ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ರಾಜ್ಯಗಳಲ್ಲಿ 5 ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ: ಮೋದಿ

|
Google Oneindia Kannada News

ನವದೆಹಲಿ, ಜುಲೈ 29: ಒಟ್ಟು 8 ರಾಜ್ಯಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು 5 ಭಾಷೆಗಳಲ್ಲಿ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಸುಧಾರಣೆಗಳ ಜಾರಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಮೋದಿ ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ವಾರ್ಷಿಕೋತ್ಸವದಂದು ಮೋದಿ ಜೊತೆ ಸಂವಾದರಾಷ್ಟ್ರೀಯ ಶಿಕ್ಷಣ ನೀತಿ ವಾರ್ಷಿಕೋತ್ಸವದಂದು ಮೋದಿ ಜೊತೆ ಸಂವಾದ

ಎಂಜಿನಿಯರಿಂಗ್ ಕೋರ್ಸ್‌ಗಳನ್ನು 11 ಸ್ಥಳೀಯ ಭಾಷೆಗಳಲ್ಲಿ ಕಲಿಸಲಾಗುವುದು, ಇದು ಬಡವರು, ನಿರ್ಗತಿಕರು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

Engineering Courses Will Be Taught In 5 Languages, Says PM

-ಎಂಜಿನಿಯರಿಂಗ್ ಕೋರ್ಸ್‌ಗಳನ್ನು 11 ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಿಸುವ ಸಾಧನವನ್ನು ಕೂಡ ನಾವು ಅಭಿವೃದ್ಧಿಪಡಿಸಿದ್ದೇವೆ. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದರು.

--8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಿಂದಿ, ತಮಿಳು, ತೆಲುಗು, ಮರಾಠಿ, ಬೆಂಗಾಳಿ ಭಾಷೆಗಳಲ್ಲಿ ಕಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ 11 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತದೆ.

-ವಿದ್ಯಾರ್ಥಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ, ಪರೀಕ್ಷಾ ಭಯದಿಂದ ಮುಕ್ತಿ, ಹೊಸ ಹೊಸ ಸಂಶೋಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಈ ನೀತಿಯಿಂದ ಭಾರತದ ಭಾಗ್ಯ ಬದಲಾಗಲಿದೆ. ಈ ಹಿಂದೆ ಭಾರತೀಯರು ಉತ್ತಮ ಶಿಕ್ಷಣಕ್ಕೆ ವಿದೇಶಕ್ಕೆ ಹೊಗಬೇಕಿತ್ತು. ಇದೀಗ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದು ನಿಜವಾದ ಬದಲಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

-ದೇಶದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ನಮ್ಮ ಜೊತೆಗಿದ್ದಾರೆ. ನಮ್ಮ ಯುವ ಶಕ್ತಿ, ವಿದ್ಯಾರ್ಥಿಗಳು ಹೊಸ ಬದಲಾಣೆಯನ್ನು, ಸವಾಲುಗಳನ್ನು ಅಷ್ಟೇ ಸಮರ್ಥವಾಗಿ ಸ್ವೀಕರಿಸಲು ಹಾಗೂ ಎದುರಿಸಲು ಸಿದ್ದರಿದ್ದಾರೆ. ಕೊರೊನಾ ಕಾರಣ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಆನ್‌ಲೈನ್ ತರಗತಿ ಸೇರಿದಂತೆ ಹಲವು ಸವಾಲುಗಳು ಎದುರಾಗಿತ್ತು. ಇವೆಲ್ಲವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಿದ್ದಾರೆ.

-ಸ್ಕಿಲ್ ಡೆವಲಪ್‌ಮೆಂಟ್ ಯೋಜನೆ ಅಡಿ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಆಯ್ಕೆ ಮಾಡಿಕೊಂಡು ಕೌಶಲ್ಯ ಹೆಚ್ಚಿಸಲು ಸಾಧ್ಯವಿದೆ. ಶಿಕ್ಷಣದಲ್ಲಿ ಮಹತ್ಮಾ ಗಾಂಧಿ ಮಹತ್ವದ ಸೂಚನೆ ನೀಡಿದ್ದರು. ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಭಾಷೆಗಳಲ್ಲಿ ಕಲಿಕೆ ನೀಡಬೇಕು. ಇಲ್ಲೀವರೆಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಸೇರಿದಂತೆ ಹಲವು ಶಿಕ್ಷಣಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿತ್ತು. ಇದೀಗ ಎಂಜನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೂಡ ಮಾತೃಭಾಷೆಯಲ್ಲಿ ಲಭ್ಯವಿದೆ ಎಂದು ಮೋದಿ ಹೇಳಿದರು.

-ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು 1986 ರ ಶಿಕ್ಷಣ ನೀತಿಯನ್ನು (34 ವರ್ಷದ ಹಳೆಯ ರಾಷ್ಟ್ರೀಯ ಶಿಕ್ಷಣ ನೀತಿ) ಬದಲಿಸಲಿದೆ. ಉಜ್ವಲ ಜ್ಞಾನ ಸಮಾಜವನ್ನಾಗಿ ಭಾರತವನ್ನು ಬದಲಿಸುವ ಗುರಿ ಹೊಂದಲಾಗಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವಂತೆ, ಬಹುಶಿಸ್ತಿನ ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದ್ದು, 21 ನೇ ಶತಮಾನದ ಅಗತ್ಯಗಳಿಗೆ ಇದು ಸೂಕ್ತವಾಗಲಿದೆ. ಎಂದು ಮೋದಿ ಹೇಳಿದರು.

English summary
Prime Minister Narendra Modi today addressed the nation on the completion of one year of the new National Education Policy (NEP) via video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X