• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಪಿಲ್ ಶರ್ಮಾ ರಂಪ ಮಾಡಿದ್ರೂ ಪ್ಲೇನ್ ನೊಳಕ್ಕೆ ಬಿಟ್ಟಿದ್ರು: ಶಿವಸೇನೆ ಪ್ರಶ್ನೆ

|

ಮುಂಬೈ, ಮಾರ್ಚ್ 27: ಕಳೆದೆರಡು ವಾರಗಳ ಹಿಂದೆ, ಹಾಸ್ಯ ನಟ ಕಪಿಲ್ ಶರ್ಮಾ ಅವರು, ಕುಡಿದು ಬಂದು ವಿಮಾನ ಸಂಸ್ಥೆಯೊಂದರ ಸಿಬ್ಬಂದಿಯೊಡನೆ ರಂಪಾಟ ಮಾಡಿಕೊಂಡಿದ್ದರೂ ಅವರನ್ನು ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ, ನಮ್ಮ ಸಂಸದ (ರವೀಂದ್ರ ಗಾಯಕ್ವಾಡ್) ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದಾಗ ಅವರನ್ನೇ ದೂಷಿಸುತ್ತಿರುವುದು ಯಾವ ನ್ಯಾಯ ಎಂದು ವಿಮಾನ ಸಂಸ್ಥೆಗಳಿಗೆ ಶಿವಸೇನೆ ಸಂಸದರು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಕಳೆದ ಗುರುವಾರ, ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ (ಮಹಾರಾಷ್ಟ್ರದ ಒಸ್ಮಾನಾಬಾದ್ ನ ಸಂಸದ) ಅವರು, ಮಾರ್ಚ್ 23ರಂದು ಏರ್ ಇಂಡಿಯಾ ವಿಮಾನದಲ್ಲಿ ತಮ್ಮ ವಿಚಾರದಲ್ಲಿ ಶಿಷ್ಟಾಚಾರ ಪಾಲಿಸಲಿಲ್ಲವೆಂದು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದರು.[ಈ ಅಶಿಕ್ಷ 'ಶಿಕ್ಷಕ'ನನ್ನು ಜನರು ಅದ್ಹೇಗೆ ಆರಿಸಿದರೋ?]

ಇದಲ್ಲದೆ, ಸಿಟ್ಟಿನ ಭರದಲ್ಲಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಬಾರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಏರ್ ಇಡಿಯಾ ಹಾಗೂ ಇನ್ನಿತರ ಖಾಸಗಿ ವಿಮಾನ ಸಂಸ್ಥೆಗಳು ರವೀಂದ್ರ ಅವರನ್ನು ನಿಷೇಧಿಸಿವೆ.

ಅಲ್ಲೂ ಪ್ರತಿಧ್ವನಿ

ಅಲ್ಲೂ ಪ್ರತಿಧ್ವನಿ

ಈ ವಿಚಾರ ಸೋಮವಾರ ಲೋಕಸಭೆಯಲ್ಲೂ ಪ್ರಸ್ತಾಪವಾಗಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಆಗ, ಶಿವಸೇನೆಯ ಸಂಸದರು ತಮ್ಮ ಸಹ ಸಂಸದನ ಬೆಂಬಲಕ್ಕೆ ಬಂದರು. ಆಗ ಮಾತನಾಡಿದ ಸೇನೆಯ ಎಂಪಿ ಆನಂದರಾವ್ ಅದ್ಸೂಲ್ ಅವರು, ಕಪಿಲ್ ಶರ್ಮಾ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]

ಎಂಪಿ ನಿಷೇಧ ಸಾಧುವೇ ಎಂಬ ಪ್ರಶ್ನೆ

ಎಂಪಿ ನಿಷೇಧ ಸಾಧುವೇ ಎಂಬ ಪ್ರಶ್ನೆ

''ಕುಡಿದು ಬಂದು ವಿಮಾನ ಸಂಸ್ಥೆಯೊಂದರ ಸಿಬ್ಬಂದಿ ಜತೆ ಜಗಳವಾಡಿ ರಂಪಾಟ ಮಾಡಿಕೊಂಡಿದ್ದರೂ, ಕಪಿಲ್ ಶರ್ಮಾ ಅವರನ್ನು ಯಾವುದೇ ವಿಮಾನ ಸಂಸ್ಥೆಯು ನಿರ್ಬಂಧಿಸಲಿಲ್ಲ. ಎರಡು ವಾರಗಳ ಹಿಂದೆ ಕಪಿಲ್ ಅವರು ಸಿಡ್ನಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ಆದರೆ, ರವೀಂದ್ರ ಗಾಯಕ್ವಾಡ್ ಅವರು ರಂಪಾಟ ಮಾಡಿದ ತಕ್ಷಣವೇ ಅವರನ್ನು ವಿಮಾನ ಸಂಸ್ಥೆಗಳು ನಿಷೇಧಿಸಿವೆ. ಒಬ್ಬ ಸಂಸದನನ್ನು ಹೀಗೆ ನಿಷೇಧಿಸಲು ಸಾಧ್ಯವೇ ?'' ಎಂದು ಅದ್ಸೂಲ್ ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಸ್ಪಷ್ಟ ನಿರಾಕರಣೆ

ಕೇಂದ್ರ ಸರ್ಕಾರದ ಸ್ಪಷ್ಟ ನಿರಾಕರಣೆ

ಆದರೆ, ವಿಮಾನ ಸಂಸ್ಥೆಗಳು ರವೀಂದ್ರ ಅವರನ್ನು ನಿರ್ಬಂಧಿಸಿರುವುದನ್ನು ಬೆಂಬಲಿಸಿದ ಕೇಂದ್ರದ ನಾಗರಿಕ ವಿಮಾನ ಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು, ''ವಿಮಾನದೊಳಗೆ ಯಾವುದೇ ಪ್ರಯಾಣಿಕ ರಂಪಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯ ಸಮ್ಮತ'' ಎಂದರು.[ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ]

ಅಶೋಕ ಗಜಪತಿ ರಾಜು ಅಭಿಪ್ರಾಯ

ಅಶೋಕ ಗಜಪತಿ ರಾಜು ಅಭಿಪ್ರಾಯ

''ಸಂಸದನಾಗಿರಲಿ, ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಗೆ ಇರುತ್ತವೆ. ಕಪಿಲ್ ಶರ್ಮಾ ವಿರುದ್ಧ ಆಯಾ ಸಂಸ್ಥೆಗಳು ಕ್ರಮಗೊಳ್ಳುವುದು ಸಂಬಂಧಪಟ್ಟ ವಿಮಾನ ಸಂಸ್ಥೆಗೆ ಬಿಟ್ಟ ವಿಚಾರ. ಆದರೆ, ಸಂಸದರಾಗಿ ರವೀಂದ್ರ ಅವರು ಮಾಡಿದ್ದು ಅಕ್ಷಮ್ಯ'' ಎಂದು ವಿವರಿಸಿದರು.

ಕೇಂದ್ರದ ಸ್ಪಷ್ಟನೆ

ಕೇಂದ್ರದ ಸ್ಪಷ್ಟನೆ

''ಸಿಟ್ಟಿನಿಂದ ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಲ್ಲಿ ಹೊಡೆಯುವಂಥ ಹೀನಾಯ ಕೆಲಸಕ್ಕೆ ಕೈ ಹಾಕಿದ್ದಲ್ಲದೆ, ಮಾಧ್ಯಮಗಳ ಮುಂದೆ ನಿಂತು ಸಿಬ್ಬಂದಿಯನ್ನು 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ ಎಂದು ಘನ ಸಾಧನೆ ಮಾಡಿದಂತೆ ಬಿಂಬಿಸಿರುವುದು ಮತ್ತೊಂದು ಅಪರಾಧ'' ಎಂದು ಸಚಿವರು ಶಿವಸೇನೆಯ ತರ್ಕವನ್ನು ವಿರೋಧಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Comedian Kapil Sharma's drunken brawl on a flight was raised in parliament today as the Shiv Sena defended its MP Ravindra Gaikwad, banned by most major airlines after he assaulted an Air India official with his slipper on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more