ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಗಿದೆ ಎಕ್ಸ್ಪೈರಿ ಡೇಟ್, ಅಭಿಯಾನ ವೇಗಗೊಳಿಸಲು ಸಲಹೆ

|
Google Oneindia Kannada News

ಮೇ ತಿಂಗಳಲ್ಲಿ ಮೊದಲ ಹಂತದ ಕೊರೊನಾ ಲಸಿಕಾ ವಿತರಣೆ ಅಭಿಯಾನವನ್ನು ಪೂರ್ಣಗೊಳಿಸುವ ಕುರಿತು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಕೊರೊನಾ ಲಸಿಕೆಗೆ ಎಕ್ಸ್ಪೈರಿ ದಿನಾಂಕವಿರುವ ಕಾರಣ ಅಭಿಯಾನವನ್ನು ವೇಗಗೊಳಿಸುವಂತೆ ತಜ್ಞರು ಹೇಳಿದ್ದಾರೆ.

ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಲಸಿಕೆಗಳಿಗೆ ಎಕ್ಸ್ಪೈರಿ (ಗಡುವು ದಿನಾಂಕ) ಇದ್ದು ಮೇ ತಿಂಗಳಲ್ಲಿ ಮೊದಲ ಹಂತದ ಲಸಿಕೆ ನೀಡುವ ಅಭಿಯಾನವನ್ನು ಪೂರ್ಣಗೊಳಿಸುವುದಕ್ಕೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬೆಂಗಳೂರು:ಕೊರೊನಾ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆ ಸಿಬ್ಬಂದಿ ಒಲವು ಬೆಂಗಳೂರು:ಕೊರೊನಾ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆ ಸಿಬ್ಬಂದಿ ಒಲವು

ಅಭಿಯಾನ ತ್ವರಿತಗೊಳಿಸಬೇಕು

ಅಭಿಯಾನ ತ್ವರಿತಗೊಳಿಸಬೇಕು

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತ್ವರಿತಗೊಳಿಸಬೇಕೆಂದು ತಜ್ಞರು ಹೇಳಿದ್ದಾರೆ. ಕೋವಿಡ್-19 ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಬಾರಿ ಲಸಿಕೆ ಪಡೆದ ಬಳಿಕ ನಿರ್ದಿಷ್ಟ ದಿನಗಳ ಅಂತರದಲ್ಲಿ ಮತ್ತೊಮ್ಮೆ ಕೋವಿಡ್-19 ಲಸಿಕೆ ಪಡೆಯಬೇಕಾಗುತ್ತದೆ.

ಲಸಿಕೆಗಳನ್ನು ಮೇ 5ರೊಳಗೆ ನೀಡಬೇಕು

ಲಸಿಕೆಗಳನ್ನು ಮೇ 5ರೊಳಗೆ ನೀಡಬೇಕು

ಮೊದಲ ಬ್ಯಾಚ್ ನಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಸೇರಿ 9,40,740 ಲಸಿಕೆ ಡೋಸ್ ಗಳನ್ನು ಮೇ.5 ರ ಒಳಗಾಗಿ ನೀಡಬೇಕಿದೆ. ರಾಜ್ಯದಲ್ಲಿ ಈ ವರೆಗೂ 2,66,151 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಟಾರ್ಗೆಟ್ ಇನ್ನೂ ಹೆಚ್ಚಿರುವುದರಿಂದ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ತಯಾರಿಕೆ ಕುರಿತು ಮಾಹಿತಿ

ಕೋವ್ಯಾಕ್ಸಿನ್ ಲಸಿಕೆ ತಯಾರಿಕೆ ಕುರಿತು ಮಾಹಿತಿ

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ನ್ನು ಡಿಸೆಂಬರ್ 2020 ರಲ್ಲಿ ಉತ್ಪಾದನೆ ಮಾಡಲಾಗಿದ್ದು ಮೇ 2021 ಕ್ಕೆ ಎಕ್ಸ್ಪೈರಿ ದಿನಾಂಕವನ್ನು ಹೊಂದಿದೆ.ಈ ಕುರಿತು 'ಇಂಡಿಯನ್ ಎಕ್ಸ್‌ಪ್ರೆಸ್'ವರದಿ ಮಾಡಿದೆ.

ಆದ್ಯತೆ ಆಧಾರದಲ್ಲಿ ಕೊರೊನಾ ಲಸಿಕೆ

ಆದ್ಯತೆ ಆಧಾರದಲ್ಲಿ ಕೊರೊನಾ ಲಸಿಕೆ

ಈಗ ಆದ್ಯತೆಯ ಆಧಾರದಲ್ಲಿ ಕೋವಿಡ್-19 ಲಸಿಕೆಯನ್ನು ಕೊರೊನಾ ವಾರಿಯರ್ಸ್ ಗೆ ನೀಡಲಾಗುತ್ತಿದೆ. ಕೋವಿಡ್-19 ಲಸಿಕೆಯನ್ನು ಉತ್ಪಾದನೆಗೊಂಡ ದಿನದಿಂದ 6 ತಿಂಗಳ ಒಳಗಾಗಿ ಬಳಕೆ ಮಾಡಬೇಕಾಗುತ್ತದೆ.

ಕೊವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ

ಕೊವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ

ಭಾರತದಲ್ಲಿ ಈಗ ಬಳಕೆ ಮಾಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು 2020 ರ ನವೆಂಬರ್ ತಿಂಗಳಲ್ಲಿ ಉತ್ಪಾದನೆ ಮಾಡಲಾಗಿದೆ. ಮೇ.1 2021 ಕ್ಕೆ ಈ ಎರಡೂ ಲಸಿಕೆಗಳ ಗಡುವು (ಎಕ್ಸ್ಪೈರಿ ಡೇಟ್) ಅಂತ್ಯಗೊಳ್ಳಲಿದೆ.
ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಲಸಿಕೆಯನ್ನು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನ.03 ರಂದು ಉತ್ಪಾದಿಸಿದ್ದು ಮೇ.1 2021 ವರೆಗೂ ಎಕ್ಸ್ಪೈರಿ ದಿನಾಂಕವನ್ನು ಹೊಂದಿದೆ.

English summary
The State Government needs to accelerate its vaccination process, experts say, as it is not just about completing the first phase of vaccination within the stipulated time, but also the fact that the vaccines both Covishield and Covaxin which are being given to health workers in the first phase, have a shelf life of only six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X