ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ'

|
Google Oneindia Kannada News

Recommended Video

Exit Poll 2019: ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶ | Oneindia kannada

ನವದೆಹಲಿ, ಮೇ 20: ಭಾನುವಾರ ಸಂಜೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶಗಳ ಜೊತೆಗೆ ಸೋಲಿಗೆ ಪರೋಕ್ಷವಾಗಿ ನೆಪಗಳನ್ನು ಕೂಡ ಹುಡುಕಲಾರಂಭಿಸಿವೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಲೇ ಇವಿಎಂ(ವಿದ್ಯುನ್ಮಾನ ಮತಯಂತ್ರ) ದುರ್ಬಳಕೆ ನೆಪ ಮುಂದಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮೀಕ್ಷೆಯನ್ನು ಗಾಸಿಪ್ ಎಂದು ಜರಿದಿದ್ದಾರೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ 2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ಜೊತೆಗೆ ಇವಿಎಂ ಮೇಲೂ ಸಂಶಯ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಪೂರ್ಣ ಬಹುಮತ ನೀಡಲಾಗಿದೆ.

EVM bahana and election gossip is the oppostion reaction over exit poll

ಆದರೆ ಈ ಸಮೀಕ್ಷೆಯನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ಮೇ 23ಕ್ಕೆ ದೇಶದ ಜನತೆಗೆ ಹಾಗೂ ಮಾಧ್ಯಮಗಳಿಗೆ ಅನಿರೀಕ್ಷಿತ ಫಲಿತಾಂಶ ಸಿಗಲಿದೆ. ಎಲ್ಲಾ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಗೌಡ ಹೇಳಿದ್ದಾರೆ.

ಅತ್ತ ರಾಹುಲ್ ಗಾಂಧಿ ಸಮೀಕ್ಷೆ ಬಗ್ಗೆ ಯಾವುದೇ ನೇರ ಹೇಳಿಕೆ ನೀಡದಿದ್ದರೂ ಚುನಾವಣೆ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಸಮೀಕ್ಷೆ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ ಈ ಟ್ವೀಟ್ ಹೊರಬಿದ್ದಿದೆ.

ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ

ರಾಹುಲ್ ಗಾಂಧಿ ಪ್ರಕಾರ' ಎಲೆಕ್ಟೋರಲ್ ಬಾಂಡ್ ಇವಿಎಂ ದುರ್ಬಳಕೆ ಮೋದಿ ಪರವಾದ ಚುನಾವಣಾ ವೇಳಾಪಟ್ಟಿ,ನಮೋ ಟಿವಿ ಮೋದಿಯ ಸೇನೆ, ಕೇದಾರನಾಥ ನಾಟಕ ಹೀಗೆ ಚುನಾವಣಾ ಆಯೋಗಮೋದಿ ಗ್ಯಾಂಗ್ ಎದುರು ಶರಣಾಗಿದೆ. ಚುನಾವಣಾ ಆಯೋಗದ ಮೇಲಿನ ಭಯ ಹಾಗೂ ಗೌರವ ಇನ್ನುಳಿದಿಲ್ಲ ಎಂದು ಹೇಳಿದ್ದಾರೆ.

ಮೋದಿಯನ್ನು ಟೀಕಿಸುತ್ತಿರುವ ಮಮತಾ ಬ್ಯಾನರ್ಜಿ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಉಲ್ಲೇಖಿಸಿದ್ದಾರ ಆದರೆ ಇದನ್ನು ಗಾಸಿಪ್ ಎಂದು ಜರಿದಿರುವ ದೀದಿ ಇದರ ಹಿಂದೆ ಇವಿಎಂ ಹ್ಯಾಕಿಂಗ್ ಷಡ್ಯಂತ್ರವಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆ

ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದು' ನಾನು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ ಇದೊಂದು ಗಾಸಿಪ್, ಇವಿಎಂ ದುರ್ಬಳಕೆ ಮಾಡಲು ಹಾಗೂ ಸಾವಿರಾಋಉ ಇವಿಎಂ ಬದಲಾಯಿಸಲು ಈ ಸಮೀಕ್ಷೆಯೊಂದು ಗೇಮ್ ಪ್ಲ್ಯಾನ್ ಆಗಿದೆ.

ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರಬೇಕು ಎಂದು ನಾನು ಆಗ್ರಹಿಸುತ್ತೇಎ, ಈ ಹೋರಾಟವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ' ಎಂದಿದ್ದಾರೆ.

ಒಟ್ಟಿನಲ್ಲಿ 2014ರಲ್ಲಿ ಚುನಾವಣಾ ಫಲಿತಾಂಶದ ಬಳಿಕ ಇವಿಎಂ ಬಗ್ಗೆ ಆರೋಪಿಸಲಾಗುತ್ತಿತ್ತು ಆದರೆ 2019ರಲ್ಲಿ ಫಲಿತಾಂಶಕ್ಕೂ ಮುನ್ನವೇ ಇವಿಎಂನನ್ನು ಬಲಿ ಹಾಕಲಾಗುತ್ತಿದೆ.

English summary
Opposition parties found once again EM bahana and Election gossip for the Exit poll. Still they are hoping for May 23rd surprise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X