ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಭಾಷಣ ಕೇಳಲು ಪರ್ದಾ ಹಾಕಿಕೊಂಡು ಮೈದಾನದಲ್ಲಿ ನಿಲ್ಲುತ್ತಿದ್ದ ಇಂದಿರಾ ಗಾಂಧಿ

By ರಾಜೇಂದ್ರ ಭಟ್ ಕೆ
|
Google Oneindia Kannada News

"ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!" ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ವಾಜಪೇಯಿ ಬದುಕಿದ ರೀತಿಯೇ ಹಾಗೆ!

ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ ಅಧ್ಯಾಪಕನ ಮಗನಾಗಿ. ಹಿಂದೀ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದ ನಂತರ ರಾಜನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಾಲ್ಯದಲ್ಲಿಯೇ ಆರ್.ಎಸ್. ಎಸ್. ಪ್ರಭಾವಕ್ಕೆ ಒಳಗಾದ ವಾಜಪೇಯಿ ಒಬ್ಬ ಪೂರ್ಣಕಾಲಿಕ ಪ್ರಚಾರಕರಾಗಿ ದುಡಿದರು. ದೀನ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ ಮುಖರ್ಜೀ ಅವರ ದಟ್ಟವಾದ ಪ್ರಭಾವಕ್ಕೆ ಒಳಗಾಗಿ ಜನಸಂಘವನ್ನು ಸೇರಿದರು.

ಬಹು ಕಾಲ ಪತ್ರಕರ್ತರಾಗಿ ಕೂಡ ದುಡಿದರು. ಪಾಂಚಜನ್ಯ ಮತ್ತು ರಾಷ್ಟ್ರಧರ್ಮ ಹಿಂದೀ ಪತ್ರಿಕೆಯಲ್ಲಿ ಅವರ ಪ್ರಖರ ಲೇಖನ ಮತ್ತು ಕವಿತೆಗಳು ಭಾರೀ ಜನಪ್ರಿಯ ಆದವು. 1957ರಲ್ಲಿ ಮೊದಲನೇ ಬಾರಿಗೆ ಲೋಕಸಭೆಗೆ ಆಯ್ಕೆ ಆದರು. ವಿಪಕ್ಷದ ಎಂಪಿ ಆಗಿದ್ದ ಅವರು ಲೋಕಸಭೆಯಲ್ಲಿ ಮಾಡುವ ಭಾಷಣಗಳನ್ನು ಗಮನಿಸಿದ ಪ್ರಧಾನಿ ನೆಹರೂ ಅವರ ಬಳಿಗೆ ಬಂದು ಬೆನ್ನು ತಟ್ಟಿ "ನೀನು ಖಂಡಿತವಾಗಿ ಮುಂದೆ ಪ್ರಧಾನಿ ಆಗ್ತೀಯಾ" ಎಂದಿದ್ದರು.

'ಅಟಲ್ ಭೂಜಲ ಯೋಜನೆ'ಗೆ ಕರ್ನಾಟಕದ 14 ಜಿಲ್ಲೆಗಳು'ಅಟಲ್ ಭೂಜಲ ಯೋಜನೆ'ಗೆ ಕರ್ನಾಟಕದ 14 ಜಿಲ್ಲೆಗಳು

1957 ರಿಂದ 2009ರ ವರೆಗೆ 52 ವರ್ಷಗಳ ಕಾಲ ಹತ್ತು ಅವಧಿಗೆ ಅವರು ಲೋಕಸಭೆಯ ಸದಸ್ಯರಾಗಿ ಮೆರೆದರು. 1984ರ ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಲೋಕಸಭೆಯ ಚುನಾವಣೆಯಲ್ಲಿ ಅವರು ಗ್ವಾಲಿಯರ್ ನಿಂದ ಒಮ್ಮೆ ಸೋತಿದ್ದರು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲುವಾಸ ಅನುಭವಿಸಿದ್ದರು. 1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಆದಾಗ ವಾಜಪೇಯಿ ವಿದೇಶಾಂಗ ಸಚಿವರಾಗಿ ಭಾರೀ ಜನಪ್ರಿಯ ಆದರು.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ

ಅವರ ಎರಡು ವರ್ಷಗಳ ಅವಧಿ ಅತ್ಯಂತ ಸ್ಮರಣೀಯ ಆದದ್ದು. ಅದೇ ಹೊತ್ತಲ್ಲಿ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದೀ ಭಾಷಣ ಮಾಡಿದ್ದು! ಅದೊಂದು ಚಾರಿತ್ರಿಕ ದಾಖಲೆ. ಮುಂದೆ ಬಿಜೆಪಿ ಸ್ಥಾಪನೆ ಆದಾಗ (1980) ವಾಜಪೇಯಿ ಅದರ ಮೊದಲ ಅಧ್ಯಕ್ಷ ಆದರು. ಮುಂದೆ ಮೂರು ಬಾರಿ ಅವರು ಭಾರತದ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು.1996ರಲ್ಲಿ ಕೇವಲ 13 ದಿನ ಪ್ರಧಾನಿ ಆದರು. ಬಹುಮತದ ಕೊರತೆಯಿಂದ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ 1999ರಲ್ಲಿ ಮತ್ತೆ ಪ್ರಧಾನಿ ಆದರು. ಈ ಬಾರಿ 13 ತಿಂಗಳು ಪ್ರಧಾನಿ ಆಗಿದ್ದರು.

"ಮೈ ಸತ್ತಾ ಚೋಡ್ ದೂಂಗಾ "

ನಂತರ ಲೋಕಸಭೆಯಲ್ಲಿ ಒಂದು ಮತದ ಕೊರತೆಯಿಂದ ಅಧಿಕಾರ ತ್ಯಜಿಸಿದರು. "ಮೈ ಸತ್ತಾ ಚೋಡ್ ದೂಂಗಾ " ಎಂದು ಅವರು 1999 ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಾಡಿದ ನಿರ್ಗಮನ ಭಾಷಣ ಎಲ್ಲರಿಗೂ ಕಣ್ಣೀರು ತರಿಸಿತ್ತು. ಮುಂದೆ 1999ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅವರು ಅಧಿಕಾರಕ್ಕೆ ಬಂದರು. ಈ ಬಾರಿ ಐದು ವರ್ಷ ಪೂರ್ತಿ ಅಧಿಕಾರ ನಡೆಸಿದರು. ಈ ಅವಧಿಯನ್ನು ತಮ್ಮ ಚಾಣಾಕ್ಷ ನಡೆಗಳಿಂದ, ಪ್ರಭಾವಶಾಲಿ ಭಾಷಣಗಳಿಂದ, ತನ್ನ ಶ್ರೇಷ್ಟ ನಾಯಕತ್ವದ ಗುಣಗಳಿಂದ ಸ್ಮರಣೀಯ ಆಗಿ ಮಾಡಿದರು.

ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರ ದಾಳಿ

ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರ ದಾಳಿ

ಅವರ ಅಧಿಕಾರದ ಅವಧಿಯಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣ, ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರ ದಾಳಿ ಮೊದಲಾದ ಸಂಕಷ್ಟಗಳು ಎದುರಾದರೂ ವಾಜಪೇಯಿ ಎಲ್ಲವನ್ನೂ ಗೆದ್ದರು. ಎಲ್ಲರನ್ನೂ ಗೆದ್ದರು. ಕಾರ್ಗಿಲ್ ವಿಜಯ, ಪಾಕಿಸ್ತಾನಕ್ಕೆ ಸಂಜೌತ ಏಕ್ಸಪ್ರೆಸ್ ಓಡಿಸಿ ಸೌಹಾರ್ದ ಹಸ್ತವನ್ನು ಚಾಚಿದ್ದು, ಅತ್ಯಂತ ಯಶಸ್ವೀ ಆದ ಪೋಕ್ರಾನ್ ನ್ಯೂಕ್ಲಿಯರ್ ಟೆಸ್ಟ್, ಕಠಿಣವಾದ ಭಯೋತ್ಪಾದನಾ ನಿಗ್ರಹ ಕಾನೂನು, ಸರ್ವ ಶಿಕ್ಷಾ ಅಭಿಯಾನದ ಆರಂಭ, ದೇಶದ ಉದ್ದಗಲ ಬೆಸೆಯುವ ಸುವರ್ಣ ಚತುಷ್ಪಥ ಹೆದ್ದಾರಿ ಕಾಮಗಾರಿ ಮೊದಲಾದ ವಿಧಾಯಕ ನಡೆಗಳಿಂದ ಅವರ ಅಧಿಕಾರದ ಅವಧಿ ಅತ್ಯಂತ ಯಶಸ್ವೀ ಆಯಿತು.

ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್

ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್

ಗೃಹ ಮಂತ್ರಿ ಆಗಿದ್ದ ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ಅವರ ಜೋಡಿ ಸೂಪರ್ ಹಿಟ್ ಆಗಿತ್ತು! ವಾಜಪೇಯಿ ಅವರ ವರ್ಚಸ್ಸು, ಬುದ್ದಿವಂತಿಕೆ, ಹೊಂದಾಣಿಕಾ ಮನೋಭಾವ, ದಿಟ್ಟ ನಡೆಗಳು ಎಲ್ಲವೂ ಭಾರತೀಯರ ಹೃದಯದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ತಂದುಕೊಟ್ಟವು. ನಾನು ವಾಜಪೇಯಿ ಅವರನ್ನು ಆರಾಧನೆ ಮಾಡಲು ಪ್ರಮುಖ ಕಾರಣ ಅವರ ಅದ್ಭುತ ಭಾಷಣಗಳು. ಎದುರಿನ ಕುರ್ಚಿಯಲ್ಲಿ ಕುಳಿತು ಅವರ 15-20 ಭಾಷಣಗಳನ್ನು ಆಸ್ವಾದಿಸುವ ಆವಕಾಶ ನನಗೆ ಬೇರೆ ಬೇರೆ ಕಡೆ ಸಿಕ್ಕಿತ್ತು.

ಹಿಂದಿ ಭಾಷೆಯಲ್ಲಿ ಅವರ ಭಾಷಣಕ್ಕೆ ಮಾರು ಹೋಗದವರೆ ಇಲ್ಲ

ಹಿಂದಿ ಭಾಷೆಯಲ್ಲಿ ಅವರ ಭಾಷಣಕ್ಕೆ ಮಾರು ಹೋಗದವರೆ ಇಲ್ಲ

ಅವರು ಕಾರ್ಕಳಕ್ಕೆ ಕೂಡ ಬಂದಿದ್ದರು. ಅವರ ಭಾಷಣಗಳ ಶಕ್ತಿ ಅದ್ಭುತ! ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಅವರ ಭಾಷಣಕ್ಕೆ ಮಾರು ಹೋಗದವರೆ ಇಲ್ಲ. ಹಿಂದೀ ಭಾಷೆಯಲ್ಲಿ ಅವರ ಭಾಷಣಗಳು ಹಾಸ್ಯ, ವ್ಯಂಗ್ಯ, ಶಾಯರಿ, ಗಾದೆಗಳು, ಉದಾಹರಣೆ, ಕುಟುಕು, ಮೊನಚು, ಲಾಲಿತ್ಯ.... ಮೊದಲಾದವುಗಳಿಂದ ಶ್ರೀಮಂತ ಆಗಿರುತ್ತಿದ್ದವು. ಎಂದಿಗೂ ಅವರು ಸಭಾ ಮರ್ಯಾದೆಯನ್ನು ಮೀರಿದ ಉದಾಹರಣೆಯೇ ಇಲ್ಲ!
"ಇಂದಿರಾಜೀ, ಮುಜೆ ಜವಾಬ್ ದೀಜಿಯೆ" ಎಂದು ಅವರು ಗೌರವಪೂರ್ಣವಾಗಿ ತಮ್ಮ ಮಾತುಗಳನ್ನು ಆರಂಭ ಮಾಡುತ್ತಿದ್ದರು.

ವಾಜಪೇಯಿ ಎಂದಿಗೂ ಕೆಸರು ಎರಚುವ ಭಾಷಣ ಮಾಡಿದ್ದೇ ಇಲ್ಲ

ವಾಜಪೇಯಿ ಎಂದಿಗೂ ಕೆಸರು ಎರಚುವ ಭಾಷಣ ಮಾಡಿದ್ದೇ ಇಲ್ಲ

ಅವರಷ್ಟು ಜನರನ್ನು ಭಾಷಣದ ಮೂಲಕ ಆಕರ್ಷಿಸುವ ಶಕ್ತಿ ಆಗ ಯಾರಿಗೂ ಇರಲಿಲ್ಲ! ದೇಶದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಕೂಡ ತಾನು ವಾಜಪೇಯಿ ಅವರ ಭಾಷಣದ ಅಭಿಮಾನಿ, ಅವರ ಭಾಷಣಗಳನ್ನು ಕೇಳಲು ಪರ್ದಾ ಹಾಕಿಕೊಂಡು ಹೋಗಿ ಮೈದಾನದಲ್ಲಿ ನಿಲ್ಲುತ್ತಿದ್ದೆ ಎಂದಿದ್ದಾರೆ! ವಾಜಪೇಯಿ ಕೂಡ 1971ರ ಯುದ್ಧವನ್ನು ಇಂದಿರಾಗಾಂಧಿ ಗೆದ್ದಾಗ ಆಕೆಯನ್ನು ದುರ್ಗಾ ಎಂದು ಸಂಭೋದನೆ ಮಾಡಿದ್ದರು! ವಾಜಪೇಯಿ ಎಂದಿಗೂ ಕೆಸರು ಎರಚುವ ಭಾಷಣ ಮಾಡಿದ್ದೇ ಇಲ್ಲ. ಅವರ ಭಾಷಣಗಳ ಬಗ್ಗೆ ಹತ್ತಾರು ಪುಸ್ತಕಗಳು ಬಂದಿವೆ.

ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಹಿಂದೀ ಭಾಷಣ

ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಹಿಂದೀ ಭಾಷಣ

ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಹಿಂದೀ ಭಾಷಣ ಅತ್ಯಂತ ಅಮೋಘ ಆಗಿದೆ.
2009ರಲ್ಲೀ ವಾಜಪೇಯಿಜಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. 2015ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯಿತು. 2018 ಆಗಸ್ಟ್ 16ರಂದು ಅವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು. ಅವರ ಹುಟ್ಟುಹಬ್ಬದ ದಿನ( ಡಿಸೆಂಬರ್ 25)ವನ್ನು ಭಾರತ ಸರಕಾರವು ರಾಷ್ಟ್ರೀಯ ಸುಶಾಸನ ದಿನ (Good Governance Day) ಆಗಿ 2014ರಿಂದ ಆಚರಿಸಿಕೊಂಡು ಬರುತ್ತಿದೆ. ಅವರಿಗೆ ನಮ್ಮ ನಮನಗಳು.

English summary
Eve Of Former Prime Minister Atal Bihari Vajpayee Birthday A Tribute,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X