ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಪ್ರತಿ 15 ನಿಮಿಷಕ್ಕೊಂದು ಮಹಿಳೆ ಮೇಲೆ ಅತ್ಯಾಚಾರ

|
Google Oneindia Kannada News

ನವದೆಹಲಿ, ಜನವರಿ 10: ದೇಶದಲ್ಲಿ ಪ್ರತಿ 15 ನಿಮಿಷಗಳಿಗೊಂದು ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿರುವ ಆತಂಕಕಾರಿ ಮಾಹಿತಿ ಸಮೀಕ್ಷೆಯೊಂದರಿಂದ ಹೊರಬಿದ್ದಿದೆ.

ಕೇಂದ್ರ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, 2018ರಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಒಂದು ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದುಬಂದಿದೆ.

ದಲಿತ ಯುವತಿಯ ಅಪಹರಿಸಿ, ಅತ್ಯಾಚಾರ ಮಾಡಿ, ಕೊಂದು, ನೇಣು ಬಿಗಿದರುದಲಿತ ಯುವತಿಯ ಅಪಹರಿಸಿ, ಅತ್ಯಾಚಾರ ಮಾಡಿ, ಕೊಂದು, ನೇಣು ಬಿಗಿದರು

2012ರಲ್ಲಿ ನವದೆಹಲಿಯ ಬಸ್‌ ಒಂದರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಇಡೀ ದೇಶವೇ ನಲುಗಿ ಹೋಗಿತ್ತು. ಮಹಿಳೆಯು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು.

Every 15 Minutes A Woman Is Raped In India

ರಾಜಕಾರಣಿಗಳು, ನಟರು, ಸಾರ್ವಜನಿಕರು ಸೇರಿದಂತೆ ಈ ದುಷ್ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದರು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಆರೋಪಿಗಳಿಗೆ ಶಿಕ್ಷೆ ನೀಡಿ ಎಂದು ಒತ್ತಾಯಿಸಿದ್ದರು. ಆದರೆ ಅತ್ಯಾಚಾರ ಪ್ರಕರಣಗಳು ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. 2012ಕ್ಕೂ 2020ಕ್ಕೂ ಯಾವುದೇ ವ್ಯಾತ್ಯಾಸವಿಲ್ಲ ಎಂದೆನಿಸುತ್ತದೆ.

2018ರಲ್ಲಿ 34 ಸಾವಿರ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಹಿಳೆಯ ಹಕ್ಕುಗಳ ಪರ ಹೋರಾಡುತ್ತಿರುವ ಅನೇಕ ಸಂಘಟನೆಗಳು ಆರೋಪಿಸಿವೆ.

ಈ ದೇಶವು ಪುರುಷರ ಕೈಯಲ್ಲಿದೆ, ಕೋರ್ಟ್‌ನಲ್ಲಿರುವ ಸಾಕಷ್ಟು ನ್ಯಾಯಮೂರ್ತಿಗಳು ಕೂಡ ಪುರುಷರೇ ಆಗಿದ್ದಾರೆ ಎಂದು ನ್ಯಾಷನಲ್ ಕಮಿಷನ್ ಫಾರ್ ವಿಮೆನ್‌ನ ಲಲಿತ ಕುಮಾರ ಮಂಗಲಂ ತಿಳಿಸಿದ್ದಾರೆ.

2017ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಬಿಜೆಪಿಯ ಕುಲದೀಪ್ ಸಿಂಗ್ ಸೇಂಗರ್ ಜೈಲು ಸೇರಿದ್ದರು. ಅಷ್ಟೇ ಅಲ್ಲದೆ ಯುವತಿಯನ್ನು ಕೊಲೆ ಮಾಡಲು ಕೂಡ ಅವರು ಯತ್ನಿಸಿದ್ದರು.

ಐದು ತಿಂಗಳ ಹಿಂದೆ ಆಕೆ ಚಲಿಸುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿಹೊಡೆಸಿ ಆಕೆಯ ಜೊತೆಗಿದ್ದ ಕುಟುಂಬಸ್ಥರಿಬ್ಬರು ಸಾವನ್ನಪ್ಪಿದ್ದರು. ದೆಹಲಿಯಲ್ಲಿ ಪ್ರತಿ ಕೇಸಿಗೆ 8.5 ತಿಂಗಳುಗಳು ಬೇಕಾಗುತ್ತದೆ.

English summary
One woman reported a rape every 15 minutes on average in India in 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X