ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ ಮೇಲೆ ಪ್ರಭಾವ: ಫೇಸ್‌ಬುಕ್ ಮಾಜಿ ಉದ್ಯೋಗಿ ತೆರೆದಿಟ್ಟ ಮಾಹಿತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಭಾರತ ಸೇರಿದಂತೆ ಜಗತ್ತಿನಾದ್ಯಂತ ಚುನಾವಣೆಗಳ ಮೇಲೆ ಪ್ರಭಾವ ಬೀರುವ ನಕಲಿ ಖಾತೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದ ದಿಗ್ಗಜ ಫೇಸ್‌ಬುಕ್ ನಿರ್ಲಕ್ಷ್ಯ ವಹಿಸಿದೆ ಅಥವಾ ವಿಳಂಬ ಧೋರಣೆ ಅನುಸರಿಸಿದೆ ಎಂದು ಮಾಜಿ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.

ಫೇಸ್‌ಬುಕ್‌ನ ಮಾಜಿ ದತ್ತಾಂಶ ವಿಜ್ಞಾನಿ ಸೋಫಿ ಝಾಂಗ್, ಕಂಪೆನಿಯಲ್ಲಿನ ತಮ್ಮ ಕೊನೆಯ ದಿನದಂದು 6,600 ಪದಗಳ ಸುದೀರ್ಘ ಆಂತರಿಕ ಮೆಮೊ ಬರೆದಿದ್ದು, ಅದು ಬಜ್‌ಫೀಡ್ ನ್ಯೂಸ್‌ನಲ್ಲಿ ಪ್ರಕಟವಾಗಿದೆ. ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವಲ್ಲಿ ಮತ್ತು ಚುನಾವಣೆ ದಿಕ್ಕನ್ನು ಬದಲಿಸುವುದರಲ್ಲಿ ಫೇಸ್‌ಬುಕ್‌ಅನ್ನು ಹೇಗೆ ಬಳಸಿಕೊಳ್ಳಲಾಗಿತ್ತು ಎಂಬುದನ್ನು ಅವರು ತೆರೆದಿಟ್ಟಿದ್ದಾರೆ.

ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್ ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್

'ಫೇಸ್‌ಬುಕ್‌ನಲ್ಲಿ ನಾನು ಕಳೆದ ಮೂರು ವರ್ಷಗಳಲ್ಲಿ ವಿದೇಶಿ ಸರ್ಕಾರಗಳು ನಮ್ಮ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ತಮ್ಮದೇ ನಾಗರಿಕರನ್ನು ದೊಡ್ಡ ಪ್ರಮಾಣದಲ್ಲಿ ದಾರಿ ತಪ್ಪಿಸುವ ಅನೇಕ ಪ್ರಯತ್ನಗಳನ್ನು ಮಾಡಿರುವುದನ್ನು ಕಂಡಿದ್ದೇನೆ. ನಾನೇ ವೈಯಕ್ತಿಕವಾಗಿ ಯಾವುದೇ ದೂರದೃಷ್ಟಿಯಿಲ್ಲದೆ ರಾಷ್ಟ್ರಗಳ ಅಧ್ಯಕ್ಷರಿಗೆ ತೊಂದರೆಯುಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಹಾಗೆಯೇ ಲೆಕ್ಕವಿಲ್ಲದಷ್ಟು ಪ್ರತಿಷ್ಠಿತ ಜಾಗತಿಕ ರಾಜಕೀಯರ ವಿರುದ್ಧ ನಿರ್ಬಂಧ ಹೇರುವ ಕ್ರಮಗಳನ್ನು ಅನುಸರಿಸಿದ್ದೇನೆ' ಎಂದು ಹೇಳಿದ್ದಾರೆ.

Ex Facebook Employee Claims Politically Sophisticated Network Tried To Influence Delhi Polls

ಝಾಂಗ್ ಅವರನ್ನು ಇತ್ತೀಚೆಗಷ್ಟೇ ಫೇಸ್‌ಬುಕ್‌ ಉದ್ಯೋಗ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಫೆಬ್ರವರಿ 8ರಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಕೆಲಸ ಮಾಡುತ್ತಿದ್ದ ಸಾವಿರಾರು ಅನಾಮಿಕರ ರಾಜಕೀಯ ಪ್ರಭಾವಿ ಜಾಲವನ್ನು ಕಿತ್ತುಹಾಕುವ ನಿಟ್ಟಿನಲ್ಲಿ ತೊಡಗಿಕೊಂಡಿದ್ದಾಗಿ ತಿಳಿಸಿದ್ದಾರೆ.

ಸಂಪುಟ ಸಮಿತಿ ಮುಂದೆ ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥರು ಹಾಜರು ಸಂಪುಟ ಸಮಿತಿ ಮುಂದೆ ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥರು ಹಾಜರು

ಝಾಂಗ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ವಕ್ತಾರ ಲಿಜ್ ಬೌರ್ಗೊಯಿಸ್, 'ನಾವು ನಮ್ಮ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ವಿಶೇಷ ಪರಿಣತರ ತಂಡವನ್ನು ಕಟ್ಟಿದ್ದೇವೆ. ಮುಂಚೂಣಿ ತಜ್ಞರ ಜತೆ ಕೆಲಸ ಮಾಡುತ್ತಿದ್ದೇವೆ. ಅನುಚಿತ ವರ್ತನೆಗಳಲ್ಲಿ ತೊಡಗಿದ್ದ 100ಕ್ಕೂ ಹೆಚ್ಚು ಜಾಲಗಳನ್ನು ತೆಗೆದುಹಾಕಿದ್ದೇವೆ' ಎಂದಿದ್ದಾರೆ.

English summary
Sacked employee of Facebook, Sophie Zhang revealed politically sophisticated network had tried to influence Delhi polls 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X