ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?

ಎಕ್ಸಿಟ್ ಪೋಲ್ 2017ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಉತ್ತರಪ್ರದೇಶದ ಏಳನೇ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಘೋಷಣೆಯಾಗಲಿದೆ. ಇಲ್ಲಿ ತನಕ ಎಕ್ಸಿಟ್ ಪೋಲ್ ಎಷ್ಟು ನಿಜವಾಗಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು? | Oneindia Kannada

ಬೆಂಗಳೂರು, ಮಾರ್ಚ್ 09: ಮಾರ್ಚ್ 9 ರ ಸಂಜೆ 5.30ರ ನಂತರದ ಎಕ್ಸಿಟ್ ಪೋಲ್ 2017ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಉತ್ತರಪ್ರದೇಶದ ಏಳನೇ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಘೋಷಣೆಯಾಗಲಿದೆ. ಇಲ್ಲಿ ತನಕ ಎಕ್ಸಿಟ್ ಪೋಲ್ ಎಷ್ಟು ನಿಜವಾಗಿದೆ? ಎಷ್ಟು ಸುಳ್ಳಾಗಿದೆ. ಸಂಪೂರ್ಣ ಹಿನ್ನೋಟ ಇಲ್ಲಿದೆ..

ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಯಾವತ್ತಿಗೂ ಕುತೂಹಲಕಾರಿಯಾಗಿರುತ್ತದೆ. ಎಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿಯುವ ಬಾಬಾಗಳಂತೆ ಎಲ್ಲಾ ಮಾಧ್ಯಮಗಳ ಮುಂದೆ ಆಸಕ್ತರು ಕುಳಿತು ವೀಕ್ಷಿಸುತ್ತಾರೆ.

ಕೆಲವೊಮ್ಮೆ ಎಕ್ಸಿಟ್ ಪೋಲ್ ಬಂಪರ್ ಫಲಿತಾಂಶ ನೀಡಿದರೆ, ಮತ್ತೊಮ್ಮೆ ಸಂಪೂರ್ಣ ವ್ಯತಿರಿಕ್ತ ರಿಸಲ್ಟ್ ನೀಡುತ್ತದೆ. ಇಲ್ಲಿ ತನಕ ಯಾವ ಸಮೀಕ್ಷೆ ಫಲ ಕಂಡಿದೆ ನೋಡೋಣ..[ಪಂಚ ರಾಜ್ಯಗಳ ಮತಎಣಿಕೆಗೆ ದಿನಗಣನೆ: ಸಮೀಕ್ಷೆ ಏನು ಹೇಳುತ್ತಿದೆ?]

* ಫೆಬ್ರವರಿ 2015ರಲ್ಲಿ ದೆಹಲಿ ಚುನಾವಣೆಯಲ್ಲಿ ಇಂಡಿಯಾ ನ್ಯೂಸ್- ಆಕ್ಸಿಸ್ ನೀಡಿದ ಸಮೀಕ್ಷೆ ವರದಿ ಬಹುತೇಕ ನಿಜವಾಯಿತು. ಆಮ್ ಆದ್ಮಿ ಪಕ್ಷ 53 ಸ್ಥಾನಗಳಿಸಲಿದೆ ಎಂದಿತ್ತು. ಎಎಪಿ 67 ಸ್ಥಾನ ಗಳಿಸಿ ಅಧಿಕಾರ ಹಿಡಿಯಿತು.[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ] ಮಿಕ್ಕ ಸಮೀಕ್ಷಾ ವರದಿಗಳ ಹಿನ್ನೋಟ ಮುಂದೆ ಓದಿ...

ಬಿಹಾರದಲ್ಲಿ ಬಿಜೆಪಿ ನಿರೀಕ್ಷೆ ಹುಸಿ

ಬಿಹಾರದಲ್ಲಿ ಬಿಜೆಪಿ ನಿರೀಕ್ಷೆ ಹುಸಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷಾ ಸಂಸ್ಥೆಗಳು ಮಣ್ಣುಮುಕ್ಕಬೇಕಾಯಿತು. ಚುನಾವಣಾ ಪೂರ್ವ ಹಾಗೂ ಎಕ್ಸಿಟ್ ಪೋಲ್ ಎಲ್ಲವೂ ಪೊಳ್ಳಾಯಿತು.
ಜನತಾದಳ -ಯುನೈಟೆಡ್, ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್ ಮಹಾಮೈತ್ರಿಕೂಟ 178 ಸ್ಥಾನ ಗಳಿಸಿ ಎಲ್ಲರನ್ನು ಅಚ್ಚರಿಗೆ ದೂಡಿದವು. ಎಲ್ಲರೂ ಬಿಜೆಪಿ ಹಾಗೂ ಮೈತ್ರಿಕೂಟಕ್ಕೆ 100 ಸ್ಥಾನ ಲಭಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದರು. ಬಿಜೆಪಿಗೆ 58 ಸ್ಥಾನವಷ್ಟೇ ದಕ್ಕಿತು.

ಯುಪಿಯಲ್ಲಿ ಎಸ್ಪಿ ರಾಜ್ಯಭಾರ

ಯುಪಿಯಲ್ಲಿ ಎಸ್ಪಿ ರಾಜ್ಯಭಾರ

2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲಲಿದೆ ಎಂದು ಹೆಡ್ ಲೈನ್ಸ್ ಟುಡೇ ನೀಡಿದ ಸಮೀಕ್ಷೆ ನಿಜವಾಯಿತು. ಸಮಾಜವಾದಿ ಪಕ್ಷ 192 ರಿಂದ 210 ಸ್ಥಾನ ಗಳಿಸಲಿದೆ ಎಂದು ಹೆಡ್ ಲೈನ್ ಟುಡೇ ಹೇಳಿತ್ತು. ಕೊನೆಗೆ ಎಸ್ ಪಿ 224 ಸ್ಥಾನ ಬಾಚಿಕೊಂಡಿತು. ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾದರು.

2016ರ ತಮಿಳುನಾಡು ಎಲೆಕ್ಷನ್

2016ರ ತಮಿಳುನಾಡು ಎಲೆಕ್ಷನ್

2016ರಲ್ಲಿ ತಮಿಳುನಾಡಿನಲ್ಲಿ ಕರುಣಾನಿಧಿ ಅವರ ಡಿಎಂಕೆ ಪಕ್ಷಕ್ಕೆ ಗೆಲುವು ಎಂದು ಎಲ್ಲಾ ಸಮೀಕ್ಷೆಗಳು ಹೇಳಿದ್ದವು. ಡಿಎಂಕೆಗೆ 110 ರಿಂದ 140 ಸೀಟು ಸಿಗುವ ನಿರೀಕ್ಷೆಯಿತ್ತು. ಆದರೆ, ಜೆ ಜಯಲಲಿತಾ ಅವರ ಎಐಎಡಿಎಂಕೆ 136 ಸ್ಥಾನ ಗಳಿಸಿ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ.

ಎಲ್ಲಾ ಸಮೀಕ್ಷೆ ನಿಜವಾಯ್ತು

ಎಲ್ಲಾ ಸಮೀಕ್ಷೆ ನಿಜವಾಯ್ತು

ಪಶ್ಚಿಮ ಬಂಗಾಲದ ಚುನಾವಣೆ ವಿಷಯದಲ್ಲಿ ಬಹುತೇಕ ಎಲ್ಲ ಸಮೀಕ್ಷಾ ವರದಿಗಳು ನಿಜವಾಯ್ತು. 148 ಸ್ಥಾನದ ನಿರೀಕ್ಷೆಗೂ ಮೀರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ 211 ಸ್ಥಾನ ಗಳಿಸಿ ಅಧಿಕಾರ ಸ್ಥಾಪಿಸಿತು.

ಲೋಕಸಭಾ ಚುನಾವಣೆ

ಲೋಕಸಭಾ ಚುನಾವಣೆ

2014ರ ಲೋಕಸಭೆ ಚುನಾವಣೆ ಸಮೀಕ್ಷೆ ಬಹಳ ಮುಖ್ಯವಾಯಿತು. ಸಮೀಕ್ಷಾ ವರದಿಗಳ ಬಗ್ಗೆ ನಂಬಿಕೆ ಉಂಟಾಯಿತು ಸಾಕ್ಷಿ ಸಿಕ್ಕಿತು. ಎನ್ ಡಿಎ ಅಧಿಕಾರಕ್ಕೆ ಎಂದು ಬಹುತೇಕ ಎಲ್ಲರೂ ಹೇಳಿದರು. ನ್ಯೂಸ್ 24 ಟುಡೇ -ಚಾಣಕ್ಯ ವರದಿ ನಿಖರವಾಗಿತ್ತು. ಬಿಜೆಪಿ 282, ಎನ್ ಡಿಎ 334 ಗಳಿಸಿದ್ದು, ಕಾಂಗ್ರೆಸ್ 45 ಸ್ಥಾನಗಳೊಂದಿಗೆ ನೆಲಕಚ್ಚಿದ್ದು ಮುಂಚಿತವಾಗಿ ನಿರೀಕ್ಷಿಸಲಾಗಿತ್ತು.

English summary
The much- awaited exit polls for Uttar Pradesh and four other states will be out on Thursday after 5.30 pm. The exit polls had been postponed until March 9 following the death of Samajwadi Party candidate from Alapur seat in UP. The polling for that constituency is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X