ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್‌ಮಹಲ್ ಆವರಣದ ಮಸೀದಿಯಲ್ಲಿ ನಿತ್ಯ ನಮಾಜ್ ಗೆ ನಿಷೇಧ

|
Google Oneindia Kannada News

ಆಗ್ರಾ, ನವೆಂಬರ್ 5: ತಾಜ್‌ಮಹಲ್‌ ಆವರಣದಲ್ಲಿರುವ ಮಸೀದಿಯಲ್ಲಿ ಪ್ರತಿನಿತ್ಯ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಶುಕ್ರವಾರ ಮಾತ್ರ ಹೊರಗಿನವರು ನಮಾಜ್ ಲ್ಲಿ ಪಾಲ್ಗೊಳ್ಳಬಹುದು . ಉಳಿದ ದಿನ ಸ್ಥಳೀಯರನ್ನು ಹೊರತುಪಡಿಸಿ ಹೊರಗಿನವರಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

ದೀಪಾವಳಿ ವಿಶೇಷ ಪುರವಣಿ

ಈ ಕುರಿತು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಆದೇಶ ಒಂದನ್ನು ಹೊರಡಿಸಿದೆ. ಸುಪ್ರೀಂಕೋರ್ಟ್ ಈಗಾಗಲೇ ನೀಡಿರುವ ಆದೇಶಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಸ್ಥಳೀಯರನ್ನು ಹೊರತುಪಡಿಸಿ ಉಳಿದವರನ್ನು ಮಸೀದಿ ಒಳಗೆ ತೆರಳಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದೆ.

ತಾಜ್‌ಮಹಲ್ ಶುಕ್ರವಾರ ಸಾರ್ವಜನಿಕರಿಗೆ ಮುಚ್ಚಿರಲಿದೆ

ತಾಜ್‌ಮಹಲ್ ಶುಕ್ರವಾರ ಸಾರ್ವಜನಿಕರಿಗೆ ಮುಚ್ಚಿರಲಿದೆ

ಶುಕ್ರವಾರ ತಾಜ್‌ಮಹಲ್ ಸಾರ್ವಜನಿಕರಿಗೆ ಮುಚ್ಚಿರುವುದರಿಂದ ಸ್ಥಳೀಯರು ಮಧ್ಯಾಹ್ನ 2 ಗಂಟೆಯವರೆಗೆ ಯಾವುದೇ ಶುಲ್ಕ ಪಾವತಿಸದೆ ನಮಾಜ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ತಾಜ್ ಮಹಲ್‌ ನೋಡಲು ಆನ್‌ಲೈನ್‌ನಲ್ಲೇ ಟಿಕೆಟ್ ಬುಕಿಂಗ್ ತಾಜ್ ಮಹಲ್‌ ನೋಡಲು ಆನ್‌ಲೈನ್‌ನಲ್ಲೇ ಟಿಕೆಟ್ ಬುಕಿಂಗ್

ಯಾರು ಬೇಕಾದರೂ ಮಸೀದಿಗೆ ತೆರಳಲು ಅವಕಾಶವಿತ್ತು

ಯಾರು ಬೇಕಾದರೂ ಮಸೀದಿಗೆ ತೆರಳಲು ಅವಕಾಶವಿತ್ತು

ಈ ಹಿಂದೆ ಇತರೆ ದಿನಗಳಲ್ಲಿ ತಾಜ್ ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದವರು ಯಾರು ಬೇಕಾದರೂ ಮಸೀದಿಗೆ ಭೇಟಿ ನೀಡಿ ನಮಾಜ್ ಸಲ್ಲಿಸಲು ಅವಕಾಶವಿತ್ತು. ಇದೀಗ ಟಿಕೆಟ್ ಇದ್ದರೂ ಕೂಡ ಶುಕ್ರವಾರ ಹೊರತುಪಡಿಸಿ ಮಸೀದಿಗೆ ತೆರಳಲು ಅವಕಾಶವಿಲ್ಲ.

ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ! ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!

ಪ್ರವಾಸಿಗರಿಗೆ ನಿರಾಸೆ

ಪ್ರವಾಸಿಗರಿಗೆ ನಿರಾಸೆ

ಭಾನುವಾರ ಅಧಿಕಾರಿಗಳು ವಝ್ ಕೆರೆಯ ಆವರಣವನ್ನು ಮುಚ್ಚಿದ್ದಾರೆ, ಪವಿತ್ರ ನಮಾಜ್ ಸಲ್ಲಿಸುವ ಮುನ್ನ ಇಲ್ಲಿ ಶುಚಿಗೊಂಡು ಪ್ರವಾಸಿಗರು ಪ್ರಾರ್ಥನೆಗೆ ತೆರಳುತ್ತಿದ್ದರು ಇದರಿಂದ ನಿರಾಸೆ ಉಂಟಾಗಿದೆ. ಉಳಿದ ದಿನಗಳಲ್ಲಿ ತಾಜ್‌ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದ ಯಾರು ಬೇಕಾದರೂ ಮಸೀದಿಗೆ ಭೇಟಿ ನೀಡಿ ನಮಾಜ್ ಸಲ್ಲಿಸಲು ಅವಕಾಶವಿತ್ತು.

ಮಸೀದಿಯ ಇಮಾಮ್ ಹಾಗೂ ಸಿಬ್ಬಂದಿಗೂ ಕೂಡ ಪ್ರವೇಶವಿಲ್ಲ

ಮಸೀದಿಯ ಇಮಾಮ್ ಹಾಗೂ ಸಿಬ್ಬಂದಿಗೂ ಕೂಡ ಪ್ರವೇಶವಿಲ್ಲ

ಮಸೀದಿಯ ಇಮಾಮ್ ಹಾಗೂ ಸಿಬ್ಬಂದಿಗೆ ಕೂಡ ಶುಕ್ರವಾರ ಮಾತ್ರ ಬರುವಂತೆ ಸೂಚಿಸಲಾಗಿದೆ. ಮದೀಸಿಯಲ್ಲಿ ಮಪ್ರಾರ್ಥನೆಯ ನೇತೃತ್ವ ವಹಿಸುವ ಇಮಾಮ್ ಸೈಯದ್ ಸಾದಿಕ್ ಅಲಿ ಕುಟುಂಬ ಹಲವು ಸಶಕಗಳಿಂದ ಅಲ್ಲಿದೆ. ಎಎಸ್‌ಐ ನಿರ್ಧಾರ ಬಗ್ಗೆ ಕುಟುಂಬ ಅಚ್ಚರಿ ವ್ಯಕ್ತಪಡಿಸಿದೆ.

English summary
In a controversial move, the Archaeological Survey of India has banned muslim from offering namaz at the mosque in Taj Mahal premises on all day except Fridays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X