ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್ ಬಳಕೆಯಲ್ಲಿನ ಭಾರತದ ಅನುಭವ ಅಮೆರಿಕ ಚುನಾವಣೆಗೆ ನೆರವು: ಜುಕರ್‌ಬರ್ಗ್

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ಭಾರತ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 200 ವಿಭಿನ್ನ ಚುನಾವಣೆಗಳ ಸಂದರ್ಭದಲ್ಲಿ ಅನುಸರಿಸಿದ ಹೆಜ್ಜೆಗಳು ಸಮಗ್ರತೆಯನ್ನು ರಕ್ಷಿಸಲು ಸಹಾಯ ಮಾಡಿದ್ದು, ಅಮೆರಿಕ ಚುನಾವಣೆಗೂ ಮುನ್ನ ನಿಂದನೆಗಳನ್ನು ತಡೆಯಲು ಮಹತ್ವದ ಪಾತ್ರ ವಹಿಸಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ ಜುಕರ್‌ಬರ್ಗ್ ತಿಳಿಸಿದ್ದಾರೆ.

ಅಮೆರಿಕ ಚುನಾವಣೆ ನಡೆಯಲಿರುವ ಮುಂದಿನ ವಾರ ಫೇಸ್‌ಬುಕ್‌ಗೆ ದೊಡ್ಡ ಅಗ್ನಿಪರೀಕ್ಷೆ ಎಂದಿರುವ ಅವರು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿನ ಸಮಗ್ರತೆಯನ್ನು ರಕ್ಷಿಸಲು ಹೋರಾಟವನ್ನು ಮುಂದವರಿಸುವುದಾಗಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾಷಣದ ವೇಳೆ ಕುಸಿದುಬಿದ್ದು ಆಸ್ಪತ್ರೆ ಸೇರಿದ ಬೆಂಬಲಿಗರುಡೊನಾಲ್ಡ್ ಟ್ರಂಪ್ ಭಾಷಣದ ವೇಳೆ ಕುಸಿದುಬಿದ್ದು ಆಸ್ಪತ್ರೆ ಸೇರಿದ ಬೆಂಬಲಿಗರು

'ನಾವು ಕಳೆದ ನಾಲ್ಕು ವರ್ಷಗಳಲ್ಲಿ ಈ ಎಲ್ಲ ಬದಲಾವಣೆಗಳನ್ನು ಮಾಡಿದ್ದೇವೆ. ಹಾಗೆಯೇ ಅವು ನಮಗೆ ಯುರೋಪ್, ಭಾರತ ಮತ್ತು ಇಂಡೋನೇಷ್ಯಾ ಸೇರಿದಂತೆ ಜಗತ್ತಿನ 200ಕ್ಕೂ ಹೆಚ್ಚು ವಿಭಿನ್ನ ಚುನಾವಣೆಗಳಲ್ಲಿ ಸಮಗ್ರತೆ ಕಾಪಾಡಲು ನೆರವು ನೀಡಿವೆ. ಹಾಗೆಯೇ ಅವು ಮುಖ್ಯವಾಗಿ ಅಮೆರಿಕದ ಮುಂದಿನ ಚುನಾವಣೆಗೂ ಮುನ್ನ ನಡೆಯುವ ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನು ತಡೆದಿದೆ' ಎಂದು ಹೇಳಿದ್ದಾರೆ.

Experience Of Polls In India Plays Important Role Ahead Of US Elections: Zuckerberg

ಮತದಾರರ ಶೋಷಣೆಯಂತಹ ಸಮಸ್ಯೆಗಳ ಬಗ್ಗೆ ಕಂಪೆನಿ ಗಮನ ಹರಿಸಿದ್ದು, ನಾಗರಿಕ ಹಕ್ಕು ನಾಯಕರು ಸೇರಿದಂತೆ ಪರಿಣತರ ಮೂಲಕ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಫೇಸ್‌ಬುಕ್‌ನ ಭದ್ರತಾ ತಂಡಗಳು ನಾಲ್ಕು ವರ್ಷಗಳ ಹಿಂದೆ ಹ್ಯಾಕಿಂಗ್‌ನಂತಹ ಸಾಂಪ್ರದಾಯಿಕ ಬೆದರಿಕೆಗಳ ಬಗ್ಗೆ ಗಮನ ಹರಿಸುತ್ತಿದ್ದವು. ಆದರೆ ಈಗ ಹೊಸತನ್ನು ನೋಡಲಾಗುತ್ತಿದೆ. ನಕಲಿ ಖಾತೆಗಳ ಬಳಕೆ, ಸಂಯೋಜಿತ ಮಧ್ಯಪ್ರವೇಶದ ಪ್ರಚಾರಗಳು, ಸುಳ್ಳು ಮಾಹಿತಿಗಳ ರವಾನೆ ಮುಂತಾದವು ಪ್ರಮುಖ ಸವಾಲಾಗಿವೆ ಎಂದಿದ್ದಾರೆ.

ಬಿಡೆನ್‌ಗೆ ಮತ ಹಾಕಿದರೆ ಕ್ರಿಸ್‌ಮಸ್ ಹಬ್ಬವೇ ಇರುವುದಿಲ್ಲ: ಟ್ರಂಪ್ಬಿಡೆನ್‌ಗೆ ಮತ ಹಾಕಿದರೆ ಕ್ರಿಸ್‌ಮಸ್ ಹಬ್ಬವೇ ಇರುವುದಿಲ್ಲ: ಟ್ರಂಪ್

ಈ ರೀತಿಯ ಬೆದರಿಕೆಗಳನ್ನು ಪತ್ತೆಹಚ್ಚಿ ತೆಗೆದುಹಾಕುವ ಸಲುವಾಗಿ ಮತ್ತಷ್ಟು ಅತ್ಯಾಧುನಿಕ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಕಳೆದ ಒಂದು ವರ್ಷದಲ್ಲಿ ರಷ್ಯಾ, ಇರಾನ್, ಚೀನಾ ಸೇರಿದಂತೆ ವಿವಿಧೆಡೆಗಳಿಂದ ನೂರಾರು ನೆಟ್‌ವರ್ಕ್‌ಗಳನ್ನು ತೆಗೆದುಹಾಕಿದ್ದೇವೆ. ಪ್ರತಿ ದಿನ ಲಕ್ಷಾಂತರ ನಿಂದನಾತ್ಮಕ ಖಾತೆಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

English summary
Facebook CEO Mark Zuckerberg said, the steps taken by Facebook during elections of India and other countries played an important role in stopping abuse ahead of US elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X