ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಮದ್ರಾಸ್ ಜಡ್ಜ್!

|
Google Oneindia Kannada News

ಚೆನ್ನೈ, ಜೂ. 25: 15 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈ ಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿರುವ ಹೇಳಿಕೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಕೆಳಗಿನ ನ್ಯಾಯಾಲಯ ಅಪರಾಧಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆದರೆ ಅಪರಾಧಿ ತೀರ್ಪನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಪಿ. ದೇವಿದಾಸ್ ಮಾತುಕತೆ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಿ ಎಂಬ ಸಲಹೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ.[ಮದುವೆ, ಲಿವಿಂಗ್ ಟುಗೆದರ್ ಬೇರೆ ಬೇರೆಯಲ್ಲ]

rape

ಮಹಿಳಾ ಪರ ಹೋರಾಟಗಾರರು, ಚಿಂತಕರು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಕರಣ ಏನೇ ಇದ್ದರೂ ಇಂಥ ಹೇಳಿಕೆ ನೀಡಬಾರದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಾಲಕಿ 15 ವರ್ಷದವಳಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಮರುವರ್ಷ ಬಾಲಕಿ ಮಗುವೊಂದಕ್ಕೆ ಜನ್ಮ ನೀಡಿ ತಾಯಿಯಾಗಿದ್ದಳು. ಆರು ವರ್ಷಗಳ ನಿರಂತರ ಹೋರಾಟದ ಪರಿಣಾಮ ಅಪರಾಧಿಗೆ ಶಿಕ್ಷೆಯಾಗಿತ್ತು. ಏಳು ವರ್ಷ ಕಠಿಣ ಸಜೆ ಮತ್ತು 2 ಲಕ್ಷ ರು. ದಂಡ ವಿಧಿಸಲಾಗಿತ್ತು.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]

ಇದನ್ನು ಪ್ರಶ್ನಿಸಿ ಅಪರಾಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಂತ್ರಸ್ತೆ ಮತ್ತು ಅಪರಾಧಿ ಇಬ್ಬರ ಕಡೆಯಿಂದಲೂ ಹೊಂದಾಣಿಕೆ ಸಂಬಂಧ ಯಾವುದೇ ಅರ್ಜಿ ದಾಖಲಾಗಿರಲಿಲ್ಲ. ಆದರೆ ಸ್ವತಃ ನ್ಯಾಯಾಧೀಶರೇ ಇಂಥ ಸಲಹೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮಹಿಳಾ ವಕೀಲರ ಸಂಘದ ಅಧ್ಯಕ್ಷೆ ಆರ್ ಶಾಂತುಕುಮಾರಿ, ನಿಜಕ್ಕೂ ಇದೊಂದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.[ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಪುನರುಚ್ಚಾರ]

ಈ ಬಗೆಯ ಹೇಳಿಕೆ ಅಥವಾ ಸಲಹೆಗಳು ನಿಜಕ್ಕೂ ಅಗತ್ಯವಿರಲಿಲ್ಲ. ಜನರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಕಡಿಮೆಯಾಗಲು ಇಂಥ ಸಂಗತಿಗಳು ಕಾರಣವಾಗುತ್ತದೆ. ಮಹಿಳೆಯರ ಮೇಲೆ ಹಕ್ಕು ಹೇರುವಂಥ ಪ್ರಕರಣ ಇದಾಗಿದೆ ಎಂದು ತಮಿಳುನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

English summary
The Madras high court made a controversy by suggesting a 'compromise' and an amicable mediated settlement in a case where a 15-year-old girl was raped. The offender was found guilty and sentenced to seven years of imprisonment. Justice P Devadass' suggestion to settle the matter by mediation and conciliation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X