ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೋರೆಗಾಂವ್: ಆರೋಪಿ ಲ್ಯಾಪ್‌ಟಾಪ್ ಹ್ಯಾಕ್, ದಾಖಲೆ ತಿರುಚಲು ಯತ್ನ

|
Google Oneindia Kannada News

ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ವಿಲ್ಸನ್ ಲ್ಯಾಪ್‌ಟಾಪ್‌ನ ಹ್ಯಾಕ್ ಮಾಡಿದ್ದು ದಾಖಲೆಗಳನ್ನು ತಿರುಚಲಾಗಿದೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ.
ಅಮೆರಿಕದ ಖ್ಯಾತ ಸಂಸ್ಥೆ ಆರ್ಸೆನಾಲ್ ಕನ್ಸಲ್ಟಿಂಗ್ ನ ಡಿಜಿಟಲ್ ಫಾರೆನ್ಸಿಕ್ ವರದಿಯಲ್ಲಿ ಈ ಅಂಶವನ್ನು ಸೇರಿಸಿದೆ.

ವಿಲ್ಸನ್ ಲ್ಯಾಪ್‌ಟಾಪಿನಲ್ಲಿ ವೈರಸ್ ಅನ್ನು ಸೇರಿಸಿ ರಿಮೋಟ್ ಆಕ್ಸೆಸ್ ಪಡೆದು ಸುಮಾರು 10 ವಿವಾದಾತ್ಮಕ ಪತ್ರಗಳನ್ನು ಲ್ಯಾಪ್‌ಟಾಪ್‌ನಲ್ಲಿ ಶೇಖರಿಸಲಾಗಿದೆ. ಹಾಗೆಯೇ ಈ ಪತ್ರದಲ್ಲಿರುವ ಫೋಲ್ಡರ್‌ಗಳನ್ನು ವಿಲ್ಸನ್ ಎಂದೂ ಮಾಡದೇ ಇರುವುದು ಆರ್ಸೆನಾಲ್‌ನ ಡಿಜಿಟಲ್ ಫಾರೆನ್ಸಿಕ್ ವರದಿಯಲ್ಲಿ ಬಹಿರಂಗವಾಗಿದೆ.

Bhima

2018ರಲ್ಲಿ ಕೋರೆಗಾಂವ್‌ ಸಂಭ್ರಮದಲ್ಲಿ ಸಂಭವಿಸಿದ ಗಲಭೆಗೆ ವಿಲ್ಸನ್‌ ಸಹ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 1818ರಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಮಹರ್‌ ಜಾತಿಯ ಸೈನಿಕರನ್ನು ಒಳಗೊಂಡ ಈಸ್ಟ್‌ ಇಂಡಿಯಾ ಕಂಪೆನಿಯು ಪೇಶ್ವೆಗಳ ವಿರುದ್ಧ ದಿಗ್ವಿಜಯ ಸಾಧಿಸಿತ್ತು. ಇದರ ನೆನಪಿನ ಸಂಭ್ರಮಾಚರಣೆಯಲ್ಲಿ ಆಯೋಜಿಸಿದ್ದ ಸಮಾರಂಭದ ವೇಳೆ ಗಲಭೆಗಳು ಸಂಭವಿಸಿದ್ದವು.

2018ರ ಜೂನ್‌ನಲ್ಲಿ ಬಂಧಿತರಾಗಿರುವ ವಿಲ್ಸನ್‌ ಅವರ ಮೇಲೆ ಚುನಾಯಿತ ಸರ್ಕಾರವನ್ನು ಉರುಳಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಪಿತೂರಿಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಡುತ್ತಿದೆ.

ಭೀಮಾ ಕೋರೆಗಾಂವ್: ಬಂಧಿತ ಆರೋಪಿಗೆ ಐಎಸ್‌ಐ ನಂಟು ಆರೋಪಭೀಮಾ ಕೋರೆಗಾಂವ್: ಬಂಧಿತ ಆರೋಪಿಗೆ ಐಎಸ್‌ಐ ನಂಟು ಆರೋಪ

ಪುಣೆ ಪೊಲೀಸರು 2018ರಲ್ಲಿ ವಿಲ್ಸನ್‌ ಮನೆಯಿಂದ ವಶಪಡಿಸಿಕೊಂಡ ವಿದ್ಯುನ್ಮಾನ ಸಾಕ್ಷ್ಯವನ್ನು ವಿಶ್ಲೇಷಿಸಲು ವಿಲ್ಸನ್‌ ಪರ ವಕೀಲರು ಮೆಸಾಚುಸೆಟ್ಸ್‌ ಮೂಲದ ಆರ್ಸೆನಲ್‌ ಕನ್ಸಲ್ಟಿಂಗ್‌ ಎಂಬ ಸಂಸ್ಥೆಗೆ ಜವಾಬ್ದಾರಿ ನೀಡಿದ್ದರು. ಸಂಸ್ಥೆಯು ಸಲ್ಲಿಸಿರುವ ವರದಿಯಲ್ಲಿ ಮಹತ್ವದ ಅಂಶಗಳು ಕಂಡುಬಂದಿವೆ.

ವಿದೇಶಿ ವಿಧಿವಿಜ್ಞಾನ ಸಂಸ್ಥೆಯಾದ ಆರ್ಸೆನಲ್‌ 2020ರ ಮಾರ್ಚ್‌ 31ರಲ್ಲಿ ಹಾರ್ಡ್‌ ಡ್ರೈವ್ ಒಂದನ್ನು ಸ್ವೀಕರಿಸಿದ್ದು, ಇದರಲ್ಲಿ ವಿಲ್ಸನ್‌ ಮತ್ತು ಇತರೆ ಆರೋಪಿಗಳಿಗೆ ಸಂಬಂಧಿಸಿದ ಹಲವು ವಿಧಿವಿಜ್ಞಾನ ಚಿತ್ರಗಳು ಮತ್ತು ಪೊಲೀಸ್‌ ಚಟುವಟಿಕೆಗಳು ಅಡಕವಾಗಿದ್ದವು ಎನ್ನಲಾಗಿದೆ.

ಬಹುಮುಖ್ಯವಾಗಿ ವಿಲ್ಸನ್‌ ಕಂಪ್ಯೂಟರ್‌ನಲ್ಲಿ ಮೈಕ್ರೋ ಸಾಫ್ಟ್‌ ವರ್ಡ್‌ ಬಳಸಿ ಸೃಷ್ಟಿಸಲಾದ ಹಲವು ದಾಖಲೆಗಳನ್ನು ನೋಡಿದರೆ, ವಿಲ್ಸನ್‌ ಕಂಪ್ಯೂಟರ್‌ನಲ್ಲಿ 2007ರ ವರ್ಷನ್‌ನ ಮೈಕ್ರೋಸಾಫ್ಟ್‌ ವರ್ಡ್‌ ಇದೆ. ವಿಲ್ಸನ್‌ ಕಂಪ್ಯೂಟರ್‌ನಲ್ಲಿ 2010 ಅಥವಾ 2013ರ ಮೈಕ್ರೋಸಾಫ್ಟ್‌ ವರ್ಡ್‌ ವರ್ಷನ್‌ ಇದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂಬುದನ್ನು ಆರ್ಸೆನಲ್‌ ಪತ್ತೆ ಹಚ್ಚಿದೆ.

ವಿಲ್ಸನ್‌ ಕಂಪ್ಯೂಟರ್‌ ಮಾತ್ರವಲ್ಲದೇ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಹ ಪ್ರತಿವಾದಿಗಳ ಕಂಪ್ಯೂಟರ್‌ ಮೇಲೆಯೂ ಇದೇ ರೀತಿ ದಾಳಿ ನಡೆಸಲಾಗಿದೆ. ವಿಲ್ಸನ್‌ ಅವರ ಲ್ಯಾಪ್‌ಟಾಪ್ಅನ್ನು ಸತತ ಇಪ್ಪತ್ತೆರಡು ತಿಂಗಳು ಕಾಲ ಮಾಲ್ವೇರ್‌ ಮೂಲಕ ದಾಳಿ ಮಾಡಿ, ನಿಗಾವಹಿಸಲಾಗಿತ್ತು ಎಂದು ಆರ್ಸೆನಲ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೊದಲ ಮತ್ತು ಕೊನೆಯ ದೋಷಾರೋಪಣೆ ಮಾಡುವ ದಾಖಲೆಗಳ ಹಂಚಿಕೆಯನ್ನು ವಿಶ್ಲೇಷಿಸಲು ಹಲವು ಮಾನದಂಡ ಮತ್ತು ಅಪಾರ ಶ್ರಮ ವ್ಯವಹಿಸಲಾಗಿದ್ದು, ಸಾಕ್ಷ್ಯ ತಿರುಚುವ ಗಂಭೀರ ಪ್ರಕರಣಗಳ ಪೈಕಿ ಆರ್ಸೆನಲ್‌ಗೆ ಎದುರಾದ ಅತ್ಯಂತ ಗಂಭೀರ ಪ್ರಕರಣ ಇದಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

82 ವರ್ಷದ ಡಾ. ವರವರ ರಾವ್‌ ಅವರು ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬೇರೊಬ್ಬರು ಡಾ. ರಾವ್‌ ಇಮೇಲ್‌ ಬಳಸಿ ಅನುಮಾನಾಸ್ಪದವಾದ ಸರಣಿ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಹೀಗೆ ರಾವ್ ಅವರಿಂದ ಬಂದ ಒಂದು ಇಮೇಲ್‌ನಿಂದಾಗಿ ವಿಲ್ಸನ್‌ ಅವರ ಕಂಪ್ಯೂಟರ್‌ ದಾಳಿಗೀಡಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಇಮೇಲ್‌ಗಳಲ್ಲಿ ನಿರ್ದಿಷ್ಟ ದಾಖಲೆಯನ್ನು ವಿಲ್ಸನ್ ತೆರೆದ ನಂತರ ಅದು ಟ್ರೋಜನ್‌ (ಡಿಜಿಟಲ್‌ ಮಾಲ್‌ವೇರ್‌) ಅನ್ನು ಅವರ ಕಂಪ್ಯೂಟರ್‌ನಲ್ಲಿ ನುಸುಳಿಸಿ ಅಡಕಮಾಡಿದೆ ಎಂದು ವರದಿ ಹೇಳಿದೆ.

English summary
Activist Rona Wilson, accused of fomenting violence in Bhima Koregaon in 2018, moved the Bombay high court on Wednesday seeking the quashing of criminal proceedings against him after an American digital forensics consulting company concluded that fabricated evidence was planted in the electronic evidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X