ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೋತ್ತರ ಸಮೀಕ್ಷೆ : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು

ಒಟ್ಟು 403 ಸ್ಥಾನಗಳಿರುವ ಉತ್ತರಪ್ರದೇಶದಲ್ಲಿ ಸ್ಪಷ್ಟ ಬಹುಮತ ಗಳಿಸಲು 202 ಸ್ಥಾನಗಳು ಗಳಿಸಬೇಕಾಗಿರುವುದು ಅಗತ್ಯ. ಅಂತಿಮವಾಗಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿವೆ ಎಂಬುದು ಮಾರ್ಚ್ 11ರಂದು ಮತಎಣಿಕೆಯ ನಂತರವಷ್ಟೇ ತಿಳಿದುಬರಲಿದೆ.

By Prasad
|
Google Oneindia Kannada News

ನವದೆಹಲಿ, ಮಾರ್ಚ್ 09 : ಸಮಾಜವಾದಿ ಪಕ್ಷಕ್ಕೆ, ಕಾಂಗ್ರೆಸ್ಸಿಗೆ, ಬಹುಜನ ಸಮಾಜವಾದಿ ಪಕ್ಷಕ್ಕೆ ಮತ್ತು ಬಿಜೆಪಿ ಅತ್ಯಂತ ಪ್ರತಿಷ್ಠೆಯ ರಾಜ್ಯವಾಗಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕೇಸರಿ ರಂಗೇರಿಸಲಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದರೆ ಸರಕಾರ ರಚಿಸಲು ಸಾಧ್ಯವೆ?

ಅಪನಗದೀಕರಣದಿಂದ ಉಂಟಾಗಿದ್ದ ತುಸು ಹಿನ್ನಡೆಯ ಹೊರತಾಗಿಯೂ ಭಾರತೀಯ ಜನತಾ ಪಕ್ಷ ಉತ್ತರಪ್ರದೇಶದಲ್ಲಿ ಹೆಚ್ಚುಸ್ಥಾನ ಗಳಿಸುವುದು, ಸಿವೋಟರ್, ನ್ಯೂಸ್ 18 ಮತ್ತು ಎಂಆರ್‌ಸಿ, ಟೈಮ್ಸ್ ನೌ ವಿಎಂಆರ್, ಎಬಿಪಿ ಸಿಎಸ್‌ಡಿಎಸ್, ಇಂಡಿಯಾ ಟುಡೇ-ಮೈ ಆಕ್ಸಿಸ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳಿಂದ ತಿಳಿದುಬಂದಿದೆ. [ಗೋವಾದಲ್ಲಿ ಅತಂತ್ರ ವಿಧಾನಸಭೆ - ಸಿ ವೋಟರ್]

ಒಟ್ಟು 403 ಸ್ಥಾನಗಳಿರುವ ಉತ್ತರಪ್ರದೇಶದಲ್ಲಿ ಸ್ಪಷ್ಟ ಬಹುಮತ ಗಳಿಸಲು 202 ಸ್ಥಾನಗಳು ಗಳಿಸಬೇಕಾಗಿರುವುದು ಅಗತ್ಯ. ಅಂತಿಮವಾಗಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿವೆ ಎಂಬುದು ಮಾರ್ಚ್ 11ರಂದು ಮತಎಣಿಕೆಯ ನಂತರವಷ್ಟೇ ತಿಳಿದುಬರಲಿದೆ. [ಪಂಚ ರಾಜ್ಯಗಳ ಮತಎಣಿಕೆಗೆ ದಿನಗಣನೆ: ಸಮೀಕ್ಷೆ ಏನು ಹೇಳುತ್ತಿದೆ?]

ಒಂದು ವೇಳೆ ಬಿಜೆಪಿಗೆ ಹೆಚ್ಚು ಸ್ಥಾನಗಳು ದಕ್ಕಿದರೆ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಅವರಿಗೆ ಭಾರೀ ಮುಖಭಂಗವಾಗುವುದಂತೂ ಖಚಿತ. ಈ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ.

ನ್ಯೂಸ್ 18 ಮತ್ತು ಎಂಆರ್‌ಸಿ ಸಮೀಕ್ಷೆ

ನ್ಯೂಸ್ 18 ಮತ್ತು ಎಂಆರ್‌ಸಿ ಸಮೀಕ್ಷೆ

ಬಿಜೆಪಿ - 185
ಎಸ್ಪಿ-ಕಾಂಗ್ರೆಸ್ - 120
ಬಿಎಸ್ಪಿ - 90
ಇತರೆ - 8

ಟೈಮ್ಸ್ ನೌ ವಿಎಂಆರ್ ಸಮೀಕ್ಷೆ

ಟೈಮ್ಸ್ ನೌ ವಿಎಂಆರ್ ಸಮೀಕ್ಷೆ

ಬಿಜೆಪಿ 190-210
ಎಸ್ಪಿ-ಕಾಂಗ್ರೆಸ್ 110-130
ಬಿಎಸ್ಪಿ 57-74
ಇತರೆ 8

ಕಳೆದ ಬಾರಿ ಭರ್ಜರಿ ಗೆಲುವು ಗಳಿಸಿದ್ದ ಅಖಿಲೇಶ್

ಕಳೆದ ಬಾರಿ ಭರ್ಜರಿ ಗೆಲುವು ಗಳಿಸಿದ್ದ ಅಖಿಲೇಶ್

ಕಳೆದ ಬಾರಿ ನಡೆದಿದ್ದ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷ 229 ಸ್ಥಾನ ಗಳಿಸಿತ್ತು. ಬಹುಜನ ಸಮಾಜವಾದಿ ಪಕ್ಷ 80 ಮತ್ತು ಬಿಜೆಪಿ 40 ಮತ್ತು ಕಾಂಗ್ರೆಸ್ 28 ಸ್ಥಾನಗಳನ್ನು ಗಳಿಸಿದ್ದವು.

ಮತ್ತೆ ಮ್ಯಾಜಿಕ್ ಮಾಡ್ತಾರಾ ಶಾ

ಮತ್ತೆ ಮ್ಯಾಜಿಕ್ ಮಾಡ್ತಾರಾ ಶಾ

ಉತ್ತರಪ್ರದೇಶದಲ್ಲಿ ಅಮಿತ್ ಶಾ ಅವರು 200ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು 23 rallyಗಳಲ್ಲಿ ಭಾಗವಹಿಸಿದ್ದರು. ಮೋದಿ ಇಷ್ಟೊಂದು ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿತ್ತು.

ಚಾಣಕ್ಯ ಸಮೀಕ್ಷೆ ಏನು ಹೇಳುತ್ತದೆ?

ಚಾಣಕ್ಯ ಸಮೀಕ್ಷೆ ಏನು ಹೇಳುತ್ತದೆ?

ಬಿಜೆಪಿ - 285
ಎಸ್ಪಿ-ಕಾಂಗ್ರೆಸ್ - 88
ಬಿಎಸ್ಪಿ - 27
ಇತರೆ - 3

2014ರಲ್ಲಿ ಲೋಕಸಭೆ ಚುನಾವಣೆ ನಡೆದಾಗಲೂ ಕೂಡ ಉತ್ತರಪ್ರದೇಶದಲ್ಲಿ ಬಿಜೆಪಿ ವಿಜಯಮಾಲೆ ತೊಡುತ್ತದೆಂದು ಚಾಣಕ್ಯ ಮಾಡಿದ್ದ ಸಮೀಕ್ಷೆ ತಿಳಿಸಿತ್ತು. ಈಗಲೂ ಚಾಣಕ್ಯ ಸಮೀಕ್ಷೆ ನಿಜವಾಗುವುದೆ?

ಸಿವೋಟರ್ ಸಮೀಕ್ಷೆ

ಸಿವೋಟರ್ ಸಮೀಕ್ಷೆ

ಎಸ್ಪಿ-ಕಾಂಗ್ರೆಸ್ - 135-147
ಬಿಜೆಪಿ - 155-167
ಬಿಎಸ್ಪಿ - 81-93
ಇತರೆ - 8-20

ಇಂಡಿಯಾ ಟುಡೇ - ಮೈ ಆಕ್ಸಿಸ್ ಸಮೀಕ್ಷೆ

ಇಂಡಿಯಾ ಟುಡೇ - ಮೈ ಆಕ್ಸಿಸ್ ಸಮೀಕ್ಷೆ

ಬಿಜೆಪಿ - 251-279
ಎಸ್ಪಿ-ಕಾಂಗ್ರೆಸ್ - 88-112
ಬಿಎಸ್ಪಿ - 28-42

ಎಬಿಪಿ ಸಿಎಸ್‌ಡಿಎಸ್

ಎಬಿಪಿ ಸಿಎಸ್‌ಡಿಎಸ್

ಎಸ್ಪಿ-ಕಾಂಗ್ರೆಸ್ - 156-169
ಬಿಜೆಪಿ - 164-176
ಬಿಎಸ್ಪಿ - 60-72
ಇತರೆ - 02-06

ನಿಜವಾಗುವುದು ದೇವೇಗೌಡರ ಆತಂಕ

ನಿಜವಾಗುವುದು ದೇವೇಗೌಡರ ಆತಂಕ

ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ಜಯಗಳಿಸಿದರು ಪ್ರಾದೇಶಿಕ ಪಕ್ಷಗಳಿಗೆ ಬಲುಕಷ್ಟ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಆತಂಕ ವ್ಯಕ್ತಪಡಿಸಿದ್ದರು. ಇದು ನಿಜವಾಗುವ ಎಲ್ಲ ಲಕ್ಷಣಗಳೂ ಈಗ ನಿಚ್ಚಳವಾಗಿ ಕಾಣಿಸುತ್ತಿವೆ.

English summary
UP Election Result 2017 Live. Here are the updates for Uttar Pradesh Assembly Election Results 2017. According to News 18 MRC and Times Now VMR exit poll surveys BJP will get chance for form government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X