ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಫ್ಲೂ ಲಸಿಕೆ ನೀಡುವುದರಿಂದ ಕೊರೊನಾ ಸೋಂಕು ತಗುಲುವುದನ್ನು ತಪ್ಪಿಸಬಹುದು: ತಜ್ಞರು

|
Google Oneindia Kannada News

ನವದೆಹಲಿ, ಜೂನ್ 02: ಮಕ್ಕಳಿಗೆ ಫ್ಲೂ ಲಸಿಕೆ ನೀಡುವುದರಿಂದ ಕೊರೊನಾ ಸೋಂಕು ತಗುಲುವುದನ್ನು ತಡೆಗಟ್ಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮದ ಮಧ್ಯೆ ಮುಂದಿನ ಹಂತದಲ್ಲಿ ಮಕ್ಕಳಲ್ಲಿ ಸೋಂಕು ಕಂಡುಬರಬಹುದು ಎಂಬ ಆತಂಕದ ಮಧ್ಯೆ ಕೇಂದ್ರ ಸರ್ಕಾರ ನಿನ್ನೆ ಮಕ್ಕಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು, ಮಕ್ಕಳಲ್ಲಿ ಕೊರೊನಾ ಸೋಂಕು ಕಂಡುಬಂದರೆ ಆಸ್ಪತ್ರೆಗಳು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಮಕ್ಕಳಿಗೆ ಕೊರೊನಾ ಸೋಂಕು; ಕೇಂದ್ರದಿಂದ ಸಮಗ್ರ ಸಿದ್ಧತೆ ಭರವಸೆಮಕ್ಕಳಿಗೆ ಕೊರೊನಾ ಸೋಂಕು; ಕೇಂದ್ರದಿಂದ ಸಮಗ್ರ ಸಿದ್ಧತೆ ಭರವಸೆ

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಜಗದೀಶ್ ಚಿನ್ನಪ್ಪ ಕೂಡ ಇದೇ ರೀತಿ ಹೇಳುತ್ತಾರೆ.ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ ಮಕ್ಕಳಲ್ಲಿ ಕೋವಿಡ್-19: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸುಮಾರು 9,416 ಪಾಸಿಟಿವ್ ಪ್ರಕರಣಗಳಿದ್ದು ಕೇವಲ ಅಹ್ಮದ್ ನಗರವೊಂದರಲ್ಲಿಯೇ ವರದಿಯಾಗಿದೆ.

ಏಪ್ರಿಲ್ ತಿಂಗಳಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 757 ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದರೆ, 5-10 ವರ್ಷ ವಯಸ್ಸಿನ ಮಕ್ಕಳಲ್ಲಿ 1,510 ಸೋಂಕುಗಳು ಮತ್ತು 11-18 ವರ್ಷ ವಯಸ್ಸಿನವರಲ್ಲಿ 5,340 ಪ್ರಕರಣಗಳು ವರದಿಯಾಗಿವೆ.

ಮಾರ್ಚ್ ತಿಂಗಳಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 188 ಮಕ್ಕಳು ಸೋಂಕಿಗೆ ಒಳಗಾಗಿದ್ದರು. ಈ ಸಂಖ್ಯೆ 6-10 ವರ್ಷ ವಯಸ್ಸಿನವರಲ್ಲಿ 270 ರಷ್ಟಿದೆ ಮತ್ತು 11-18 ವರ್ಷದವರಲ್ಲಿ 1,173 ರಷ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಫ್ಲೂ ಲಸಿಕೆ ಮಕ್ಕಳನ್ನು ಅಪಾಯಕಾರಿ ಕೊರೊನಾ ಸೋಂಕಿನಿಂದ ರಕ್ಷಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಕ್ಕಳಲ್ಲಿ ಕಫ, ಶೀತ, ಜ್ವರ ಬಂದರೆ ಅದು ಕೋವಿಡ್ ಸೋಂಕು ಅಥವಾ ಇತರ ಸಾಂಕ್ರಾಮಿಕ ರೋಗವೇ ಎಂಬ ಗೊಂದಲವನ್ನು ಬಗೆಹರಿಸಬಹುದು ಎನ್ನುತ್ತಾರೆ.

ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಬಗ್ಗೆ ಅಧ್ಯಯನಗಳೂ ಪ್ರಕಟವಾಗಿವೆ, ಆದರೆ ಅದು ಸಾಮೂಹಿಕ ಪ್ರಮಾಣದಲ್ಲಿ ಸಾಬೀತಾಗಿಲ್ಲ. ದೇಶವು ನಿರ್ದಿಷ್ಟ ಲಸಿಕೆಗಾಗಿ ಕಾಯಬೇಕಾಗಿದೆ ಎನ್ನುತ್ತಾರೆ ಡಾ ಜಗದೀಶ್.

 ಸೌಲಭ್ಯ ಬಲಪಡಿಸುವುದು

ಸೌಲಭ್ಯ ಬಲಪಡಿಸುವುದು

ನಾವು ಅಗತ್ಯವಿರುವಂತೆ ನಮ್ಮ ಸೌಲಭ್ಯಗಳನ್ನು ಬಲಪಡಿಸುತ್ತೇವೆ ಮತ್ತು ಅಗತ್ಯವಿರುವ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ಏನು ಬೇಕಾಗಬಹುದು ಎಂಬುದರ ಲೆಕ್ಕಪರಿಶೋಧನೆಯನ್ನು ಮಾಡುತ್ತೇವೆ ಎಂದು ವಿ ಕೆ ಪೌಲ್ ಹೇಳಿದ್ದಾರೆ.

 ಮಾರ್ಗಸೂಚಿ ಪ್ರಕಟ

ಮಾರ್ಗಸೂಚಿ ಪ್ರಕಟ

ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಮೂರನೇ ಅಲೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವಿ.ಕೆ. ಪಾಲ್ ತಿಳಿಸಿದ್ದಾರೆ.

 ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ

ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ್ ಲಹರಿಯಾ ಅವರ ಪ್ರಕಾರ, ಶೂನ್ಯ ಸಮೀಕ್ಷೆಯಿಂದ ಎಲ್ಲಾ ವಯಸ್ಸಿನ ಜನರಲ್ಲಿ ಸೋಂಕಿನ ಹರಡುವಿಕೆಯನ್ನು ಹೋಲುತ್ತದೆ ಎಂದು ತೋರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ.

 ಫ್ಲೂ ಲಸಿಕೆಗಳು ಕೊರೊನಾದಿಂದ ಮಕ್ಕಳನ್ನು ರಕ್ಷಿಸಬಲ್ಲವು

ಫ್ಲೂ ಲಸಿಕೆಗಳು ಕೊರೊನಾದಿಂದ ಮಕ್ಕಳನ್ನು ರಕ್ಷಿಸಬಲ್ಲವು

ಈ ಕೊರೊನಾ ಸಂದರ್ಭದಲ್ಲಿ ಕೆಲವು ವೈದ್ಯರು ಫ್ಲೂ ಲಸಿಕೆಗಳು ಮಕ್ಕಳನ್ನು ರಕ್ಷಿಸಬಹುದು ಎನ್ನುತ್ತಾರೆ, ಆದರೆ ದೆಹಲಿಯ ಏಮ್ಸ್ ನ ಹಿರಿಯ ಮಕ್ಕಳ ತಜ್ಞರು ಇದು ಭಾರತಕ್ಕೆ ಸರಿಹೊಂದಲಿಕ್ಕಿಲ್ಲ ಎನ್ನುತ್ತಾರೆ. ಯುರೋಪ್ ರಾಷ್ಟ್ರಗಳಲ್ಲಿ ವೈರಸ್ ಸೋಂಕಿನ ವಿರುದ್ಧ ಮಕ್ಕಳಿಗೆ ಈ ರೀತಿ ಫ್ಲೂ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳುತ್ತಾರೆ.

 ವಿಕೆ ಪೌಲ್ ಏನಂದ್ರು?

ವಿಕೆ ಪೌಲ್ ಏನಂದ್ರು?

ನೀತಿ ಆಯೋಗದ ಆರೋಗ್ಯ ಇಲಾಖೆ ಸದಸ್ಯ, ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಸ್ವತಃ ಮಕ್ಕಳ ತಜ್ಞರಾಗಿರುವ ಡಾ ವಿ ಕೆ ಪೌಲ್, ಇದುವರೆಗೆ ಶೇಕಡಾ 2ರಿಂದ 3ರಷ್ಟು ಮಕ್ಕಳಲ್ಲಿ ಮಾತ್ರ ಕೊರೊನಾ ಸೋಂಕು ಕಂಡುಬಂದಿದೆ. ಈಗಿರುವ ವೈಜ್ಞಾನಿಕ ಸಾಕ್ಷಿಗಳ ಪ್ರಕಾರ ಕೊರೊನಾ ಸೋಂಕಿಗೆ ಒಳಗಾಗುವ ಮಕ್ಕಳ ಸಂಖ್ಯೆ ಕಡಿಮೆಯಿರುತ್ತದೆ ಎನ್ನುತ್ತಾರೆ.

English summary
Amid concerns that children, who are not vaccinated against the coronavirus, might be the biggest casualty in the next pandemic wave, the Centre on Tuesday said it will soon issue guidelines for Covid-19 management in kids and prepare hospital infrastructure to face any influx of child patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X