ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್‌ ಧರಿಸುವುದರಿಂದಾಗುವ ಕಲೆಯಿಂದ ನಿಮ್ಮ ತ್ವಚೆ ಕಾಪಾಡುವುದು ಹೇಗೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಕೊರೊನಾ ಸೋಂಕಿನ ಭಯದಿಂದಾಗು ಮನೆಯಿಂದ ಹೊರಗೆ ಕಾಲಿಡುವಾಗಲೇ ಮಾಸ್ಕ್ ಧರಿಸುವುದು ವಾಡಿಕೆಯಾಗಿಬಿಟ್ಟಿದೆ.

ಅದರಿಂದ ಕೊರೊನಾ ಸೋಂಕನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ಕೊಂಚ ಮಟ್ಟಿಗೆ ತಡೆಯಬಹುದಾಗಿದೆ. ಹಿರನಂದನಿ ಆಸ್ಪತ್ರೆಯ ವೈದ್ಯ ಕಿರಣ್ ಗೋಡ್ಸೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ

ಆದರೆ ಈ ಮಾಸ್ಕ್ ಧರಿಸುವುದರಿಂದ ಮುಖದಲ್ಲಿ ಮಾರ್ಕ್ ಆಗುವುದನ್ನು ಕಡಿಮೆ ಮಾಡುವುದು ಹೇಗೆ, ಅಥವಾ ಈಗಾಗಲೇ ಆಗಿರುವ ಕಲೆಯನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ನೋಡೋಣ.

 ಮಾಸ್ಕ್ ಧರಿಸುವುದರಿಂದಾಗುವ ಲಾಭ, ನಷ್ಟವೇನು?

ಮಾಸ್ಕ್ ಧರಿಸುವುದರಿಂದಾಗುವ ಲಾಭ, ನಷ್ಟವೇನು?

ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು, ಆದರೆ ಸೂಕ್ಷ್ಮ ಚರ್ಮ ಉಳ್ಳವರ ಮುಖದಲ್ಲಿ ರಾಷಸ್‌ಗಳು ಉಂಟಾಗುತ್ತವೆ, ಹಾಗೂ ಇನ್ನಿತರೆ ಚರ್ಮ ರೋಗಗಳಿಗೂ ಕಾರಣವಾಗಬಹುದು.

 ಮಾಸ್ಕ್ ಧರಿಸುವುದು ಅನಿವಾರ್ಯ

ಮಾಸ್ಕ್ ಧರಿಸುವುದು ಅನಿವಾರ್ಯ

ಮುಖದ ಮೇಲೆ ಕಲೆಗಳಾಗುತ್ತವೆ ಎಂದು ಮಾಸ್ಕ್ ಧರಿಸುವುದು ಬಿಡಲು ಸಾಧ್ಯವಿಲ್ಲ, ಕೊರೊನಾ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇರುವುದೊಂದೇ ಉಪಾಯ, ಹಾಗೆಯೇ ಮುಖದಲ್ಲಿ ಕಲೆಗಳು ಆಗದಂತೆ ತಡೆಯುವುದು ಹೇಗೆ, ಅಥವಾ ಈಗಾಗಲೇ ಆಗಿರುವ ಕಲೆಯನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಹೆಚ್ಚು ಚಿಂತನೆ ಮಾಡಬೇಕು.

 ಮಾಸ್ಕ್ ಶುಚಿಯಾಗಿಡುವುದು ಮುಖ್ಯ

ಮಾಸ್ಕ್ ಶುಚಿಯಾಗಿಡುವುದು ಮುಖ್ಯ

ನೀವು ಧರಿಸುವ ಮಾಸ್ಕ್ ಶುಚಿಯಾಗಿರಲಿ, ಅದು ಮರು ಬಳಕೆ ಮಾಡಬಹುದಾದ ಮಾಸ್ಕ್ ಆಗಿದ್ದರೆ ತೊಳೆದು ಉಪಯೋಗಿಸಿ. ಪ್ರತಿ ಬಾರಿ ಬಳಕೆ ಮಾಡಿದಾಗಲೂ ಅದನ್ನು ತೊಳೆಯರಿ.

-ನಿಮಗೆ ಮುಖದ ಚರ್ಮದಲ್ಲಿ ಕಿರಿ ಕಿರಿ ಉಂಟಾದರೆ ಆಂಟಿಸೆಪ್ಟಿಕ್ ಸೋಪನ್ನು ಬಳಕೆ ಮಾಡಿ, ಮುಖವನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ ಹಾಗೆಯೇ ಮಾಸ್ಕ್ ಪೂರ್ಣವಾಗಿ ಒಣಗಿದ ನಂತರವೇ ಬಳಸಿ.

Recommended Video

Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada
 ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ

ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ

- ನಿಮಗೆ ನಿತ್ಯ ಮೇಕ್ ಅಪ್ ಮಾಡಿಕೊಳ್ಳುವ ಅಭ್ಯಾಸವಿದ್ದರೆ ಸ್ವಲ್ಪದಿನಗಳ ಕಾಲ ಅದನ್ನು ಬಿಡಿ, ಮಾಸ್ಕ್ ಒಳಗೆ ಬೆವೆತು ಅದರಿಂದ ಮುಖದ ಅಲರ್ಜಿಗಳು ಆರಂಭವಾಗುವ ಸಾಧ್ಯತೆ ಇರುತ್ತದೆ.
-ಫೇಸ್‌ವಾಶ್‌ನಿಂದ ಬೆಳಗ್ಗೆ ಹಾಗೂ ರಾತ್ರಿ ನಿಮ್ಮ ಮುಖವನ್ನು ತೊಳೆಯಿರಿ, ನಿಮ್ಮ ಮುಖದಲ್ಲಿರುವ ಎಣ್ಣೆ ಅಂಶ ಕಡಿಮೆಯಾಗುತ್ತದೆ.
-ಮುಖದ ಮೇಲಿರುವ ಮೊಡವೆಗಳನ್ನು ಒಡೆಯಬೇಡಿ, ಇದರಿಂದ ಗುಳ್ಳೆಯ ಸುತ್ತಮುತ್ತಲಿನ ಜಾಗದಲ್ಲಿ ಕಲೆಗಳಾಗುತ್ತವೆ.
-ಮಾಸ್ಕ್ ಧರಿಸುವ ಮುನ್ನ ಅಥವಾ ಮಾಸ್ಕ್ ತೆಗೆದ ಬಳಿಕ ನಿಮ್ಮ ಮುಖವನ್ನು ತೊಳೆಯಿರಿ.

English summary
Since the month of March after COVID-19 was declared as a global pandemic by the World Health Organization (WHO), the group leading from the front as well as experts in the field began to acknowledge the use of masks as the first line of defense against the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X