೆ. ಇದು ಮತಾಂತರ ಅಲ್ಲ. ಹಾದಿ ತಪ್ಪಿರುವ ಜನರು ಅಂದು ತಮ್ಮ ಮನೆಗೆ ವಾಪಸ್ ಆಗಲಿದ್ದಾರೆ. ಈ ಹಿಂದೆ ಅವರ ಮೂಲ ಧರ್ಮವನ್ನು ತ್ಯಜಿಸಲು ಆಮಿಷವೊಡ್ಡಲಾಗಿತ್ತು' ಎಂದು ಹಿಂದೂ ಸಂಘಟಕರು ಹೇಳಿದ್ದಾರೆ.

ಮತಾಂತರದ ಪರ ವಿರೋಧ ಚರ್ಚೆ ನಡೆದಿರುವ ಸಂದರ್ಭದಲ್ಲಿ ಮತಾಂತರದ ಬಗ್ಗೆ ಭಾರತದಲ್ಲಿ ಕಾನೂನು ಏನು ಹೇಳುತ್ತದೆ? ಕಾನೂನು ಆಯೋಗ ಈ ರೀತಿ ಪ್ರಕರಣದ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದರ ಬಗ್ಗೆ ವಿಸ್ತೃತ ಲೇಖನ ಇಲ್ಲಿದೆ...

The Rev Stanislaus vs Madhya Pradesh case:
ಜಸ್ಟೀಸ್ ಎ.ಎನ್ ರೇ ಅವರಿದ್ದ ಸುಪ್ರೀಂಕೋರ್ಟ್ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಮತಾಂತರದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳು, ಸ್ವಾತಂತ್ರ್ಯದ ಬಗ್ಗೆ ಧರ್ಮದಲ್ಲಿ ಏನಿದೆ ಎಂಬುದರ ಉಲ್ಲೇಖದೊಂದಿಗೆ ಆದೇಶ ಹೊರಡಿಸಲಾಗಿದೆ.

ಭಾರತೀಯ ಸಂವಿಧಾನ ಪರಿಚ್ಛೇದ 25ರ ಅನ್ವಯ ಧಾರ್ಮಿಕ ಸ್ವಾತಂತ್ರ್ಯ ಎಲ್ಲಾ ಧರ್ಮೀಯರಿಗೂ ಒಂದೇ ಆಗಿದೆ. ಅದರೆ, ಧರ್ಮ ಪರಿಪಾಲನೆ, ಜಾತಿಯತೆ ಎತ್ತಿ ಹಿಡಿಯುವ ಪ್ರಚಾರ ಮಾಡುವ ಸ್ವಾತಂತ್ರ್ಯವಿದ್ದರೂ ಮತಾಂತರದ ಹಕ್ಕು ನೀಡಲಾಗಿಲ್ಲ

ಪರಿಚ್ಛೇದ 25(1) ದಲ್ಲಿ ಜಾತಿ, ಧರ್ಮ ಪ್ರಚಾರ, ಬೆಳೆಸುವುದರ ಬಗ್ಗೆ ಉಲ್ಲೇಕವಿದ್ದರೂ ಒಂದು ಧರ್ಮದ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಮತಾಂತರಿಸುವ ಹಾಗಿಲ್ಲ. ಒಬ್ಬ ವ್ಯಕ್ತಿ ನಂಬಿಕೆ ಇರಿಸಿಕೊಂಡಿರುವ ಮತದ ವಿರುದ್ಧ ಪ್ರಚಾರ ಮಾಡಿ ಆತನನ್ನು ಮರಳು ಮಾಡುವಂತಿಲ್ಲ.

ಮತ್ತೊಮ್ಮೆ ಮತ ಪ್ರಚಾರ ಅಥವಾ ಅದಕ್ಕೆ ಪೂರಕ ಉದ್ದೇಶಗಳಿಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಿ, ಮತಾಂತರವೂ ಎಂದಿಗೂ ಮೂಲಬೂತ ಹಕ್ಕು ಎಂದು ಪರಿಗಣಿಸಲಾಗುವುದಿಲ್ಲ. ಧರ್ಮ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

Explained: The law on religious conversions in India

ಜನ ಏಕೆ ಮತಾಂತರಗೊಳ್ಳುತ್ತಾರೆ?
ಮತಾಂತರಗೊಳ್ಳಲು ವಿವಿಧ ಕಾರಣಗಳಿರಬಹುದು, ಧಾರ್ಮಿಕ ಸಂಘರ್ಷಗಳು, ಸಂಪ್ರದಾಯವಾದದಲ್ಲಿ ನಂಬಿಕೆ ಕಳೆದುಕೊಂಡಿರುವುದು, ಹಣದ ಆಮಿಷ, ಧಾರ್ಮಿಕ ಸ್ವಾತಂತ್ರ್ಯವೂ ಸೇರಿದಂತೆ ಹಲವು ಅಂಶಗಳನ್ನು ಪಟ್ಟಿ ಮಾಡಬಹುದು.

ಕ್ರಿಶ್ಚಿಯನ್ ಮಿಷನರಿಗಳು ಸೇಲ್ಸ್ ಮಾನ್ ಗಳಂತೆ ವರ್ತಿಸುತ್ತಾ ಧರ್ಮವನ್ನು ಹೇಗಾದರೂ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರ ನಡೆಸುವುದನ್ನು ಕಾಣಬಹುದಾಗಿದೆ. ಇದಕ್ಕಾಗಿ ಹಣ, ದಾನ ಧರ್ಮ ಮುಂತಾದ ಆಮಿಷಗಳನ್ನು ಮುಂದಿಡಲಾಗುತ್ತದೆ.

ಬಹುಪತ್ನಿತ್ವ, ವಿವಾಹ ವಿಚ್ಛೇದನ, ಅಲ್ಪಸಂಖ್ಯಾತರಿಗೆ ಸಿಗುವ ಮೀಸಲಾತಿ ಕೂಡಾ ಮತಾಂತರಕ್ಕೆ ಪ್ರಚೋದನೆ ನೀಡಬಲ್ಲದಾಗಿದೆ.

ಕಾನೂನು ಮತ್ತು ವಿಧೇಯಕಗಳು:

1954ರಲ್ಲೇ ಸಂಸತ್ತಿನಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯಿತು. ಭಾರತೀಯ ಮತಾಂತರ(ನಿಯಂತ್ರಣ ಹಾಗೂ ನೋಂದಾವಣೆ ಮಸೂದೆ) ಕಾಯ್ದೆ ಬಗ್ಗೆ ಚರ್ಚೆಯಾಗಿತ್ತು. 1960ರಲ್ಲಿ ಮತ್ತೊಮ್ಮೆ ಚರ್ಚೆ ನಡೆದರೂ ಅಲ್ಪಸಂಖ್ಯಾತ ಸಮುದಾಯದ ಸಂಸದರಿಂದ ಭಾರಿ ಪ್ರತಿರೋಧ ಬಂದಿದ್ದರಿಂದ ಈ ಬಗ್ಗೆ ಯಾವುದೇ ಮಸೂದೆ ಮಂಡನೆಯಾಗಿ ಕಾನೂನು ರೂಪ ಪಡೆದುಕೊಳ್ಳಲಿಲ್ಲ.

1968ರಲ್ಲಿ ಒರಿಸ್ಸಾ ಹಾಗೂ ಮಧ್ಯಪ್ರದೇಶದಲ್ಲಿ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿನಿಯಮ್ ಹಾಗೂ ಒರಿಸ್ಸಾ ಫ್ರೀಡಂ ಆಫ್ ರಿಲಿಜಿಲನ್ ಆಕ್ಟ್ ಜಾರಿಗೆ ಬಂದಿತ್ತು. ಈ ಕಾಯಿದೆಗಳ ಮುಖ್ಯ ಉದ್ದೇಶ ಬಲವಂತದ ಮತಾಂತರ ನಿಷೇಧ ಮಾಡುವುದಾಗಿತ್ತು.

ನಂತರ ತಮಿಳುನಾಡು, ಗುಜರಾತಿನಲ್ಲಿ ಈ ಬಗ್ಗೆ ಕಾನೂನು ಜಾರಿ ಬಂದಿತ್ತು. ಬಲವಂತದ ಮತಾಂತರಕ್ಕೆ 3 ವರ್ಷ ಕಠಿಣ ಶಿಕ್ಷೆ ಹಾಗೂ 20,000 ರು ದಂಡ ವಿಧಿಸಲಾಗುತ್ತದೆ.

English summary
Religious conversions have been a subject of debate since a very long time and yesterday the issue rocked Parliament in a big way. It was argued by the opposition that forcible conversions had been undertaken in Agra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X