ಚುನಾವಣೋತ್ತರ ಸಮೀಕ್ಷೆಯಲ್ಲಿ 'ಅತಂತ್ರ' ವಾದ ಮಾಧ್ಯಮಗಳು!

Written By:
Subscribe to Oneindia Kannada

ಭಾರೀ ಕುತೂಹಲ ಹುಟ್ಟುಹಾಕಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಒಂದೊಂದಾಗಿ ಹೊರಬಿದ್ದಾಗಿದೆ. ಪಂಜಾಬ್ ನಲ್ಲಿ ಮಾತ್ರ ಹೆಚ್ಚುಕಮ್ಮಿ ಒಂದೇ ಫಲಿತಾಂಶವನ್ನು ಮಾಧ್ಯಮಗಳು ನೀಡುತ್ತಿವೆ. ಉಳಿದಂತೆ ನಾಲ್ಕೂ ರಾಜ್ಯಗಳಲ್ಲಿ ಒಂದೊಂದು ಮಾಧ್ಯಮಗಳು ಒಂದೊಂದು ಫಲಿತಾಂಶವನ್ನು ನೀಡುತ್ತಿವೆ.

ಕಣದಲ್ಲಿರುವ ರಾಜಕೀಯ ಪಕ್ಷಗಳು ತಮ್ಮ ಪರವಾಗಿ ಬಂದ ಫಲಿತಾಂಶಗಳನ್ನು ಇಟ್ಟುಕೊಂಡು ಸಂಭ್ರಮಿಸುತ್ತಿದ್ದರೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಆಮ್ ಆದ್ಮಿ ಪಕ್ಷ, ಪಂಜಾಬ್ ಸಮೀಕ್ಷೆಯನ್ನು ಆಧರಿಸಿ ವಿಜಯೋತ್ಸವಕ್ಕೆ ಕರೆ ನೀಡಿದೆ. (ಎಕ್ಸಿಟ್ ಪೋಲ್: ಸಂಪೂರ್ಣ ಮಾಹಿತಿ)

ಸಮಾಜವಾದಿ ಪಕ್ಷದ ಮುಖಂಡ, ಹಾಲೀ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿಯನ್ನು ದೂರವಿಡಲು ತನ್ನ ಕಡು ರಾಜಕೀಯ ವೈರಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದಿದ್ದಾಗಿದೆ.

Exit poll : Channels prediction not matching with other channels results

ಇಂಡಿಯಾ ಟುಡೇ, ಮೈ ಏಕ್ಸಿಸ್, ಟುಡೇಸ್ ಚಾಣಕ್ಯ, ಸಿಎಸ್ಡಿಎಸ್, ಸಿವೋಟರ್, ಎನ್ಡಿಟಿವಿ, ವಿಎಂಆರ್, ನ್ಯೂಸ್ ಎಕ್ಸ್, ಟೈಮ್ಸ್ ನೌ, ಎಬಿಪಿ ನ್ಯೂಸ್, ನ್ಯೂಸ್ 18 ಸೇರಿದಂತೆ ಪ್ರಮುಖ ವಾಹಿನಿ/ಮಾಧ್ಯಮಗಳು ಎಕ್ಸಿಟ್ ಪೋಲ್ ಫಲಿತಾಂಶ ಬಿತ್ತರಿಸಿದವು.

ಪಂಜಾಬ್ ಹೊರತು ಪಡಿಸಿ ಮಿಕ್ಕೆಲ್ಲಾ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಒಂದೊಂದು ಮಾಧ್ಯಮಗಳು ಹೇಳುವುದು ಒಂದೊಂದು. ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂದು ಕೊನೆಗೆ ಜನಸಾಮಾನ್ಯ, ಇನ್ನೊಂದು ದಿನ ಕಾದರೆ ಫಲಿತಾಂಶವೇ ಹೊರಬೀಳುತ್ತಲ್ಲಾ ಎಂದು ಕಾಯುವುದಂತೂ ಸತ್ಯ.

ಪ್ರಮುಖವಾಗಿ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಜನರ ಚಿತ್ತ ಉತ್ತರಪ್ರದೇಶದತ್ತ. ಸಮೀಕ್ಷೆ ನಡೆಸಿದ ಒಂದಷ್ಟು ಮಾಧ್ಯಮಗಳು ಬಿಜೆಪಿಗೆ ಅಭೂತಪೂರ್ವ ಜಯ ಎಂದರೆ, ಇನ್ನಷ್ಟು ಮಾಧ್ಯಮಗಳು ಉತ್ತರಪ್ರದೇಶದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೇರಲು ಸಾಧ್ಯವಿಲ್ಲ ಎನ್ನುತ್ತಿದೆ.

ಇದೇ ರೀತಿಯ ಫಲಿತಾಂಶವನ್ನು ಗೋವಾ, ಉತ್ತರಾಖಂಡ್ ನಲ್ಲೂ ಮಾಧ್ಯಮಗಳು ನೀಡುತ್ತಿವೆ. ಇನ್ನು ಮಣಿಪುರದಲ್ಲಿ ಒಬ್ಬರು ಕಾಂಗ್ರೆಸ್ ಅಂದರೆ, ಇನ್ನೊಬ್ಬರು ಬಿಜೆಪಿ ಅನ್ನುತ್ತಿವೆ. (ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು)

ತಮಿಳುನಾಡಿನಲ್ಲಿ ದಿವಂಗತ ಸಿಎಂ ಜಯಲಲಿತಾ ರಾಜ್ಯಭಾರದಲ್ಲಿ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಾ ವಾಹಿನಿಗಳು ಎಐಎಡಿಎಂಕೆ ಸ್ವಂತ ಬಲದಿಂದ ಗದ್ದುಗೇರಲು ಸಾಧ್ಯವೇ ಇಲ್ಲ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಹೇಳಿದ್ದವು, ಆ ಎಲ್ಲಾ ಫಲಿತಾಂಶಗಳು ತೋಪು ಹಿಡಿದಿದ್ದು ಗೊತ್ತೇ ಇದೆ.

ಒಟ್ಟಿನಲ್ಲಿ ಐದು ರಾಜ್ಯಗಳ ಪೈಕಿ, ನಾಲ್ಕು ರಾಜ್ಯಗಳಲ್ಲಿ ಯಾವ ಮಾಧ್ಯಮ/ವಾಹಿನಿಗಳೂ ಒಂದಕ್ಕೊಂದು ಹೆಚ್ಚುಕಮ್ಮಿ ತಾಳೆಯಾಗುವ ಫಲಿತಾಂಶ ನೀಡದೇ, ಈ ಚುನಾವಣೋತ್ತರ ಸಮೀಕ್ಷೆಯಲ್ಲಿ ರಾಜಕೀಯ ಪಕ್ಷಗಳಿಗಿಂತ ಮಾಧ್ಯಮಗಳೇ ಅತಂತ್ರವಾದವು ಎನ್ನುವುದು ಸೂಕ್ತ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Five state assembly election exit poll result: Channels and agencies prediction not matching with other channels results.
Please Wait while comments are loading...