ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮೇಲೂ ಕೊರೊನಾ ಲಸಿಕೆ ಪ್ರಯೋಗದ ಕುರಿತು ಮಹತ್ವದ ಚರ್ಚೆ

|
Google Oneindia Kannada News

ಬೆಂಗಳೂರು, ಮಾರ್ಚ್ 11: ದೇಶದಲ್ಲಿ ಕೊರೊನಾ ಲಸಿಕೆಯನ್ನು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ.

ಆದರೆ ಮಕ್ಕಳು ಕೂಡ ಅಪಾಯದ ಅಂಚಿನಲ್ಲಿದ್ದಾರೆ, ನಿತ್ಯ ಶಾಲೆಗೆ ಹೋಗುತ್ತಾರೆ, ಈಗಾಗಲೇ ನೂರಾರು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಕರ್ನಾಟಕದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆಕರ್ನಾಟಕದಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆ

ಹೀಗಾಗಿ ಮಕ್ಕಳ ಮೇಲೂ ಕೊರೊನಾ ಲಸಿಕೆ ಪ್ರಯೋಗ ನಡೆಸಬೇಕು ಎನ್ನುವ ಕುರಿತು ಮಹತ್ವದ ಚರ್ಚೆ ನಡೆದಿದೆ. 12 ವರ್ಷಕ್ಕಿಂತ ಕಿರಿಯ ಮಕ್ಕಳ ಆರೋಗ್ಯ ಮುಖ್ಯವಾಗಿರುವುದರಿಂದ ಪ್ರತ್ಯೇಕವಾಗಿ ಅವರಿಗೆ ಲಸಿಕೆ ಟ್ರಯಲ್ ನಡೆಸುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಕಾಟಕ್ಕೆ ಮಹಾರಾಷ್ಟ್ರದ ನಾಸಿಕ್ ಮತ್ತು ಥಾಣೆಯಲ್ಲಿ ಲಾಕ್ ಡೌನ್!ಕೊರೊನಾ ಕಾಟಕ್ಕೆ ಮಹಾರಾಷ್ಟ್ರದ ನಾಸಿಕ್ ಮತ್ತು ಥಾಣೆಯಲ್ಲಿ ಲಾಕ್ ಡೌನ್!

ಕಾನೂನಿನ ಮೂಲಕ ನೋಡುವುದಾದರೆ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಯಸ್ಕರೆಂದು ಗುರುತಿಸಲಾಗುತ್ತಿದ್ದು, ಮಕ್ಕಳೆಂದು ಗುರುತಿಸುವ ಮಾನದಂಡ ಇದೊಂದೇ ಆಗಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ವೈದ್ಯ ಸಮೂಹದಲ್ಲಿ ಕೇಳಿಬಂದಿದೆ.

ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆ

ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆ

ಚರ್ಮದ ದದ್ದುಗಳು, ಜ್ವರ, ಕೀಲು ನೋವು, ಕೀಲು ಊತ, ಮಲ್ಟಿ ಸಿಸ್ಟಮ್ ಇನ್ಲ್ಫಾಮೆಟ್ರಿ ಸಿಂಡ್ರೋಮ್ (ಎಂಐಎಸ್-ಸಿ), ಕವಾಸಾಕಿ ಸಿಂಡ್ರೋಂ ಗಳು ಮಕ್ಕಳಲ್ಲಿಯೂ ಕಂಡುಬರುತ್ತದೆ. ಜೀವಕೋಶಕ್ಕೆ ಸೋಂಕನ್ನು ಹರಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ Ace2 ರಿಸೆಪ್ಟರ್ ಗಳು ಕಡಿಮೆ ಇರುವುದು ಹಾಗೂ ಶ್ವಾಸಕೋಶಕ್ಕೆ ತಗುಲುವ ಪ್ರಮಾಣ ಕಡಿಮೆ ಇರುವುದರಿಂದ ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆ ಇದೆ.

12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಲ್ಲಿ ಲಸಿಕೆ ಟ್ರಯಲ್ ನಡೆದಿಲ್ಲ

12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಲ್ಲಿ ಲಸಿಕೆ ಟ್ರಯಲ್ ನಡೆದಿಲ್ಲ

ಈ ವರೆಗೂ 12 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಕೋವಿಡ್ ಲಸಿಕೆ ಟ್ರಯಲ್ ಗಳು ನಡೆದಿಲ್ಲ. ಆದರೆ ಹಿರಿಯರಿಗೆ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವುದು ಹಾಗೂ ಆ ಮೂಲಕ ಹರ್ಡ್ ಇಮ್ಯುನಿಟಿ ಉಂಟಾಗುವಂತೆ ಮಾಡಿ ಮಕ್ಕಳಿಗೆ ಹರಡದಂತೆ ತಡೆಯಲಾಗುತ್ತಿದೆ.

ಮಕ್ಕಳ ಸುರಕ್ಷತೆ ಮುಖ್ಯ

ಮಕ್ಕಳ ಸುರಕ್ಷತೆ ಮುಖ್ಯ

ಮಕ್ಕಳ ಸುರಕ್ಷತೆ ಬಹುಮುಖ್ಯವಾಗಿದೆ. ಕೊರೊನಾ ಸೋಂಕನ್ನು ಹೊತ್ತು ಸುಲಭವಾಗಿ ಹರಡಿಸಬಲ್ಲವರು ಮಕ್ಕಳೇ ಆಗಿರುತ್ತಾರೆ ಹೀಗಾಗಿ ಮಕ್ಕಳಿಗಾಗಿಯೇ ಪ್ರತ್ಯೇಕ ಲಸಿಕೆ ಟ್ರಯಲ್ ಗಳು ನಡೆಸುವುದಕ್ಕಾಗಿ ಅನುಮತಿ ಕೋರಿ ಕೇಂದ್ರಕ್ಕೆ ಪತ್ರಬರೆಯಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಡಾ. ಎ.ಜೆ. ಜಯ್ ಲಾಲ್ ಗೆ ಡಾ. ಶ್ರೀನಿವಾಸ ಮನವಿ ಮಾಡಿದ್ದಾರೆ.

ವಯಸ್ಕರಲ್ಲಿ ಮೊದಲು ಮೌಲ್ಯಮಾಪನ

ವಯಸ್ಕರಲ್ಲಿ ಮೊದಲು ಮೌಲ್ಯಮಾಪನ

ಹೊಸ ಲಸಿಕೆಗಳಲ್ಲಿ, ಮಕ್ಕಳಿಗೆ ನೀಡುವುದಕ್ಕೂ ಮೊದಲು ಅದನ್ನು ವಯಸ್ಕರಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತ್ಯೇಕ ಲಸಿಕೆಗಾಗಿ ವಿಶ್ವಾದ್ಯಂತ 6 ವರ್ಷದಷ್ಟು ಸಣ್ಣ ಮಕ್ಕಳಿಗೆ ಸಂಬಂಧಿಸಿದಂತೆ ಕ್ಲಿನಿಕಲ್ ಪ್ಯೋಗಗಳು ನಡೆಯುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

English summary
The question of starting vaccine trials on children below 12 was discussed at a recent meeting of the Indian Medical Association’s Standing Committee on Child Health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X