ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಸಾರಾಮ್ ಬಿಡುಗಡೆ ಮಾಡಿ' ಫುಲ್ ಟ್ರೆಂಡಿಂಗ್

By Mahesh
|
Google Oneindia Kannada News

ನವದೆಹಲಿ, ಫೆ.11: ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ಅವರನ್ನು ಸುಪ್ರೀಂಕೋರ್ಟಿನ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಕೂಡಾ ಜೈಲಿನಿಂದ ಹೊರಕ್ಕೆ ಕರೆ ತರಲು ಸಾಧ್ಯವಾಗಿಲ್ಲ. ರಾಜಸ್ಥಾನ ಹೈಕೋರ್ಟ್ ಸೋಮವಾರ ಬಾಪು ಅವರ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಳ್ಳಿ ಹಾಕಿದೆ. ಈ ನಡುವೆ ಬಾಪು ಭಕ್ತರು ಅಸಾರಾಮ್ ಬಿಡುಗಡೆ ಮಾಡಿ ಎಂದು ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 376(2) ಹಾಗೂ ಇನ್ನಿತರ ಸೆಕ್ಷನ್ ಅಡಿಯಲ್ಲಿ ಆರೋಪ ಹೊತ್ತಿರುವ ಅಸಾರಾಮ್ ಬಾಪು ಅವರ ಬಿಡುಗಡೆಗಾಗಿ ರಾಮ್ ಜೇಠ್ಮಲಾನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ನಿರ್ಮಲ್ ಜೀತ್ ಕೌರ್ ಅವರು ತಿರಸ್ಕರಿಸಿದ್ದಾರೆ.

ಆಶ್ರಮದಲ್ಲಿದ್ದ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ದೇವಮಾನನನ್ನು ಕಳೆದ ಆಗಸ್ಟ್ ನಲ್ಲೇ ಜೈಲಿಗೆ ಹಾಕಲಾಗಿದೆ. ನಂತರ ಈ ಹಿಂದೆ 2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಅ.6ರಂದು ಕೇಸು ದಾಖಲಿಸಿದ್ದರು. ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿತ್ತು.

ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆದರೆ, ಬಾಪು ನಿರ್ದೋಷಿ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ. ಅವರ ಬಿಡುಗಡೆ ಮಾಡುವಂತೆ ಭಕ್ತರು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

ನಾರಾಯಣ ಸಾಯಿ ತಪ್ಪೊಪ್ಪಿಗೆ ಹೇಳಿಕೆ

ನಾರಾಯಣ ಸಾಯಿ ತಪ್ಪೊಪ್ಪಿಗೆ ಹೇಳಿಕೆ

ಅಪ್ರಾಪ್ತ ವಯಸ್ಸಿನ ಆಶ್ರಮವಾಸಿ ಬಾಲಕಿ ಹಾಗೂ ಈ ಮೊದಲು ಆಶ್ರಮದಲ್ಲಿದ್ದ ಸಹೋದರಿಯರಿಬ್ಬರಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ನಾರಾಯಣ ಸಾಯಿ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.

ಒಂದಲ್ಲಾ ಎಂಟು ಮಂದಿ ಮಹಿಳೆಯರನ್ನು ದೇವರ ಹೆಸರಿನಲ್ಲಿ ನಂಬಿಸಿ ಅತ್ಯಾಚಾರ ಮಾಡಿದ್ದೇನೆ. ಬಹುತೇಕ ಮಹಿಳೆಯರಿಗೆ ಇಷ್ಟವಿಲ್ಲದಿರುವ ಹೊರತಾಗಿಯೂ ಭೂತ ಬಿಡಿಸುವ ನೆಪದಲ್ಲಿ ಅವರೊಂದಿಗೆ ಒತ್ತಾಯಪೂರ್ವಕ ಲೈಂಗಿಕತೆ ನಡೆಸಿದ್ದೇನೆ. ಮಾತ್ರವಲ್ಲ, ಜಮುನಾ ಎಂಬ ಭಕ್ತೆಯೊಬ್ಬಳಿಗೆ ಹುಟ್ಟಿದ ಗಂಡು ಮಗುವಿನ ಅಪ್ಪನೂ ನಾನೇ ಎಂದು ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ದು ಬಾಪು ಅಸಾರಾಮ್ ಬಿಡುಗಡೆಗೂ ಕಂಟಕವಾಗಿದೆ ಎನ್ನಲಾಗಿದೆ.

ಅಮಾಯಕ ಬಾಪುಗೆ ಜೈಲು, ಕ್ರಿಮಿನಲ್ ಗೆ ಮನ್ನಣೆ ಏಕೆ?

ಕಾಂಗ್ರೆಸ್ ಸರ್ಕಾರ ಅಮಾಯಕ ಬಾಪು ಅವರನ್ನು ಜೈಲಿಗೆ ತಳ್ಳಿ, ಕ್ರಿಮಿನಲ್ ಗೆ ಮನ್ನಣೆ ನೀಡುತ್ತಿದೆ.

ಬಾಪು ರಿಲೀಸ್ ಮಾಡಿ ಎಂದರೆ ಏನು ರಿಲೀಸ್?

ಅಸಾರಾಮ್ ಬಾಪು ಅವರನ್ನು ರಿಲೀಸ್ ಮಾಡಿದರೆ ಅದನ್ನು ರಿಲೀಸ್ ಮಾಡಿದಂತೆ !

ಹಿಂದೂ ಸಾಧುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ

ಹಿಂದೂ ಸಾಧುಗಳನ್ನು ಟಾರ್ಗೆಟ್ ಮಾಡಿ ಸುಳ್ಳು ಆರೋಪ ಹೊರೆಸಲಾಗುತ್ತಿದೆ ಎಚ್ಚರ

ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ

ಬಾಪು ನಿರ್ದೋಷಿ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ

ಮಾಧ್ಯಮಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ

ಮಾಧ್ಯಮಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಬಾಪು ಅಸಾರಾಮ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಲಿ

English summary
Even senior Supreme Court lawyer Ram Jethmalani failed to rescue self-proclaimed godman Asaram Bapu who has been left to suffer in jail. Rajathan High Court on Monday, Feb 10 rejected his bail plea again in connection with sexual assault case. Bapuji's supporters trending on twitter non stop past 3 days and demanding
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X