ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನೋತ್ತರ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಅಧಿಕಾರಕ್ಕೇರಲಿದೆ ಕಾಂಗ್ರೆಸ್‌

|
Google Oneindia Kannada News

ರಾಯಪುರ (ಚತ್ತೀಸ್‌ಘಡ್), ಡಿಸೆಂಬರ್ 07: ಚತ್ತೀಸ್‌ಘಡ್ ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಗಳು ಒಂದೊಂದಾಗಿ ಹೊರಬರುತ್ತಿವೆ.

ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ: ಎಂಪಿಯಲ್ಲಿ ಕಾಂಗ್ರೆಸ್ ಜಯಭೇರಿಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ: ಎಂಪಿಯಲ್ಲಿ ಕಾಂಗ್ರೆಸ್ ಜಯಭೇರಿ

ಚತ್ತೀಸ್‌ಘಡ್‌ನ 90 ಕ್ಷೇತ್ರಗಳಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುತ್ತಿದೆ ಟೈಮ್ಸ್‌ ನೌ ಸಮೀಕ್ಷೆ. ಕಾಂಗ್ರೆಸ್‌ 35 ಸ್ಥಾನ ಗೆಲ್ಲಲಿದ್ದರೆ, ಬಿಎಸ್‌ಪಿ ಪಕ್ಷವು 7 ಸ್ಥಾನ ಗಳಿಸುತ್ತದೆಯಂತೆ. ಇತರರು ಅಥವಾ ಪಕ್ಷೆತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಚತ್ತೀಸ್‌ಘಡ್‌ನಲ್ಲಿ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು 46 ಕ್ಷೇತ್ರಗಳಲ್ಲಿ ಬಹುಮತ ಸಾಧಿಸಬೇಕಾಗಿದೆ. ಸಮೀಕ್ಷೆ ಪ್ರಕಾರ ಸರಿಯಾಗಿ ಬಹುಮತವನ್ನು ಬಿಜೆಪಿ ಪಡೆಯುತ್ತಿದೆಯಾದರೂ ಒಂದು ಸ್ಥಾನ ಕಡಿಮೆಯಾದರೂ ಸಹ ಮೈತ್ರಿ ಸರ್ಕಾರ ರಚನೆ ಆಗುತ್ತದೆ.

Exit poll Chattishgarh : tv report

ಕಳೆದ ಚತ್ತೀಸ್‌ಘಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ ಪಕ್ಷ 39 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬಿಎಸ್‌ಪಿ 1 ಹಾಗೂ ಪಕ್ಷೇತರ ಒಂದು ಸ್ಥಾನಗಳಲ್ಲಿ ಚುನಾವಣೆ ಗೆದ್ದಿದ್ದರು.

ಟೈಮ್ಸ್‌ನೌ ಮತದಾನೋತ್ತರ ಸಮೀಕ್ಷೆ ಪ್ರಕಾರ ಚತ್ತೀಸ್‌ಘಡ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎನ್ನುತ್ತಿದೆ, ಕಾಂಗ್ರೆಸ್‌ ದ್ವಿತೀಯ ಸ್ಥಾನ ಗಳಿಸುತ್ತಿದೆ.

ಸಿ-ಓಟರ್ ಸಮೀಕ್ಷೆ

ಸಿ-ಓಟರ್ ಸಮೀಕ್ಷೆ

ಸಿ-ಓಟರ್ ಮತ್ತು ಎಬಿಪಿ ನಡೆಸಿರುವ ಮತದಾನೋತ್ತರ ಸಮೀಕ್ಷೆ ಪ್ರಕಾರ ಚತ್ತೀಸ್‌ಘಡ್‌ ಚುನಾವಣೆಯಲ್ಲಿ ಬಿಜೆಪಿಯು 35-43 ಸ್ಥಾನ ಗಳಿಸಿದರೆ, ಕಾಂಗ್ರೆಸ್ 42-50 ಸ್ಥಾನ ಗಳಿಸಲಿದೆ. ಜೆಸಿಸಿ ಮತ್ತು ಬಿಎಸ್‌ಪಿಯು 3-7 ಸ್ಥಾನ ಗಳಿಸಲಿದೆ.

ಇಂಡಿಯಾ ಟಿವಿ ಸಮೀಕ್ಷೆ

ಇಂಡಿಯಾ ಟಿವಿ ಸಮೀಕ್ಷೆ

ಇಂಡಿಯಾ ಟೀವಿ ಮತದಾನೋತ್ತರ ಸಮೀಕ್ಷೆ ಪ್ರಕಾರ ಚತ್ತೀಸ್‌ಘಡ್‌ನಲ್ಲಿ ಬಿಜೆಪಿ 42-50 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ 32-38 ಸ್ಥಾನ ಗೆಲ್ಲಲಿದೆ. ಬಿಎಸ್‌ಪಿ-ಜೆಸಿಸಿ ಒಂದೂ ಸ್ಥಾನ ಗೆಲ್ಲುತ್ತಿಲ್ಲವಾದರೆ ಇತರೆ ಅಥವಾ ಪಕ್ಷೇತರರು 7-11 ಸ್ಥಾನ ಗೆಲ್ಲಲಿದ್ದಾರೆ ಎಂದಿದೆ.

ನ್ಯೂಸ್‌ 24 ಸಮೀಕ್ಷೆ

ನ್ಯೂಸ್‌ 24 ಸಮೀಕ್ಷೆ

ನ್ಯೂಸ್‌ 24 ಮತದಾನೋತ್ತರ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಬಿಜೆಪಿ 36-42 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷವು 45-51 ಸ್ಥಾನ ಗೆಲ್ಲಲಿದೆ. ಜೆಸಿಸಿ-ಬಿಎಸ್‌ಪಿ ಯಾವುದೇ ಸ್ಥಾನ ಗೆಲ್ಲುತ್ತಿಲ್ಲ. ಇತರೆ ಪಕ್ಷಗಳು ಅಥವಾ ಪಕ್ಷೇತರ ರು 4-8 ಸ್ಥಾನ ಗೆಲ್ಲಲಿದ್ದಾರೆ.

ನ್ಯೂಸ್‌ ಎಕ್ಸ್‌ ಸಮೀಕ್ಷೆ

ನ್ಯೂಸ್‌ ಎಕ್ಸ್‌ ಸಮೀಕ್ಷೆ

ನ್ಯೂಸ್‌ ಎಕ್ಸ್‌ ಮತ್ತು ನೇತಾ ಜಂಟಿ ಸಮೀಕ್ಷೆ ಪ್ರಕಾರ ಬಿಜೆಪಿ 43 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್‌ 40 ಸ್ಥಾನಗಳನ್ನು ಗೆಲ್ಲಲಿದೆ. ಬಿಎಸ್‌ಪಿ ಒಂದೂ ಸ್ಥಾನ ಗೆಲ್ಲುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ಇತರೆ ಪಕ್ಷಗಳು 7 ಸ್ಥಾನಗಳಲ್ಲಿ ಗೆಲ್ಲಲಿದೆಯಂತೆ.

ರಿಪಬ್ಲಿಕ್‌ ಮತ್ತು ಜನ್‌ ಕಿ ಬಾತ್

ರಿಪಬ್ಲಿಕ್‌ ಮತ್ತು ಜನ್‌ ಕಿ ಬಾತ್

ರಿಪಬ್ಲಿಕ್ ಟಿವಿ ಮತ್ತು ಜನ್‌ ಕಿ ಬಾತ್ ಒಟ್ಟು ಸೇರಿ ಮಾಡಿರುವ ಛತ್ತೀಸ್‌ಘಡ್‌ ಮತದಾನೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 40-48 ಸ್ಥಾನ ಗೆದ್ದರೆ, ಕಾಂಗ್ರೆಸ್‌ 37-43 ಸ್ಥಾನ ಗೆಲ್ಲಲಿದೆ, ಇತರೆ ಪಕ್ಷಗಳು 5-6 ಸ್ಥಾನ ಗೆಲ್ಲಲಿದೆ.

ಇಂಡಿಯಾ ಟುಡೆ ಸಮೀಕ್ಷೆ

ಇಂಡಿಯಾ ಟುಡೆ ಸಮೀಕ್ಷೆ

ಇಂಡಿಯಾ ಟುಡೆ ಮತ್ತು ಆಕ್ಸಿಸ್ ನ ಮತದಾನೋತ್ತರ ಸಮೀಕ್ಷೆ ಪ್ರಕಾರ ಛತ್ತಿಸ್‌ಘಡ್‌ನಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸಲಿದೆ. ಕಾಂಗ್ರೆಸ್‌ 55-65 ಸ್ಥಾನ ಗಳಿಸಿದರೆ, ಬಿಜೆಪಿ 21-31 ಸ್ಥಾನ ಗಳಿಸಲಿದೆ. ಇತರೆ ಪಕ್ಷಗಳು 4-8 ಸ್ಥಾನ ಗಳಿಸಲಿವೆ.

ಎಬಿಪಿ-ಸಿಎಸ್‌ಡಿಸಿ ಸಮೀಕ್ಷೆ

ಎಬಿಪಿ-ಸಿಎಸ್‌ಡಿಸಿ ಸಮೀಕ್ಷೆ

ಎಬಿಪಿ ಮತ್ತು ಸಿಎಸ್‌ಡಿಸಿ ಮತದಾನೋತ್ತರ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಬಿಜೆಪಿಯು ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 52 ಸ್ಥಾನ, ಕಾಂಗ್ರೆಸ್‌ಗೆ 35, ಇತರೆ ಪಕ್ಷಗಳಿಗೆ 3 ಸ್ಥಾನಗಳು ದೊರೆಯಲಿವೆ.

English summary
Results of Chattisgarh assembly elections Exit Poll 2018 are out now. Read latest updates related to exit poll done. BJP and Congress are major parties here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X