ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ ಅನುಷ್ಠಾನದ ನಿರೀಕ್ಷೆಯಲ್ಲಿ ಎಂಡೋಸಲ್ಫಾನ್ ಪೀಡಿತರು

By Vanitha
|
Google Oneindia Kannada News

ಬೆಂಗಳೂರು,ಫೆಬ್ರವರಿ,04: ಹಲವಾರು ಮಂದಿಯ ಸುಂದರ ಬದುಕನ್ನು ಕಿತ್ತುಕೊಂಡಿರುವ ಎಂಡೋಸಲ್ಫಾನ್ ಬಹುವರ್ಷಗಳಿಂದ ಕಾಸರಗೋಡು, ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಮಂದಿಗೆ ಕ್ಷಣಕ್ಷಣಕ್ಕೂ ನರಕಯಾತನೆ ನೀಡುತ್ತಿದೆ.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಎಂಡೋಸಲ್ಫಾನ್ ಪೀಡಿತರು ನವೆಂಬರ್ ತಿಂಗಳಲ್ಲಿ ಪರಿಹಾರ ಹಣ, ಮಾಸಾಶನ ಹೆಚ್ಚಳ, ರೈಲು, ಬಸ್ ಪ್ರಯಾಣವನ್ನು ಉಚಿತಗೊಳಿಸುವುದು ಹೀಗೆ ನಾನಾ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದ್ದರು. ಆದರೆ ಇವರ ಬೇಡಿಕೆಗಳಿಗೆ ಸರ್ಕಾರ ಓಗೊಟ್ಟಂತೆ ಕಾಣುತ್ತಿಲ್ಲ.

ಇದೀಗ ಕೇರಳದ ತಿರುವನಂತಪುರಮ್ ನಲ್ಲಿರುವ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಕೇಂದ್ರ ಸರ್ಕಾರ ಮೊರೆಹೋಗಿದ್ದು, ತಕ್ಷಣವೇ ನಮ್ಮ ಬೇಡಿಕೆಗಳಿಗೆ ಮಾನ್ಯತೆ ನೀಡಿ ಎಂದು ಕೇಳಿದ್ದಾರೆ.[ಜಾಗತಿಕ ಮಹಾಮಾರಿ ಝಿಕಾ ವೈರಾಣುಗೆ ಔಷಧಿ ಇದೆಯಂತೆ!]

ಎಂಡೋಸಲ್ಫಾನ್ ಪೀಡಿತರ ಖರ್ಚು ವೆಚ್ಚಗಳು ಸಾಕಷ್ಟಿವೆ. ಈಗ ಬರುತ್ತಿರುವ ಮಾಸಾಶನ ಅವರ ಔಷಧಿಯ ಖರ್ಚನ್ನು ನಿಭಾಯಿಸಲು ಸಾಕಾಗುತ್ತಿಲ್ಲ ಎಂಬುದು ಎಂಡೋಸಲ್ಫಾನ್ ಪೀಡಿತರ ಅಳಲಾಗಿದೆ. ಈ ಸುದ್ದಿಯ ಜೊತೆಗೆ ಇನ್ನಿತರ ಹಲವಾರು ಸುದ್ದಿಗಳು ಇಲ್ಲಿವೆ. [ಪಿಟಿಐ]

ನಮ್ಮ ಬೇಡಿಕೆ ಈಡೇರಿಸಿ

ನಮ್ಮ ಬೇಡಿಕೆ ಈಡೇರಿಸಿ

ಮಾಸಾಶನವನ್ನು 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಬೇಕು, 5 ರಿಂದ ೧೦ ಲಕ್ಷ ಪರಿಹಾರ ಹಣ ನೀಡಬೇಕು, ಚಿಕಿತ್ಸೆಗೆ ಹೋಗಿ ಬರಲು ರೈಲು, ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅನುವು ಮಾಡಿಕೊಡಬೇಕು, ಎಂಡೋಸಲ್ಫಾನ್ ಪೀಡಿತರನ್ನು ನೋಡಿಕೊಳ್ಳುವವರಿಗೆ 2000 ಹಣ ನೀಡಬೇಕು ಇವು ಎಂಡೋಸಲ್ಫಾನ್ ಪೀಡಿತರ ಬೇಡಿಕೆಗಳು.

ಸೂರ್ಯಾಸ್ತದ ಸುಂದರ ಕ್ಷಣವಿದು

ಸೂರ್ಯಾಸ್ತದ ಸುಂದರ ಕ್ಷಣವಿದು

ಮೆಡಿಟರೇನಿಯನ್ ಸಮುದ್ರದ ಬಳಿ ಕಂಡು ಬಂದ ಸೂರ್ಯಾಸ್ತವಿದು. ಇದರಿಂದ ಆಕಾಶ ರಂಗೇರಿದಂತೆ ಕಂಡು ಬಂದಿತು. ಸೂರ್ಯಾಸ್ತ ಭವ್ಯತೆಯಲ್ಲಿ ಮುಳಿಗಿರುವ ಮಂದಿ

ಮಾಘಮೇಳದ ಆರತಿ

ಮಾಘಮೇಳದ ಆರತಿ

ಜನವರಿ 14ರಿಂದ ಆರಂಭವಾಗಿರುವ ಮಾಘಮೇಳದ ಪ್ರಯುಕ್ತ ಅಲಹಾಬಾದಿನ ಗಂಗಾ ನದಿ ಸಂಗಮದಲ್ಲಿ ಹಲವಾರು ಸಾಧುಗಳು ಆರತಿ ಬೆಳಗಿದರು.

ವಿಶಾಖಪಟ್ಟಣ ತಲುಪಿದ ವಿಕ್ರಮಾದಿತ್ಯ ಮತ್ತು ವಿರಾಟ್

ವಿಶಾಖಪಟ್ಟಣ ತಲುಪಿದ ವಿಕ್ರಮಾದಿತ್ಯ ಮತ್ತು ವಿರಾಟ್

ಭಾರತೀಯ ನೌಕೆಗಳಾದ ಐಎನ್ ಎಸ್ ವಿಕ್ರಮಾದಿತ್ಯ ಹಾಗೂ ಐಎನ್ ಎಸ್ ವಿರಾಟ್ ಬುಧವಾರ ಆಂಧ್ರಪ್ರದೇಶದ ವಿಶಾಖಪಟ್ಟಣ ತಲುಪಿದವು. ವಿಶಾಖಪಟ್ಟಣದಲ್ಲಿ ಫೆಬ್ರವರಿ ೪ರಿಂದ ೮ರವರೆಗೆ ನಡೆಯುವ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಲು ಆಗಮಿಸಿವೆ.

ವಿವಿಧ ವಿನ್ಯಾಸದ ರಾಕೆಟ್ ಗಳು

ವಿವಿಧ ವಿನ್ಯಾಸದ ರಾಕೆಟ್ ಗಳು

ನಾರ್ಥ್ ಕೊರಿಯಾದ ಸೈ ಟೆಕ್ ಕಾಂಪ್ಲೇಕ್ಸ್ ನಲ್ಲಿ ರಾಕೆಟ್ ನ ವಿವಿಧ ವಿನ್ಯಾಸಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ರಾಕೆಟ್ ನ ವಿವಿಧ ವಿನ್ಯಾಸಗಳು ಕಂಡದ್ದು ಹೀಗೆ.

ಸ್ನೋ ಸ್ಕೂಟರ್ ರೈಡ್

ಸ್ನೋ ಸ್ಕೂಟರ್ ರೈಡ್

ಜಮ್ಮು ಕಾಶ್ಮೀರದ ಗುಲ್ಮರ್ಗ್ ನಲ್ಲಿ ಹಿಮ ಜನರನ್ನು ಆಕರ್ಷಿಸುತ್ತಿದೆ. ಇದನ್ನು ಕಂಡು ಜನರು ಸ್ನೋ ಸ್ಕೂಟರ್ ರೈಡ್ ನಲ್ಲಿ ಭಾಗವಹಿಸಿ ಖುಷಿ ಪಟ್ಟದು ಹೀಗೆ.

ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ 2016 ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ 2016 ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ 2016 ಕಾರ್ಯಕ್ರಮದಲ್ಲಿ ಪ್ರತಿ‍ಷ್ಠಿತ ಬಂಡವಾಳಗಾರರನ್ನು ಭೇಟಿ ಮಾಡಿದರು

ಬೈಕ್ ಆಟೋ ಎಕ್ಸ್ ಪೋ2016

ಬೈಕ್ ಆಟೋ ಎಕ್ಸ್ ಪೋ2016

ಉತ್ತರಪ್ರದೇಶದ ಗ್ರೇಟರ್ ನಾಯ್ಡದಲ್ಲಿ ಸೂಪರ್ ಬೈಕ್ ಆಟೋ ಎಕ್ಸ್ ಪೋ 2016ನಲ್ಲಿ ರೂಪದರ್ಶಿಯೊಬ್ಬಳು ಪೋಸ್ ನೀಡಿದ್ದು ಹೀಗೆ.

ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ ಉದ್ಘಾಟಿಸಿದ ಸಿದ್ದರಾಮಯ್ಯ

ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ ಉದ್ಘಾಟಿಸಿದ ಸಿದ್ದರಾಮಯ್ಯ

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಮೆಂಟ್ ಆಫ್ ಕರ್ನಾಟಕ ೨೦೧೬ ಕಾರ್ಯಕ್ರಮವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು

English summary
Endosulfan victims, their family get ready for another round of talks with the central government. Aircraft carriers of Indian Navy INS Vikramaditya and INS Virat anchored off the Visakhapatnam coast on Wednesday. The two vessels will take part in the International Fleet Review to be held in Visakhapatnam from February 4-8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X