ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ಓಮಿಕ್ರಾನ್ ರೂಪಾಂತರಕ್ಕೆ ಪ್ರತ್ಯೇಕ ಲಸಿಕೆ ಅಗತ್ಯವಿದೆಯೇ?

|
Google Oneindia Kannada News

ನವದೆಹಲಿ, ಡಿಸೆಂಬರ್ 3: ಭಾರತವು ಮೊದಲ ಎರಡು ಕೊರೊನಾವೈರಸ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳನ್ನು ಗುರುವಾರ ವರದಿ ಮಾಡಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ 46 ವರ್ಷ ಹಾಗೂ 66 ವರ್ಷದ ಇಬ್ಬರು ಪ್ರಯಾಣಿಕರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರ ನಂತರ ಇಬ್ಬರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ನಡೆಸಿದ ಸಂದರ್ಭದಲ್ಲಿ ಇಬ್ಬರ ಮಾದರಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.

ಭಾರತದಲ್ಲಿ ಮೊದಲ ಎರಡು ಓಮಿಕ್ರಾನ್ ರೂಪಾಂತರ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದ್ದು, ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ. ಇದರ ಮಧ್ಯೆ ಬ್ರೌನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಡಾ. ಆಶಿಶ್ ಕೆ. ಝಾ ಅವರೊಂದಿಗೆ ಇಂಡಿಯಾ ಟುಡೆ ಟಿವಿ ಕನ್ಸಲ್ಟಿಂಗ್ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ಪ್ರಮುಖ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಶ್ನೆ: ಓಮಿಕ್ರಾನ್ ರೂಪಾಂತರವು ಡೆಲ್ಟಾವನ್ನು ಮೀರಿಸುವಂತಿದೆಯೇ?

ಪ್ರಶ್ನೆ: ಓಮಿಕ್ರಾನ್ ರೂಪಾಂತರವು ಡೆಲ್ಟಾವನ್ನು ಮೀರಿಸುವಂತಿದೆಯೇ?

ಉತ್ತರ: ದುರದೃಷ್ಟವಶಾತ್, ಇದರ ಬಗ್ಗೆ ಬಹಳ ಮೊದಲೇ ಹೇಳಲಾಗುತ್ತಿದ್ದು, ಅದನ್ನು ಪರಿಗಣಿಸಲು ಸಾಕಷ್ಟು ಕಾರಣಗಳಿವೆ. ನಾವು ಎಲ್ಲಾ ಸಮಯದಲ್ಲೂ ರೂಪಾಂತರಗಳನ್ನು ನೋಡುತ್ತೇವೆ. ಅವುಗಳಲ್ಲಿ ಹೆಚ್ಚಿನ ರೂಪಾಂತರಗಳು ಸಮಸ್ಯೆಯಾಗಿರಲಿಲ್ಲ. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ನಾವು ಓಮಿಕ್ರಾನ್ ಅನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲಿ ಆತಂಕಗೊಳ್ಳುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಅದನ್ನು ನಮ್ಮದೇ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದ್ದು, ಇದು ಸಾಕಷ್ಟು ಗಂಭೀರವಾದ ರೂಪಾಂತರವಾಗಿ ಅಂತ್ಯವಾಗಲಿದೆ.

ಪ್ರಶ್ನೆ: ಓಮಿಕ್ರಾನ್ ರೂಪಾಂತರದ ಬಗ್ಗೆ ನಾವು ಏಕೆ ಚಿಂತಿಸಬೇಕಿದೆ?

ಪ್ರಶ್ನೆ: ಓಮಿಕ್ರಾನ್ ರೂಪಾಂತರದ ಬಗ್ಗೆ ನಾವು ಏಕೆ ಚಿಂತಿಸಬೇಕಿದೆ?

ಉತ್ತರ: ಇಲ್ಲಿ ಮೂರು ಪ್ರಮುಖ ಪ್ರಶ್ನೆಗಳಿವೆ. ಅದು ವೇಗವಾಗಿ ಸೋಂಕನ್ನು ಹರಡಿಸುತ್ತದೆಯೇ?, ಇದು ಸೂಕ್ಷ್ಮ ಕಾಯಿಲೆಯೋ ಅಥವಾ ತೀವ್ರ ಪರಿಣಾಮ ಬೀರುವ ಕಾಯಿಲೆಯೋ?, ನಮ್ಮಲ್ಲಿ ಲಭ್ಯವಿರುವ ಲಸಿಕೆಗಳು ಇದರ ಮೇಲೆ ಪರಿಣಾಮ ಬೀರಬಲ್ಲದೇ?, ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಏಕೆಂದರೆ ಈ ಸೋಂಕು ವೇಗವಾಗಿ ಹರಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಓಮಿಕ್ರಾನ್ ರೂಪಾಂತರವು ಹರಡಿರುವುದು ಇತ್ತೀಚಿನ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ. ನಾವು ಈಗಾಗಲೇ ಓಮಿಕ್ರಾನ್ ಸೋಂಕಿತರಲ್ಲಿ ಬಹುಪಾಲು ಜನರು ಸೌಮ್ಯ ಲಕ್ಷಣಗಳನ್ನು ಹೊಂದಿರುವುದನ್ನು ಕಂಡಿದ್ದೇವೆ, ಹೀಗಾಗಿ ಅದು ಸೌಮ್ಯ ಸ್ವಭಾವದ ರೂಪಾಂತರ ಎನಿಸುತ್ತದೆ. ಅದನ್ನು ನಾವು ಶೀಘ್ರದಲ್ಲಿ ಅರ್ಥ ಮಾಡಿಕೊಳ್ಳುತ್ತೇವೆ. ಲಸಿಕೆ ವಿಷಯದಲ್ಲಿ ನಮಗೆ ಯಾವುದೇ ರೀತಿ ಅಂಕಿ-ಅಂಶಗಳು ಸಿಕ್ಕಿಲ್ಲ. ಆದರೆ ಲಸಿಕೆ ಬಗ್ಗೆ ಕಾಳಜಿ ವಹಿಸುವುದಕ್ಕೆ ನಮ್ಮಲ್ಲಿ ಸಾಕಷ್ಟು ಕಾರಣಗಳಿವೆ. ಲಸಿಕೆಗಳು ಸಂಪೂರ್ಣವಾಗಿ ತಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ, ಬದಲಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಅಂಕಿ-ಅಂಶಗಳನ್ನು ತೆಗೆದುಕೊಳ್ಳಲಿದ್ದು, ಈಗಲೇ ಯಾವುದನ್ನೂ ಊಹಿಸುವುದಕ್ಕೆ ಸಾಧ್ಯವಿಲ್ಲ.

ಪ್ರಶ್ನೆ: ಓಮಿಕ್ರಾನ್ ಸೌಮ್ಯ ಲಕ್ಷಣವನ್ನು ಹೊಂದಿದೆಯೇ?

ಪ್ರಶ್ನೆ: ಓಮಿಕ್ರಾನ್ ಸೌಮ್ಯ ಲಕ್ಷಣವನ್ನು ಹೊಂದಿದೆಯೇ?

ಬಹುಮುಖ್ಯ ಪ್ರಶ್ನೆ: ದಕ್ಷಿಣ ಆಫ್ರಿಕನ್ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಡಾ ಎಂಜೆಲಿಕ್ ಕೊಯೆಟ್ಜಿ, ತಾವು ನೋಡಿದ ಅನೇಕ ಓಮಿಕ್ರಾನ್ ಪ್ರಕರಣಗಳಲ್ಲಿ ಸೌಮ್ಯ ಲಕ್ಷಣಗಳು ಗೋಚರಿಸಿದ್ದು ಯುವ ಸಮುದಾಯಕ್ಕೆ ಹೆಚ್ಚು ಹರಡುವ ಬಗ್ಗೆ ಹೇಳಿದ್ದಾರೆ. ಇದು ಭರವಸೆಯನ್ನು ಮೂಡಿಸುತ್ತದೆಯೇ?

ಉತ್ತರ: ಬಹುಶಃ ಅವರ ಮಾತು ಸತ್ಯ ಎನಿಸುತ್ತದೆ. ಅದು ಸೌಮ್ಯ ಸ್ವಭಾವದ ರೂಪಾಂತರವಾಗಿರಲಿ ಎಂದು ನಾವು ಪ್ರಾರ್ಥಿಸೋಣ, ಹಾಗದಲ್ಲಿ ಬಹಳ ಉತ್ತಮವಾಗಿರುತ್ತದೆ. ಆದರೆ ಡೆಲ್ಟಾ ಕೂಡಾ ಆರಂಭಿಕ ಹಂತದಲ್ಲಿ ಸೌಮ್ಯ ಸ್ವಭಾವದ ಲಕ್ಷಣಗಳನ್ನು ಹೊಂದಿದ್ದು, ಯುವ ಮತ್ತು ಆರೋಗ್ಯವಂತರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ನಾನು ದೃಢಪವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಇದರ ಅರ್ಥ ಓಮಿಕ್ರಾನ್ ಸೋಂಕಿತರಲ್ಲಿ ಕೆಲವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದು ಡೆಲ್ಟಾಗಿಂತ ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ನಮಗೆ ಮತ್ತಷ್ಟು ದಿನಗಳು ಆಗಬಹುದು. ಅವರು ಸರಿಯಾಗಿ ಹೇಳಿದ್ದಾರೆಯೇ ಅಥವಾ ಅವರ ಮಾತು ಸುಳ್ಳಾಗುತ್ತದೆಯೇ ಎಂದು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ.

ಪ್ರಶ್ನೆ: ಇದು ಬೂಸ್ಟರ್ ಡೋಸ್‌ಗಾಗಿ ಪ್ರಕರಣವನ್ನು ಬಲಪಡಿಸುತ್ತದೆಯೇ?

ಪ್ರಶ್ನೆ: ಇದು ಬೂಸ್ಟರ್ ಡೋಸ್‌ಗಾಗಿ ಪ್ರಕರಣವನ್ನು ಬಲಪಡಿಸುತ್ತದೆಯೇ?

ಉತ್ತರ: ಇದು ಒಂದು ಪ್ರಕರಣವಾಗಿದೆ. ಕೊವಿಡ್-19 ಲಸಿಕೆಗಳು ಕೆಲಸ ಮಾಡುವುದನ್ನೇ ಬಿಟ್ಟಿವೆ ಎಂದು ಯಾರೂ ಭಾವಿಸಬೇಕಿಲ್ಲ. ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ರೂಪಾಂತರದ ವಿರುದ್ಧ ಲಸಿಕೆಗಳು ಕಡಿಮೆ ಪರಿಣಾಮಕಾರಿ ಆಗಿವೆಯೇ ಅಥವಾ ತೀರಾ ಕಡಿಮೆ ಪರಿಣಾಮವನ್ನು ಬೀರುತ್ತಿವೆಯೇ ಎಂಬುದನ್ನು ಕಂಡುಕೊಳ್ಳಲಾಗುತ್ತದೆ. ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಈಗಾಗಲೇ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದರ ಮಧ್ಯೆ ಬೂಸ್ಟರ್ ಡೋಸ್ ಸಾಕಷ್ಟು ಸಹಾಯಕವಾಗಲಿದೆ, ಮೇಲಾಗಿ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ವರ್ಗಕ್ಕೆ ಬೂಸ್ಟರ್ ಡೋಸ್ ಅಗತ್ಯವಿದೆ.

ಪ್ರಶ್ನೆ: ಓಮಿಕ್ರಾನ್ ರೂಪಾಂತರ ಹರಡುವಿಕೆಯನ್ನು ತಪ್ಪಿಸುವುದು ಹೇಗೆ?

ಪ್ರಶ್ನೆ: ಓಮಿಕ್ರಾನ್ ರೂಪಾಂತರ ಹರಡುವಿಕೆಯನ್ನು ತಪ್ಪಿಸುವುದು ಹೇಗೆ?

ಉತ್ತರ: ಪ್ರಯಾಣದ ಮೇಲಿನ ನಿರ್ಬಂಧವು ಯಾವುದೇ ರೀತಿ ಕೆಲಸ ಮಾಡುವುದಿಲ್ಲ. ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಜನರು ಸುತ್ತಾಡುತ್ತಲೇ ಇರುತ್ತಾರೆ. ಇಂಥ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕೇ ವಿನಃ, ಪ್ರಯಾಣವನ್ನು ನಿರ್ಬಂಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

ಪ್ರಶ್ನೆ: ಓಮಿಕ್ರಾನ್ ಪತ್ತೆಗೆ RT-PCR ಪರೀಕ್ಷೆಯು ಕೆಲಸ ಮಾಡುತ್ತದೆಯೇ?

ಪ್ರಶ್ನೆ: ಓಮಿಕ್ರಾನ್ ಪತ್ತೆಗೆ RT-PCR ಪರೀಕ್ಷೆಯು ಕೆಲಸ ಮಾಡುತ್ತದೆಯೇ?

ಉತ್ತರ: ಬಹುಶಃ ಇದು ಸ್ವಲ್ಪ ಮಟ್ಟಿಗೆ ಕೆಲಸ ಮಾಡಬಹುದು. ಇದು ಡೆಲ್ಟಾದ ರೀತಿಯಲ್ಲಿ ಪ್ರತಿಯೊಂದು ಅಂಶವನ್ನು ತೆಗೆದುಕೊಳ್ಳದಿದ್ದರೂ, RT-PCR ತುಂಬಾ ಸೂಕ್ಷ್ಮವಾಗಿರುತ್ತದೆ.

ಪ್ರಶ್ನೆ: ಓಮಿಕ್ರಾನ್ ರೂಪಾಂತರಕ್ಕೆ ಪ್ರತ್ಯೇಕ ಲಸಿಕೆ ಅಗತ್ಯವಿದೆಯೇ?

ಪ್ರಶ್ನೆ: ಓಮಿಕ್ರಾನ್ ರೂಪಾಂತರಕ್ಕೆ ಪ್ರತ್ಯೇಕ ಲಸಿಕೆ ಅಗತ್ಯವಿದೆಯೇ?

ಉತ್ತರ: ತ್ವರಿತ ರೂಪಾಂತರಗಳನ್ನು ನೀಡಿದರೆ ಇದು ಸಾಧ್ಯ. ನಮಗೆ ಅದರ ಅಗತ್ಯವಿಲ್ಲದಿರಬಹುದು. ಆದರೆ ಪ್ರಾರಂಭಿಸುವುದು ಉತ್ತಮವಾಗಿರುತ್ತದೆ.

English summary
Dr. Ashish K. Jha, Dean of the Brown University School of Public Health, explains how travel bans won’t work and why Omicron makes a case for boosters. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X