ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಕಟ್ಟಲು, ಖರೀದಿಸಲು ಕಾರ್ಮಿಕ ಭವಿಷ್ಯ ನಿಧಿ ಯೋಜನೆ

ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದಿಂದ ಗೃಹ ಖರೀದಿಗೆ ಸಂಬಂಧಿಸಿದ ಹಾಗೆ ಮಹತ್ವದ ಯೋಜನೆಯೊಂದು ಮಾರ್ಚ್ ನಲ್ಲಿ ಘೋಷಣೆಯಾಗಲಿದೆ. ಇದರಿಂದ ನಾಲ್ಕು ಕೋಟಿ ಮಂದಿಗೆ ಅನುಕೂಲವಾಗಲಿದೆ. ಅದೇನು ಅನುಕೂಲ ಅಂತ ತಿಳಿಯಲು ವರದಿ ಓದಿ..

|
Google Oneindia Kannada News

ನವದೆಹಲಿ, ಫೆಬ್ರವರಿ 24: ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದ(ಇಪಿಎಫ್ ಒ) ಸದಸ್ಯರಿಗೆ ತುಂಬ ನೆಮ್ಮದಿ ಹಾಗೂ ಸಂತಸ ಕೊಡುವ ಸುದ್ದಿ ಇದು. ಇಪಿಎಫ್ ಒ ಗೃಹ ಯೋಜನೆ ಜಾರಿಗೆ ತರಲಿದೆ. ಈ ಯೋಜನೆ ಜಾರಿಗೆ ಬಂದರೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದ ನಾಲ್ಕು ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ.

ಅದೇನು ಅಂಥ ಅನುಕೂಲ ಅಂತೀರಾ? ಮನೆ ಖರೀದಿಗೆ ಆರಂಭದ ಮೊತ್ತ ಮತ್ತು ತಿಂಗಳು ಕಂತನ್ನು ಇಪಿಎಫ್ ಒ ಖಾತೆಯಿಂದ ಪಾವತಿಸಬಹುದಾಗಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುವ ಮಾರ್ಚ್ 8ರ ನಂತರ ಈ ಯೋಜನೆಯನ್ನು ಯಾವಾಗ ಬೇಕಾದರೂ ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ.[ಎಸ್ ಬಿಐ, ಐಸಿಐಸಿಐ ಬ್ಯಾಂಕ್ ನಿಂದ ಗೃಹಸಾಲದ ಸಕತ್ ಆಫರ್]

EPFO to launch housing scheme for over 4 crore members in March

ಸದಸ್ಯರು ಇನ್ನೂ ಸೇವೆಯಲ್ಲಿ ಇರುವಾಗಲೇ ಮನೆ ಖರೀದಿಸಲು ಇಪಿಎಫ್ ಒ ಸಹಾಯಕವಾಗಿ ಕೆಲಸ ಮಾಡಲಿದೆ. ಇಪಿಎಫ್ ಒ ಸದಸ್ಯರು ಅಥವಾ ಸಂಸ್ಥೆಯ ಮಾಲೀಕರು ಒಂದು ಹೌಸಿಂಗ್ ಸೊಸೈಟಿ ಮಾಡಿಕೊಳ್ಳಬೇಕು. ಬ್ಯಾಂಕ್ ಮತ್ತು ಕಟ್ಟಡ ನಿರ್ಮಾಣ ಮಾಡುವವರ ಜೊತೆಗೆ ಅಥವಾ ಮನೆ ಮಾರಾಟಗಾರರ ಬಳಿ ಸದಸ್ಯರು ಒಪ್ಪಂದ ಮಾಡಿಕೊಳ್ಳಬೇಕು. ಆ ಮೂಲಕ ಮನೆ ಖರೀದಿಸಬಹುದು.

ಅದರೆ, ಈ ಯೋಜನೆಯ ಲಾಭ ಪಡೆಯಲು ಹೌಸಿಂಗ್ ಸೊಸೈಟಿಯಲ್ಲಿ ಕನಿಷ್ಠ ಇಪ್ಪತ್ತು ಸದಸ್ಯರಿರಬೇಕು. ಇನ್ನೊಂದು ವಿಚಾರ ಏನೆಂದರೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಗೃಹ ಯೋಜನೆಗಳನ್ನು ಕೂಡ ಹೊಸ ಯೋಜನೆ ಜತೆಗೆ ಸೇರಿಸಿಕೊಳ್ಳಬಹುದು. ಎಲ್ಲರಿಗೂ ಮನೆ ಇರಬೇಕು ಎಂಬ ಕಾರಣಕ್ಕೆ ಈ ಯೋಜನೆ ತರಲಾಗುತ್ತಿದೆ.[ಮೋದಿ ಆಶಯದಂತೆ ಟಾಟಾದಿಂದ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ]

ಸದಸ್ಯರ ಕಂತು ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯದ ಬಗ್ಗೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟವು ಪ್ರಮಾಣಪತ್ರ ವಿತರಿಸುತ್ತದೆ. ಮುಂದೆ ಯಾವುದಾದರೂ ಕಾನೂನು ಸಮಸ್ಯೆ ಎದುರಾದಲ್ಲಿ ಹೊಣೆಯಾಗುವುದಿಲ್ಲ. ಹೌಸಿಂಗ್ ಸೊಸೈಟಿಯವರೇ ಬ್ಯಾಂಕರ್, ಕಟ್ಟಡ ನಿರ್ಮಾತೃಗಳು ಅಥವಾ ಮಾರಾಟಗಾರರ ಜೊತೆಗಿನ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು.

ವ್ಯಾಜ್ಯ ಏರ್ಪಟ್ಟ ಸಂದರ್ಭದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರ ಮನವಿ ಮೇರೆಗೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟವು ಗೃಹ ಖರೀದಿಯ ಆರಂಭಿಕ ಮೊತ್ತವನ್ನು ಅಥವಾ ಸಾಲದ ಮೇಲಿನ ತಿಂಗಳ ಕಂತನ್ನು ತಡೆಹಿಡಿಯಬಹುದಾಗಿದೆ.

English summary
EPFO will launch a housing scheme next month for its over four crore members to enable them to make down payment and pay EMIs from their EPF accounts to buy homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X