4 ಕೋಟಿ ಸದಸ್ಯರಿಗೆ ಶುಭ ಸುದ್ದಿ ಕೊಟ್ಟ ಸಚಿವ ಬಂಡಾರು!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 10: ಇಪಿಎಫ್ (ಎಂಪ್ಲೋಯಿಸ್ ಪ್ರಾವಿಡೆಂಟ್ ಫಂಡ್) ಯೋಜನೆಗೆ ಸೇರ್ಪಡೆಗೊಳ್ಳಲು ಸಂಬಳ ಮಿತಿಯನ್ನು 21,000 ರೂಪಾಯಿಗೆ ಹೆಚ್ಚಿಸಿದ ಬಳಿಕ ಮತ್ತೊಂದು ಶುಭ ಸುದ್ದಿಯನ್ನು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನೀಡಿದ್ದಾರೆ.

ಇನ್ಮುಂದೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇಪಿಎಫ್ ಕ್ಲೇಮ್ ಗಳನ್ನು UMANG ಅಪ್ಲಿಕೇಷನ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಆನ್ ಲೈನ್ ಕ್ಲೇಮ್ ಗಳ ಜತೆಗೆ ಮೊಬೈಲ್ ಅಪ್ಲಿಕೇಷನ್ ಜೋಡಣೆ ಮಾಡಲಾಗುತ್ತಿದ್ದು, Unified Mobile App for new-age governance, (UMANG) App ಮೂಲಕ ಆನ್ ಲೈನ್ ನಲ್ಲೇ ಕ್ಲೇಮ್ ಪಡೆದುಕೊಳ್ಳಬಹುದು.[ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!]

EPF claims can be settled through mobile phone soon: Bandaru Dattatreya

ಮಾರ್ಚ್ 31, 2016ರ ಅನ್ವಯ 3.76 ಕೋಟಿ ರು ಸದಸ್ಯರ ಪೈಕಿ 1.68 ಕೋಟಿ ಸದಸ್ಯರು ಮಾತ್ರ UAN ಜತೆಗೆ ಆಧಾರ್ ಲಿಂಕ್ ಮಾಡಿದ್ದಾರೆ. ಬ್ಯಾಂಕ್ ಜತೆ ಆಧಾರ್ ಜೋಡಣೆ ಈಗ ಕಡ್ಡಾಯಗೊಳಿಸಲಾಗಿದೆ.

ಸಂಬಳ ಮಿತಿ ಏರಿಕೆ: ಈಗ ಸಂಬಳ ಮಿತಿ 15,000 ರೂಪಾಯಿ ಆಗಿದೆ. ಇಪಿಎಫ್‌ಒ ಮತ್ತು ಕೇಂದ್ರ ಟ್ರಸ್ಟ್ ಬೋರ್ಡ್‌ನ ಸಭೆ ಏಪ್ರಿಲ್ 12ಕ್ಕೆ ನಡೆಯಲಿದ್ದು, ಈ ಸಭೆಯಲ್ಲಿ ಸಂಬಳ ಮಿತಿಯನ್ನು ಹೆಚ್ಚಿಸಲು ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.[ಭವಿಷ್ಯ ನಿಧಿ (EPFO) ಬಡ್ಡಿದರ ಇಳಿಕೆಗೆ ವಿತ್ತ ಸಚಿವಾಲಯ ಸಮ್ಮತಿ]

ಮಿತಿಯನ್ನು ಹೆಚ್ಚಿಸುವುದರಿಂದ ಖಾಸಗಿ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ ಉದ್ಯೋಗಿಗಳಿಗೆ ಉಪಯುಕ್ತವಾಗಲಿದೆ. 25,000 ರೂಪಾಯಿವರೆಗೆ ಪಿಎಫ್‌ಗೆ ಸೇರಿಸಬೇಕೆಂದು ಇಪಿಎಫ್ ಒ(ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಝೇಶನ್) ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ಆದರೆ, ಇದನ್ನು ಕಾರ್ಮಿಕ ಸಚಿವಾಲಯ 21ಸಾವಿರ ರೂಪಾಯಿಗೆ ಮಿತಿಗೊಳಿಸಿತು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Labour minister Bandaru Dattatreya says EPFO is developing online claims settlement process by receiving applications online which will be integrated with the UMANG App
Please Wait while comments are loading...