ಪಿಎಫ್ ಖಾತೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 13: ಪ್ರಾವಿಡೆಂಟ್ ಫಂಡ್ ಗ್ರಾಹಕರ ಖಾತೆಗಳಿಗೆ 2017-18ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಶೇ. 8.65ರಷ್ಟು ಬಡ್ಡಿಯನ್ನು ನೀಡಲು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್ಒ) ನಿರ್ಧರಿಸಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.

ಇದರಿಂದಾಗಿ, ಸುಮಾರು 4 ಕೋಟಿ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಈ ಪ್ರಮಾಣದ ಬಡ್ಡಿ ನೀಡಲು ಇಎಂಪಿಎಫ್ ಆಡಳಿತ ಮಂಡಳಿಯು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ನಿರ್ಧಾರ ಕೈಗೊಂಡಿತ್ತು. ಇದೀಗ, ಅದಕ್ಕೆ ಈಗ ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತಿದ್ದು, ಶೀಘ್ರವೇ ಇದು ಜಾರಿಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

EPFO to pay 8.65% interest on EPF for FY 2016-17

ಕೆಲ ದಿನಗಳಿಂದಲೂ ಕೇಂದ್ರ ಹಣಕಾಸು ಸಚಿವಾಲಯವು, ಪಿಎಫ್ ಮೇಲಿನ ಬಡ್ಡಿ ದರವನ್ನು ಇಳಿಸುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿತ್ತು ಎಂದು ತಿಳಿಸಿದ ಬಂಡಾರು ದತ್ತಾತ್ರೇಯ, ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಕೇಂದ್ರ ಹಣಕಾಸು ಇಲಾಖೆಯು ಆ ರೀತಿ ಸಲಹೆ ಮಾಡಿದ್ದರೂ, ಈಗ ಶೇ. 8.65ರ ಬಡ್ಡಿ ಹಿನ್ನೆಲೆಯಲ್ಲಿ ಇಲಾಖೆಗೆ ತಗುಲುವ ಸುಮಾರು 158 ಕೋಟಿ ರು. ಹೆಚ್ಚುವರಿ ಹಣವನ್ನು ಭರಿಸುವ ಶಕ್ತಿ ಇಲಾಖೆಗೆ ಇದೆ. ಹಾಗಾಗಿ, ಬಡ್ಡಿ ವಿಚಾರವು ಇಲಾಖೆಗೆ ಹೊರೆಯಾಗುವುದಿಲ್ಲ ಎಂದು ಅವರು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
About 4 crore subscribers of EPFO will get 8.65 per cent interest on provident fund deposits for 2016-17, as decided by the organisation's trustees in December, Labour Minister Bandaru Dattatreya said on April 13th, 2017.
Please Wait while comments are loading...