ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಜೆಯಲ್ಲಿ ಪಾಕ್ ಪರ ನಿಲ್ಲದ ನೆರೆಯ ಚೀನಾ ನ್ಯಾಯಮೂರ್ತಿ

|
Google Oneindia Kannada News

ದಿ ಹೇಗ್, ಜುಲೈ 18: ಕುಲಭೂಷಣ ಜಾಧವ್ ಗಲ್ಲು ಶಿಕ್ಷೆ ಅಮಾನತು ಪಡಿಸಿ ಮರು ವಿಚಾರಣೆಗೆ ಆದೇಶಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಪರ ಬುಧವಾರ ತೀರ್ಪು ನೀಡಿತ್ತು.

16 ನ್ಯಾಯಮೂರ್ತಿಗಳ ಪೀಠದಲ್ಲಿ ಚೀನಾ ಹಾಗೂ ಪಾಕಿಸ್ತಾನದ ನ್ಯಾಯಮೂರ್ತಿಗಳು ಕೂಡ ಇದ್ದರು. ವಿಪರ್ಯಾಸವೆಂದರೆ ಪಾಕಿಸ್ತಾನದ ಓರ್ವ ನ್ಯಾಯಮೂರ್ತಿ ಹೊರತುಪಡಿಸಿ ಇನ್ಯಾವುದೇ ನ್ಯಾಯಮೂರ್ತಿಗಳು ಪಾಕ್ ಪರ ನಿಂತಿಲ್ಲ.

ನ್ಯಾಯಪೀಠದ ಉಪಾಧ್ಯಕ್ಷರಾಗರುವ ಚೀನಾದ ಕ್ಸ್ಯೂ ಹ್ಯಾಂಕ್ವಿನ್ ಕೂಡ ಭಾರತದ ಪರ ತೀರ್ಪು ನೀಡಿದ್ದಾರೆ. ಸಧ್ಯದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾವು ಪಾಕಿಸ್ತಾನದ ಅತ್ಯಾಪ್ತ ರಾಷ್ಟ್ರವಾಗಿದೆ. ಹೀಗಾಗಿ ಚೀನಾದ ನ್ಯಾಯಮೂರ್ತಿಗಳು ಕೂಡ ಪಾಕ್ ಪರ ನಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ.

Even china judge is not in favour of pak

ಈ ಹಿಂದೆ ಉಗ್ರ ಅಜರ್ ಮೊಹಮ್ಮದ್‌ನನ್ನು ಜಾಗತಿಗೆ ಉಗ್ರ ಎಂಬ ಪಟ್ಟಿಗೆ ಸೇರಿಸುವುದನ್ನೂ ಕೂಡ ಆರಂಭದಲ್ಲಿ ವಿರೋಧಿಸಿದ್ದ ಚೀನಾ ಕೊನೆಯ ಹಂತದಲ್ಲಿ ಒಪ್ಪಿಗೆ ಸೂಚಿಸಿತ್ತು.

ಕುಲಭೂಷಣ್ ಪ್ರಕರಣ: ತೀರ್ಪನ್ನು ಮುಕ್ತಕಂಠದಿಂದ ಸ್ವಾಗತಿಸಿದ ಸುಷ್ಮಾ ಸ್ವರಾಜ್ಕುಲಭೂಷಣ್ ಪ್ರಕರಣ: ತೀರ್ಪನ್ನು ಮುಕ್ತಕಂಠದಿಂದ ಸ್ವಾಗತಿಸಿದ ಸುಷ್ಮಾ ಸ್ವರಾಜ್

ಆಗಲೂ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿತ್ತು. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿಗಳ ಪಟ್ಟಿ

-ನ್ಯಾ. ಅಬ್ದುಲ್‌ಖಾವಿ ಅಹಮದ್ ಯೂಸುಫ್-ಸೊಮಾಲಿಯಾ ಐಸಿಜೆ ಅಧ್ಯಕ್ಷ
-ನ್ಯಾ. ಕ್ಸ್ಯೂ ಹ್ಯಾಂಕ್ವಿನ್ -ಚೀನಾ ಐಸಿಜೆ ಉಪಾಧ್ಯಕ್ಷೆ
ಇತರೆ ಸದಸ್ಯರು
-ನ್ಯಾ.ದಲ್ವೀರ್ ಭಂಡಾರಿ-ಭಾರತ
-ನ್ಯಾ.ಪೀಟರ್ ಟೊಮ್ಕಾ-ಸ್ಲೊವೇಕಿಯಾ
-ನ್ಯಾ. ರಾನಿ ಅಬ್ರಹಂ-ಫ್ರ್ಯಾನ್ಸ್‌
-ನ್ಯಾ. ಮೊಹಮ್ಮದ್ ಬೆನೂನಾ-ಮೊರಾಕೊ
-ನ್ಯಾ.ಆಂಟೋನಿಯೋ ಅಗಸ್ಟೋ-ಕ್ಯಾಂಕಡೊ
-ನ್ಯಾ.ಟ್ರಿಂಡೇಡ್-ಬ್ರೆಜಿಲ್
-ನ್ಯಾ.ಜಾರ್ಜಿಯೋ ಗಾಜಾ-ಇಟಲಿ
-ನ್ಯಾ.ಜಾನ್ ಡೊನೋಗ್-ಅಮೆರಿಕ
-ನ್ಯಾ.ಜುಲಿಯಾ ಸೆಬುಟಿಂಡೆ-ಉಗಾಂಡ
-ನ್ಯಾ.ಪ್ಯಾಟ್ರಿಕ್ ವಿಕ್ಟನ್ ರಾಬಿನ್ ಸನ್-ಜೊಮಾಯ್ಕಾ
-ನ್ಯಾ. ಜೇಮ್ಸ್ ರಿಚರ್ಡ್ ಕ್ರಾಫರ್ಡ್-ಆಸ್ಟ್ರೇಲಿಯಾ
-ನ್ಯಾ. ಕಿರಿಲ್ ಜೆವೊರ್ಜಿಯನ್-ರಷ್ಯಾ
-ನ್ಯಾ. ನವಾಬ್ ಸಲಾಮ್-ಲೆಬನಾನ್
-ನ್ಯಾ.ಯುಜಿ ಯುವಸವಾ-ಜಪಾನ್
-ನ್ಯಾ.ತಸಾದೊ ಖುಸೇನ್ ಜಿಲಾನಿ-ಪಾಕಿಸ್ತಾನ

ಪಾಕಿಸ್ತಾನವು ಕುಲಭೂಷಣ್ ಜಾಧವ್ ಅವರು ಭಾರತದ 'ರಾ' ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಲು ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಬಂದಿದ್ದರು ಎಂದು ಆರೋಪಿಸಿತ್ತು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆಯ ತೀರ್ಪು ಪಾಲನೆ ಆಗಬಹುದೇ? ಈ ಆರೋಪವನ್ನು ಭಾರತ ಅಲ್ಲಗಳೆದಿತ್ತು. ಅವರು ನೌಕಾಪಡೆಯಿಂದ ನಿವೃತ್ತರಾದ ಬಳಿಕ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

ಕಾರ್ಯನಿಮಿತ್ತ ಇರಾನ್‌ಗೆ ತೆರಳಿದ್ದಾಗ ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ತಪ್ಪಿತಸ್ಥ ಎಂದು ಸಾಬೀತುಮಾಡಲು ಪಾಕ್ ಪ್ರಯತ್ನಿಸುತ್ತಿದೆ ಎಂದು ವಾದ ಮಾಡಿತ್ತು.
2016ರ ಮಾರ್ಚ್ 3: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ್ದಾಗಿ ಹೇಳಿದ ಪಾಕಿಸ್ತಾನದ ಅಧಿಕಾರಿಗಳು.

ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ 2016ರ ಮಾರ್ಚ್ 25: ಕುಲಭೂಷಣ್ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ ಪಾಕ್.

ಜಾಧವ್ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪ್ರತಿಪಾದನೆ. ಜಾಧವ್ ಅವರ ರಾಜತಾಂತ್ರಿಕ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ಭಾರತ.

2018ರ ಏಪ್ರಿಲ್ 8: ಖ್ವೆಟ್ಟಾದ ಭಯೋತ್ಪಾದನಾ ವಿರೋಧಿ ಇಲಾಖೆಯಲ್ಲಿ ಜಾಧವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಪಾಕಿಸ್ತಾನ.

2017ರ ಏಪ್ರಿಲ್ 10: ಜಾಧವ್ ಅವರ ವಿರುದ್ಧ ಬೇಹುಗಾರಿಕೆ, ದುಷ್ಕೃತ್ಯ ಮತ್ತು ಭಯೋತ್ಪಾದನೆ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ.

English summary
Even china judge for ICJ is not given favourable order to Pakistan in Kulbhusha Jadhav case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X