• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿವ್ಯಾಳ ಚೇತನಕ್ಕೆ ಬೇಕಿದೆ ನಿಮ್ಮ ನೆರವಿನ ಸಾಂತ್ವಾನ

ದಿವ್ಯಾಳಿಗೆ ಮಾತನಾಡಲೂ ಬರುವುದಿಲ್ಲ, ನಡೆಯಲೂ ಆಗದು. ಆದರೆ ಆಕೆಯ ನಗು ಎಂತಹ ಮಂದ ದಿನದಲ್ಲಿಯೂ ಬೆಳಗು ಸೂಸಬಲ್ಲದು. ಆಕೆಯ ಲವಲವಿಕೆಯ ಸ್ವಭಾವ ನನ್ನನ್ನು ಜತೆಗೆ ಸಾಗಿಸುತ್ತಿದೆ. ಕೈಚೆಲ್ಲಿ ಕೂರಲಾರೆ ಎಂಬ ಆಕೆಯ ವರ್ತನೆ ಅವಳ ಚಿಕಿತ್ಸೆಯಡೆಗಿನ ನನ್ನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಆಕೆ ಪ್ರತಿದಿನವೂ ಹಾಸಿಗೆಯಿಂದ ಏಳಲು ಮತ್ತು ತಾನೇ ಎದ್ದು ನಿಲ್ಲಲು ಪ್ರಯತ್ನಿಸುತ್ತಾಳೆ. ಆಕೆ ಕೆಳಕ್ಕೆ ಬಿದ್ದರೂ ಅದು ಪ್ರಯತ್ನಗಳ ಲೆಕ್ಕಕ್ಕೆ ಬರುವುದಿಲ್ಲವೇ?

ಆಕೆಯ ಚಿಕಿತ್ಸೆಗೆ 3 ಲಕ್ಷ ರೂ ಬೇಕಾಗಿರುವ ಸ್ಥಿತಿ ಮುಂದುವರಿದರೆ ಜೀವನ ಬಹಳ ದುರ್ಬರವಾಗಲಿದೆ ಎನ್ನುವುದು ನನಗೆ ಗೊತ್ತು. ಹೀಗಾಗಿ ನಾನು ಈ ದೇಣಿಗೆ ಸಂಗ್ರಹವನ್ನು ಆರಂಭಿಸಿದ್ದೇನೆ- ಇದು ನನ್ನ ಮುದ್ದಿನ ಪುಟಾಣಿ ಮಗಳು ಉತ್ತಮ ಜೀವನ ನಡೆಸಲು ಅವಕಾಶ ಸಿಗಲಿದೆ ಎಂದು.

ನಡೆಯಲು ಮತ್ತು ಮಾತನಾಡಲು ದಿವ್ಯಾಳ ಹಠಾತ್ ಒದ್ದಾಟ:

ದಿವ್ಯಾ ಹುಟ್ಟುವಾಗ ಆರೋಗ್ಯವಂತ ಮಗು. ಆಕೆ ಅಳುತ್ತಿದ್ದಳು, ಮನೆಯ ಸುತ್ತಲೂ ಅಂಬೆಗಾಲಿಕ್ಕುತ್ತಿದ್ದಳು ಮತ್ತು ಒಂದು ವರ್ಷ ತುಂಬುವ ಹೊತ್ತಿಗೆ ಆಕೆ ಎದ್ದುನಿಲ್ಲುವ ಪ್ರಯತ್ನಗಳನ್ನು ಶುರುಮಾಡಿದ್ದಳು. ಆಕೆ ತಾನಾಗಿಯೇ ಕೆಲವು ಹೆಜ್ಜೆ ನಡೆದ ದಿನಗಳು ನನಗೆ ಈಗಲೂ ನೆನಪಿದೆ. ನಮ್ಮ ಮಗಳ 'ಪ್ರಥಮಗಳ' ಅನುಭವಿಸಲು ನಾನು ಮತ್ತು ನನ್ನ ಹೆಂಡತಿ ಪುಳಕಿತರಾಗಿದ್ದೆವು. ಆಕೆ ಮೊದಲ ಹೆಜ್ಜೆಗಳನ್ನಿರಿಸಿದ ಕೆಲವು ದಿನಗಳ ನಂತರ 'ಮಮ್ಮಾ!' ಎಂಬ ಮೊದಲ ನುಡಿಯನ್ನೂ ಆಡಿದಳು. ಆಕೆ‌ ‌'ಪಪ್ಪಾ'‌ ‌ಎಂದು‌ ‌ಕರೆಯುವುದನ್ನು ಕೇಳಲು‌ ‌ಬಯಸುತಿದ್ದೆ.‌ ‌

ನಾನು ಕೆಲಸ ಮುಗಿಸಿ ಬಂದ ಬಳಿಕ ಅವಳನ್ನು ನನ್ನ ತೋಳಲ್ಲಿ ಇರಿಸಿಕೊಂಡು 'ದಿವ್ಯಾ, ಪಪ್ಪ ಅನ್ನು!' ಎಂದು ಹೇಳುತ್ತಿದ್ದೆ. ಸುಮಾರು ಕೋಟಿಗಟ್ಟಲೆ ಪ್ರಯತ್ನದ ಬಳಿಕ ನನ್ನ ಮುದ್ದಿನ ಮಗಳು ನನ್ನನ್ನು ಪಪ್ಪ ಎಂದು ಕರೆದಳು. ಈ ಚೆಂದದ ನೆನಪನ್ನು ನಿಮ್ಮೊಂದಿಗೆ ಈಗ ಹಂಚಿಕೊಳ್ಳಲು ಕಾರಣ, ಈ ಎರಡು ಅಮೂಲ್ಯ ಪದಗಳೇ ನನ್ನ ಮಗಳಿಂದ ನಾನು ಕೇಳಿದ ಕೊನೆಯ ಮಾತುಗಳು.

ಎದ್ದಂತೆಯೇ ಬೀಳುತ್ತಿದ್ದಳು ಮಗಳು

ಎದ್ದಂತೆಯೇ ಬೀಳುತ್ತಿದ್ದಳು ಮಗಳು

ದಿವ್ಯಾ ತಾನಾಗಿಯೇ ಎದ್ದು ಕಾಲಮೇಲೆ ನಿಂತಿದ್ದು ಮತ್ತು ನನ್ನ ಹಾಗೂ ನನ್ನ ಹೆಂಡತಿಯನ್ನು ಕರೆದಿದ್ದು 2017ರ ಡಿಸೆಂಬರ್ 27ರಂದೇ ಕೊನೆ. 28ರಂದು ಆಕೆಯ ತಾಯಿ ಹಾಲುಣಿಸುವಾಗ ದಿವ್ಯಾ ತನ್ನ ಕೈಗಳು ಮತ್ತು ಕಾಲಿನ ನಿಯಂತ್ರಣವನ್ನು ಕಳೆದುಕೊಂಡಳು. ಆಕೆಗೆ ತನ್ನ ಅವಯವಗಳನ್ನು ಎತ್ತಲು ಆಗಲಿಲ್ಲ. ಆಕೆ ಎದ್ದುನಿಲ್ಲಲು ಪ್ರಯತ್ನ ಮಾಡಿದಾಗಲೆಲ್ಲ ಉರುಳಿ ಬೀಳುತ್ತಿದ್ದಳು. ಏನೋ ಸರಿಯಿಲ್ಲ ಎಂದು ನನಗೆ ಅನಿಸಿತ್ತು. ಕೂಡಲೇ ಆಕೆಯನ್ನು ಎತ್ತಿಕೊಂಡು ಸಮೀಪದ ವೈದ್ಯರ ಬಳಿ ತೆರಳಿದೆ.

'ನಿನ್ನೆಯವರೆಗೂ ಆಕೆ ನಡೆಯುತ್ತಿದ್ದಳು ಮತ್ತು ಮಮ್ಮಿ ಪಪ್ಪ ಎನ್ನುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಮಾತನಾಡುವ ಅಥವಾ ನಿಲ್ಲುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಸಾಧ್ಯವೆ?' ಎಂದು ವೈದ್ಯರ ಬಳಿ ನನ್ನ ಮಗುವಿನ ಸ್ಥಿತಿ ವಿವರಿಸುತ್ತಾ ಕಣ್ಣೀರಿಟ್ಟೆ. ದುರದೃಷ್ಟವಶಾತ್ ಅವರಿಗೂ ಸಮಸ್ಯೆ ಏನೆಂದು ಗೊತ್ತಾಗಲಿಲ್ಲ. ನನಗೆ ಅದುವರೆಗೆ ಆಗಿದ್ದಕ್ಕಿಂತಲೂ ಆತಂಕ ಹೆಚ್ಚಾಗತೊಡಗಿತು. ಆಕೆಯನ್ನು ಅನೇಕ ವೈದ್ಯರ ಬಳಿ ಕರೆದುಕೊಂಡು ಹೋದ ಬಳಿಕ, ಸ್ಕ್ಯಾನ್‌ಗಳನ್ನು ಮಾಡಿಸುವಂತೆ ಸೂಚಿಸಿದರು. 'ನನ್ನ ಮಗಳಿಗೆ ಭಯಾನಕವಾದದ್ದು ಏನಾದರೂ ಆಗಿದೆಯೇ?' ನಾನು ಕೇಳಿದೆ. ಚಿಂತೆ ಬೇಡ, ಆದಷ್ಟು ಬೇಗನೆ ಸ್ಕ್ಯಾನ್ ಮುಗಿಸಿ ಎಂದು ಹೇಳಿದರು. ಆದರೆ ಅಂತಹ ಬಿಕ್ಕಟ್ಟಿನಲ್ಲಿ ಪೋಷಕರು ಚಿಂತೆಗೀಡಾಗದೆ ಇರಲು ಹೇಗೆ ಸಾಧ್ಯ?

ಮಾರಕ ರೋಗದೊಂದಿಗೆ ಹೋರಾಟ

ಮಾರಕ ರೋಗದೊಂದಿಗೆ ಹೋರಾಟ

'ನಿಮ್ಮ ಮಗಳು ಎನ್ಸೆಫಾಲೊಪಥಿ ಎಂಬ ಮಿದುಳಿನ ಕಾಯಿಲೆಯಿಂದ ಬಳಲುತ್ತಿದ್ದಾಳೆ' ಎಂದು ವರದಿ ನೋಡಿದ ವೈದ್ಯರು ಹೇಳಿದ್ದಾರೆ. ಅವರೂ ಕೂಡ ತೀವ್ರ ಆಘಾತಕ್ಕೆ ಒಳಗಾಗಿದ್ದರು ಎಂದು ಹೇಳಬಲ್ಲದೆ. ಇನ್ನೊಂದೆಡೆ ನಾನು ನಿಶ್ಚೇಷ್ಟಿತನಾಗಿದ್ದೆ. ಆ ಕಾಯಿಲೆಯ ಅರ್ಥ ಏನು ಎಂದು ನನಗೆ ತಿಳಿದಿರಲಿಲ್ಲ. ಆದರೆ ವೈದ್ಯರ ಹಾವಭಾವ ಕಂಡಾಗ ನನಗೆ ಏನೋ ಬಹಳ ಗಂಭೀರವಾಗಿದೆ ಎಂದು ಗೊತ್ತಾಯಿತು. ನನ್ನ ಮಗಳ ಕಾಯಿಲೆ ಎಷ್ಟು ಅಪರೂಪದ್ದಾಗಿದೆ ಮತ್ತು ಆಕೆಯ ಚಿಕಿತ್ಸೆಗೆ ತಾವು ಹೇಗೆ ಮುಂದುವರಿಯಬಹುದು ಎಂದು ನನಗೆ ಸಂಕ್ಷಿಪ್ತವಾಗಿ ಹೇಳಿದರು.

ಹೇಗೆ ಹಣ ಹೊಂದಿಸುವುದು?

ಹೇಗೆ ಹಣ ಹೊಂದಿಸುವುದು?

ಚಿಕಿತ್ಸೆಯ ಯೋಜನೆ ಕೇಳಿದಾಗ ನನ್ನ ತಲೆಯಲ್ಲಿ ಅನೇಕ ಪ್ರಶ್ನೆಗಳು ಮೂಡಿದವು. 'ಈ ಚಿಕಿತ್ಸೆಗೆ ನಾನು ಹೇಗೆ ಹಣ ನೀಡುವುದು? ನನ್ನ ಮಗಳು ತಾನಾಗಿಯೇ ನಡೆಯಲು ಸಾಧ್ಯವಾಗುತ್ತದೆಯೇ? ಆಕೆ ಮಾತನಾಡಬಲ್ಲಳೇ? ಆಕೆಗೆ ನಾನು ಹೇಗೆ ಶಿಕ್ಷಣ ನೀಡಬಹುದು?'. ಆಲೋಚನೆಗಳು ಮತ್ತು ಪ್ರಶ್ನೆಗಳಿಗೆ ಅಂತ್ಯವೇ ಇರಲಿಲ್ಲ. ದಿವ್ಯಾಳನ್ನು ನನ್ನ ಎದೆಯ ಸಮೀಪ ಇರಿಸಿಕೊಂಡು ಇರಿಸಿಕೊಂಡೆ. ಆಕೆಗೆ ಚಿಕಿತ್ಸೆ ಒದಗಿಸಲು ನನ್ನ ಶಕ್ತಿಯಲ್ಲಿನ ಎಲ್ಲವನ್ನೂ ಬಳಸುವುದಾಗಿ ನನಗೆ ನಾನೇ ಮಾತು ನೀಡಿದೆ.

ಈಗ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ದಿವ್ಯಾಳಲ್ಲಿ ನಿಧಾನವಾಗಿ ಸುಧಾರಣೆಗಳು ಕಂಡುಬರುತ್ತಿವೆ. ವಾಕರ್ ಮತ್ತು ನನ್ನ ನೆರವಿನಿಂದ ಆಕೆ ಕೆಲವು ಹೆಜ್ಜೆ ಇರಿಸಬಲ್ಲಳು. ಆಕೆ ಮಮ್ಮಾ ಮತ್ತು ಪಪ್ಪ ಎಂಬ ಪದಗಳನ್ನು ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಆಕೆ ಯಾವಾಗಲೂ ಯಶಸ್ವಿಯಾಗದೆ ಹೋದರೂ ಈ ಸಮಯದಲ್ಲಿ ಪ್ರಯತ್ನ ಬಹಳ ಮುಖ್ಯ. ನನ್ನ ಮಗಳು ಚೇತರಿಸಿಕೊಳ್ಳಲು ನಿರಂತರ ವೈದ್ಯಕೀಯ ನಿರ್ವಹಣೆ ಮಾಡಬೇಕು. ಇದಕ್ಕೆ ವರ್ಷಕ್ಕೆ 60,000 ರೂ. ತಗುಲುತ್ತಿದೆ.

ಹಣದ ಯಾವ ಮೂಲವೂ ಉಳಿದಿಲ್ಲ

ಹಣದ ಯಾವ ಮೂಲವೂ ಉಳಿದಿಲ್ಲ

ಆಟೋ ರಿಕ್ಷಾ ಚಾಲಕನಾದ ನನಗೆ ಆಕೆಯ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ವಿನಿಯೋಗಿಸಿದ ಬಳಿಕ ಇಷ್ಟು ಮೊತ್ತದ ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಇದುವರೆಗೂ ನಾನು ನನಗೆ ಗೊತ್ತಿರುವ ಪ್ರತಿ ವ್ಯಕ್ತಿಯಿಂದಲೂ ನೆರವು ಪಡೆದಿದ್ದೇನೆ. ಹಣಕಾಸು ಸಹಾಯಕ್ಕಾಗಿ ಸ್ಥಳೀಯ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ನನಗೆ ನಿಮ್ಮ ಹೊರತಾಗಿ ಬೇರೆ ಯಾವ ಸಂಪನ್ಮೂಲವೂ ಉಳಿದಿಲ್ಲ. ನಂಬಿಕೆ ಕಳೆದುಕೊಳ್ಳಬೇಡಿ ಎಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ವೈದ್ಯರು ಹೇಳಿದ್ದಾರೆ. ದಿವ್ಯಾ ಮಾತನಾಡಲು ಮತ್ತು ಸ್ವತಃ ನಡೆಯಲು ಸಮಯ ಬೇಕಾಗುತ್ತದೆ. ಯಾವುದೇ ಅಡ್ಡಿ ಆತಂಕಗಳು ಎದುರಾಗದೆ ಇದ್ದರೆ ಮಾತ್ರವೇ ಅದು ಸಾಧ್ಯ.

ಅಗತ್ಯ ಹಣಕಾಸನ್ನು ಹೊಂದಿಸುವುದರಲ್ಲಿನ ವಿಳಂಬ ದಿವ್ಯಾ ಇದುವರೆಗೂ ಕಂಡುಕೊಂಡಿರುವ ಚೇತರಿಕೆ ಮೇಲೆ ಪರಿಣಾಮ ಬೀರಬಹುದು. ದಯವಿಟ್ಟು ಈ ನಿಧಿಗೆ ದಯವಿಟ್ಟು ದೇಣಿಗೆ ನೀಡುವಂತೆ ನಿಮ್ಮೆಲ್ಲರನ್ನೂ ನಾನು ಬೇಡಿಕೊಳ್ಳುತ್ತೇನೆ. ಈಗಿನ ಸಮಯ ಬಹಳ ಕಠಿಣವಾಗಿದೆ ಮತ್ತು ಎಲ್ಲರಿಗೂ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಇದನ್ನು ಹಂಚಿಕೊಳ್ಳುವ ಮೂಲಕ ಅಗತ್ಯ ಹಣ ಸಂಗ್ರಹಿಸಲು ನೆರವಾಗಬಹುದು. ನಾನು ಕೇಳಿಕೊಳ್ಳುತ್ತಿರುವುದು ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X