ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಲಸಿಕೆ ಪೂರೈಕೆ ಹೇಗೆ?: ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಆಗಸ್ಟ್ 13: ಕೊರೊನಾ ಲಸಿಕೆ ಪಡೆಯಲು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತಿದೆ. ಕೊರೊನಾವೈರಸ್ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ.

Recommended Video

DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

ಭಾರತವು ದೇಶಾದ್ಯಂತ ಲಸಿಕೆ ಹಾಕಲು ನೀಲನಕ್ಷೆಯನ್ನು ತಯಾರಿಸುತ್ತಿದೆ.ಸಾಕಷ್ಟು ಲಸಿಕೆಯಗಳು ಅಂತಿಮ ಹಂತದಲ್ಲಿವೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ 20 ರಾಷ್ಟ್ರಗಳು ರಷ್ಯಾದ ಈ ಲಸಿಕೆಯನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ. ಆದರೆ ಅಮೆರಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ರಷ್ಯಾದ ಸಲಿಕೆ ಬಗ್ಗೆ ಅಪಸ್ವರ ಎತ್ತಿದ್ದು, ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಈ ಲಸಿಕೆಯನ್ನು ರಷ್ಯಾ ತನ್ನ ದೇಶದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡುತ್ತಿದ್ದು, ಮೊದಲ ಹಂತದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ನೀಡಲಾಗುತ್ತದೆ. ಈಗಿನ ಎರಡು ವ್ಯಾಕ್ಸಿನ್‌ಗಳಲ್ಲದೇ ರಷ್ಯಾ ಇನ್ನೂ 24 ಕೋವಿಡ್ 19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಆರು ಲಸಿಕೆಗಳು ಶೀಘ್ರದಲ್ಲಿಯೇ ಮಾನವನ ಮೇಲೆ ಪ್ರಯೋಗಕ್ಕೆ ರೆಡಿಯಾಗಲಿದೆ.

ಕೇಂದ್ರ ಸರ್ಕಾರದ ಮೇಲ್ವಿಚಾರಣೆ

ಕೇಂದ್ರ ಸರ್ಕಾರದ ಮೇಲ್ವಿಚಾರಣೆ

ಕೊರೊನಾ ಲಸಿಕೆ ಸಂಗ್ರಹ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಮತ್ತು ಲಸಿಕೆ ಸಂಗ್ರಹಕ್ಕೆ ಸಮಾನಾಂತರ ಕಾರ್ಯವಿಧಾನಗಳನ್ನು ರೂಪಿಸದಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.

ಅಂತಾರಾಷ್ಟ್ರೀಯ ತಯಾರಕರೊಂದಿಗೆ ಸಂಪರ್ಕ

ಅಂತಾರಾಷ್ಟ್ರೀಯ ತಯಾರಕರೊಂದಿಗೆ ಸಂಪರ್ಕ

ದೇಶೀಯ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ದೇಶವು ನಿಯಂತ್ರಿಸುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರಂಭದಲ್ಲಿ ಡೋಸೇಜ್ ನೀಡಲು ಭಾರತವು ಅಂತಾರಾಷ್ಟ್ರೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಲಸಿಕೆ ವಿತರಣೆಗೆ ಯೋಜನೆಗಳು

ಲಸಿಕೆ ವಿತರಣೆಗೆ ಯೋಜನೆಗಳು

ಲಸಿಕೆ ವಿತರಣೆಗೆ ಅಗತ್ಯವಾದ ಯೋಜನೆಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ತಜ್ಞರ ಸಮಿತಿ ಪರಿಗಣಿಸಿದೆ. ಇದಕ್ಕಾಗಿ ರಿಯಲ್ ಟೈಮ್ ಟ್ರ್ಯಾಕಿಂಗ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಭಾರತವು ಸ್ಥಳೀಯವಾಗಿ ಎರಡು ಲಸಿಕೆ ತಯಾರಿಕಾ ಸಂಸ್ಥೆಗಳನ್ನು ಹೊಂದಿದೆ

ಭಾರತವು ಸ್ಥಳೀಯವಾಗಿ ಎರಡು ಲಸಿಕೆ ತಯಾರಿಕಾ ಸಂಸ್ಥೆಗಳನ್ನು ಹೊಂದಿದೆ

ಭಾರತವು ಭಾರತ್ ಬಯೋಟೆಕ್ ಹಾಗೂ ಜೈಡಸ್ ಕಾಲ್ಡಿಯಾಂತಹ ಸ್ಥಳೀಯವಾಗಿ ಎರಡು ಲಸಿಕೆ ತಯಾರಿಕಾ ಸಂಸ್ಥೆಗಳನ್ನು ಹೊಂದಿದೆ. ಇದರ ಮಧ್ಯೆ ಭಾರತದಲ್ಲಿ ಅಸ್ಟ್ರಾಜೆನೆಕಾ ಎಂಬ ಲಸಿಕೆಯನ್ನು ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸುತ್ತಿದೆ. ಲಸಿಕೆಯ ಎರಡು ಮತ್ತು ಮೂರನೇ ಪ್ರಯೋಗ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.

ರಷ್ಯಾದ ಲಸಿಕೆ ಕುರಿತು ಅನುಮಾನ

ರಷ್ಯಾದ ಲಸಿಕೆ ಕುರಿತು ಅನುಮಾನ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಬಗ್ಗೆ ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ. ಎರಡು ತಿಂಗಳಿಗಿಂತಲೂ ಕಡಿಮೆ ಪ್ರಯೋಗ ನಡೆದಿದೆ. ಇನ್ನೂ ಮೂರನೇ ಹಂತದ ಪ್ರಯೋಗ ಬಾಕಿ ಇರುವಾಗಲೇ ನೋಂದಣಿ ಮಾಡಲಾಗಿದೆ. ಇದು ಕೋಟ್ಯಂತರ ಜನರ ಜೀವದ ಪ್ರಶ್ನೆ ಈ ಲಸಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿವೆ.

ವಿಶ್ವದಲ್ಲಿ 20 ಮಿಲಿಯನ್‌ಗೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 7,45,000 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕಿದೆ.

English summary
As the world inches closer to a COVID-19 vaccine with many vaccine candidates under final trials, and a few already under production, the Government of India has said that a linear system will be set up to procure COVID-19 vaccines in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X