ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಗ್ಸಿಟ್ ಪೋಲ್ ಬಗ್ಗೆ ಟ್ವಿಟ್ಟಿಗರು ಏನೆಂದಿದ್ದಾರೆ?

By Manjunatha
|
Google Oneindia Kannada News

ಗುಜರಾತ್ ವಿಧಾನಸಭೆ ಚುನಾವಣೆ ಮತದಾನ ಮುಗಿದಿದೆ, ಇನ್ನು ಡಿಸೆಂಬರ್ 18ಕ್ಕೆ ಚುನಾವಣಾ ಪಲಿತಾಂಶ ಬರುವವರೆಗೆ ಎಕ್ಸಿಟ್ ಪೋಲ್ ನದ್ದೇ ಭರಾಟೆ. ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳು ಗಳು ಒಂದೇ ರೀತಿಯ ಫಲಿತಾಂಶವನ್ನು ಊಹಿಸಿವೆ.

ಈಗ ಪ್ರಕಟವಾಗಿರುವ ಬಹುತೇಕ ಎಲ್ಲ ಚುಣಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತಿದೆ, ಮತ ಹಂಚಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಗಿಂತಲೂ ಕೆಲವು ಪ್ರತಿಶತ ಮುಂದಿದೆ.

ಕಾಂಗ್ರೆಸ್ ಪಕ್ಷವು ಗುಜರಾತ್ ಚುನಾವಣೆಯಲ್ಲಿ 'ಬೌನ್ಸ್ ಬ್ಯಾಕ್' ಮಾಡಲಿದೆ ಎಂದು ಊಹೆ ಮಾಡಲಾಗಿತ್ತು, ಆದರೆ ಎಗ್ಸಿಟ್ ಪೋಲ್ ಸಮೀಕ್ಷೆ ಕಾಂಗ್ರೆಸ್‌ನ ಆಸೆಗೆ ತಣ್ಣೀರೆರಿಚಿದಹಾಗೆ ಕಾಣುತ್ತಿದೆ.

ಎಲ್ಲದಕ್ಕೂ ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ಟ್ವಿಟರ್ ನಲ್ಲಿ ಎಗ್ಸಿಟ್ ಪೋಲ್ ಟ್ರೆಂಡಿಂಗ್‌ನಲ್ಲಿದ್ದು, ಕೋಟ್ಯಾಂತರ ಜನ ಎಗ್ಸಿಟ್ ಪೋಲ್ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಬಿಜೆಪಿ ಪರ ಸಮೀಕ್ಷೆಗಳು ಬಂದಿರುವುದನ್ನು ಸಂಭ್ರಮಿಸುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.

ಕೊನೆಯ ಹತ್ತು ದಿನ

ಚುನಾವಣ ಫಲಿತಾಂಶ ಊಹಿಸುವುದರಲ್ಲಿ ಅಗ್ರಗಣ್ಯರೆಂದೇ ಕರೆಯಲಾಗುವ ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎರಡು ದಿನ ಮೊದಲು ಅವರೇ ಗುಜರಾತ್ ಚುನಾವಣೆಯಲ್ಲಿ ಬಿಜಪಿ ಸೋಲಲಿದೆ ಎಂಬ ಸಮೀಕ್ಷೆ ಮುಂದಿಟ್ಟಿದ್ದರು, ಆದರೆ ಇಂದು ಬರುತ್ತಿರುವ ಎಕ್ಸಿಟ್ ಪೋಲ್ ಗಳನ್ನು ಪ್ರಶ್ನಿಸಲು ಕಾರಣಗಳಿಲ್ಲ ಎಂದು ಹೇಳಿರುವ ಅವರು, ಬಿಜೆಪಿ ಸರಳ ಬಹುಮತ ಗಳಿಸಲಿದೆ ಎಂದು ಸಾರುತ್ತಿರುವ ಎಗ್ಸಿಟ್ ಪೋಲ್ ಅಮೀಕ್ಷೆಯನ್ನು ಒಪ್ಪಿಕೊಂಡಿದ್ದಾರೆ.

ಪಲಿತಾಂಶದ ವರೆಗೆ ಕಾಯಿರಿ

ಕಾಂಗ್ರೆಸ್ ಬೆಂಬಲಿಗರು ಎಗ್ಸಿಟ್ ಪೋಲ್‌ ಸಮೀಕ್ಷೆಯಿಂದ ಉರಿದುಹೋಗಿದ್ದು, ನಿಜವಾದ ಎಗ್ಸಿಟ್ ಡಿಸೆಂಬರ್ 18ರಂದು ಆಗಲಿದೆ, ಅಂದು ಗುಜರಾತ್‌ನಿಂದ ಬಿಜೆಪಿ ಎಗ್ಸಿಟ್ ಆಗಲಿದೆ ಎಂದು ಒಬ್ಬರು ತಮ್ಮ ಬಿಜೆಪಿ ದ್ವೇಷ ಹೊರಹಾಕಿದ್ದಾರೆ. ಪಲಿತಾಂಶದ ಕಾಂಗ್ರೆಸ್ ಗೆಲುವಿಗೆ ಕಾಯುವ ಆಶಾಭಾವನೆ ಇಟ್ಟುಕೊಂಡಿದ್ದಾರೆ ಅವರು.

ರಜೆಗೆ ತೆರಳುತ್ತಾರ ರಾಗಾ

ಮಂಜುಲ್ ಅವರ ಖಾತೆಯಿಂದ ಟ್ವೀಟ್ ಆಗಿರುವ ಕಾರ್ಟೂನ್ ರಾಹುಲ್ ಗಾಂಧಿ ಅವರ ಪ್ರಸ್ತುತ ಸ್ಥಿತಯನ್ನು ವ್ಯಂಗ್ಯದ ಮೂಲಕ ತೋರಿಸುತ್ತಿದೆ. ಎಗ್ಸಿಟ್ ಪೋಲ್ ಸಮೀಕ್ಷೆ ವೀಕ್ಷಿಸುತ್ತಿರುವ ರಾಹುಲ್ ಗಾಂಧಿ ಶಾಕ್ ಗೆ ಒಳಗಾಗಿರುವಂತೆ ಚಿತ್ರಿಸಿರುವ ಕಾರ್ಟೂನ್ ನಗೆ ಉಕ್ಕಿಸುತ್ತದೆ, ರಾಹುಲ್ ಅವರ ಹಿಂದೆ ನಿಂತ ವ್ಯಕ್ತಿ 'ನಿಮಗೆ ಈಗಲೇ ರಜೆಗೆ ತೆರಳಲು ಟಿಕೆಟ್ ಬುಕ್ ಮಾಡಲಾ ಅಥವಾ ಪಲಿತಾಂಶದವರೆಗೆ ಕಾಯುತ್ತೀರಾ? ಎಂದು ಕೇಳುತ್ತಿದ್ದಾನೆ.

ದೆಹಲಿ ಚುನಾವಣೆಯಲ್ಲಿ ಮಕಾಡೆ ಮಲಗಿದ್ದ ಸಮೀಕ್ಷೆ

ಎಗ್ಸಿಟ್ ಪೋಲ್ ಗಳ ಸಮೀಕ್ಷೆ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಕೆಲವರು ಎಗ್ಸಿಟ್ ಪೋಲ್ ಗಳ ವಿಶ್ವಾಸರ್ಹತೆ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಅದಿತಿ ಎಂಬುವರು ದೆಹಲಿ ಚುನಾವಣೆಯಲ್ಲಿ ಯಾವ ಯಾವ ಪ್ರಮುಖ ಎಗ್ಸಿಟ್ ಪೋಲ್ ಸಮೀಕ್ಷಾ ಸಂಸ್ಥೆಗಳು ತಪ್ಪು ಸಮೀಕ್ಷೆ ವರದಿ ನೀಡಿದ್ದವು ಎಂಬುದನ್ನು ಅಂಕಿ ಅಂಶ ಸಮೇತ ಪ್ರಕಟಿಸಿದ್ದಾರೆ.

ಇವಿಎಂ ದುರುಪಯೋಗ

'ಎಲ್ಲ ಎಗ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಪರವಾಗಿರುವುದು ನೋಡಿದರೆ ಎಲ್ಲರೂ ತಮ್ಮ ಸಮೀಕ್ಷೆ ವರದಿಯನ್ನು ಇವಿಎಂ ಮಷೀನ್‌ನಿಂದಲೇ ಪಡೆದಿರುವಂತಿದೆ' ಎಂದು ಮಾರ್ಮಿಕವಾಗಿ ಬಿಜೆಪಿ ಇವಿಎಂ ಮಷೀನುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ ವಂದನಾ ಸಿಂಗ್.

ಇದು ಟಿಆರ್‌ಪಿ ಸಮಯ

ಎಗ್ಸಿಟ್ ಪೋಲ್ ಸಮೀಕ್ಷೆ ಹೇಳಲು ಧಾವಂತ ಮಾಡುತ್ತಿರುವ ಚಾಲೆನ್‌ಗಳ ಬಗ್ಗೆಯೂ ಟೀಕೆ ಟಿಪ್ಪಣಿಗಳು ಟ್ವಿಟರ್‌ನಲ್ಲಿದೆ. ಕೆಲವು ಬುದ್ಧಿವಂತ ಚಾನೆಲ್‌ಗಳು ಬೇರೆ ಚಾನಲ್‌ಗಳ ಸಮೀಕ್ಷೆಗಳನ್ನು ತೆಗೆದುಕೊಂದು ತೋರಿಸಿ ಟಿಆರ್‌ಪಿ ಗಳಿಸುತ್ತಿವೆ ಎಂದು ಆರೋಪಿಸಿದ್ದಾರೆ ಇಲ್ಲೊಬ್ಬರು.

English summary
Gujarath Elections Exit poll is trending in twitter, here are some interesting tweets and reactions about gujarath elections exit poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X