ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2001ರ ನಂತರ ದೂರ ಶಿಕ್ಷಣದ ಮೂಲಕ ಪಡೆದ ಎಂಜಿನಿಯರಿಂಗ್ ಪದವಿ ಅಸಿಂಧು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ನವೆಂಬರ್ 5: ದೂರ ಶಿಕ್ಷಣದ ಮೂಲಕ 2001ರ ನಂತರ ಎಂಜಿನಿಯರಿಂಗ್ ಒದವಿ ಪಡೆದಿದ್ದ ಲಕ್ಷಾಂತರ ಜನರ ಪಾಲಿಗೆ ಈ ಸುದ್ದಿ ಕಹಿಯಾಗಿದೆ. ಡೀಮ್ಡ್ ವಿವಿಗಳಿಂದ ಕಳೆದ 16 ವರ್ಷಗಳಲ್ಲಿ ಪಡೆದಿರುವ ಎಲ್ಲಾ ಎಂಜಿನಿಯರಿಂಗ್ ಪದವಿಗಳು ಅಸಿಂಧು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ.

ಈ ಕುರಿತು ತೀರ್ಪು ನೀಡಿರುವ ನ್ಯಾ. ಎ.ಕೆ. ಗಂಗೂಲಿ ಹಾಗೂ ನ್ಯಾ. ಯು.ಯು. ಲಲಿತ್ ಅವರಿದ್ದ ನ್ಯಾಯಪೀಠ, ಯುಜಿಸಿ ಮತ್ತು ಎಐಸಿಟಿಇ ದೂರ ಶಿಕ್ಷಣದ ಎಂಜಿನಿಯರಿಂಗ್ ಕಲಿಕೆಗೆ ಅನುಮತಿ ನೀಡಿಲ್ಲ. ಇದಕ್ಕೆ ದೂರ ಶಿಕ್ಷಣ ಮಂಡಳಿ (ಡಿಇಸಿ) ಮಾತ್ರ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ.

 All engineering degrees secured via correspondence since 2001 invalid: SC

ದೂರ ಶಿಕ್ಷಣದ ಎಂಜಿನಿಯರಿಂಗ್ ಪದವಿಗಳ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಎಐಸಿಟಿಇ ಅನುಮತಿ ಇಲ್ಲದೆ ಡೀಮ್ಡ್ ವಿವಿಗಳು ದೂರ ಶಿಕ್ಷಣದ ಎಂಜಿನಿಯರಿಂಗ್ ಪದವಿ ನೀಡುವಂತಿಲ್ಲ ಎಂದು ಹೇಳಿದೆ.

ಇದರ ಜತೆಗೆ 2001ರಿಂದ ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ ಪದವಿ ಪಡೆಯಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

ಸುಪ್ರಿಂ ಕೋರ್ಟ್ ನ ಈ ಆದೇಶದಿಂದ ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳೀಗ ಆತಂಕಕ್ಕೆ ಒಳಗಾಗಿದ್ದಾರೆ.

English summary
It was a major set back to lakhs of students who have secured Engineering degrees since 2001 through correspondence. The Supreme Court held that the engineering degrees obtained through correspondence courses from deemed universities in the past 16 years is invalid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X