ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FY14- ಭವಿಷ್ಯ ನಿಧಿ ಬಡ್ಡಿದರ ಏರಿಕೆ ಅಷ್ಟಕ್ಕಷ್ಟೇ

By Srinath
|
Google Oneindia Kannada News

employees-pf-deposits-to-get-8-75-interest-for-fy-14-epfo
ನವದೆಹಲಿ, ಜ.13: ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವನ್ನು 2013-14ನೇ ಸಾಲಿಗೆ ಶೇಕಡಾ 8.75 ರಷ್ಟು ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ EPFO ನಿರ್ಧರಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಅಸ್ಕರ್ ಫರ್ನಾಂಡಿಸ್ ತಿಳಿಸಿದ್ದಾರೆ.

ಕಳೆದ ವರ್ಷ 20.740 ಕೋಟಿ ರೂ ಭವಿಷ್ಯ ನಿಧಿಯನ್ನು ನೌಕರರಿಗೆ ನೀಡಲಾಗುತಿತ್ತು. ಈ ಬಾರಿ ಬಡ್ಡಿ ದರ ಏರಿಕೆ ಮಾಡಲು ನಿರ್ಧರಿಸುವುದರಿಂದ ಈ ಸಾಲಿನಲ್ಲಿ ನೌಕರರಿಗಾಗಿ 20.796.96 ಕೋಟಿಯಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ ಎಂದು Employees' Provident Fund Organisation ತಿಳಿಸಿದೆ.
( ಭವಿಷ್ಯ ನಿಧಿ ಬಡ್ಡಿ ದರಕ್ಕೆ ಬರೆ: 8.25ಕ್ಕೆ ಇಳಿಕೆ )

2011-12ನೇ ಸಾಲಿನಲ್ಲಿ ಶೇ. 8.25 ಬಡ್ಡಿ ದರ ನೀಡಲಾಗಿತ್ತು. ಅದರ ಹಿಂದಿನ ವರ್ಷ ಅಂದರೆ 2012-13ನೇ ಸಾಲಿಗೆ 8.5 ಬಡ್ಡಿ ದರ ನಿಗದಿ ಪಡಿಸಿತ್ತು. ಪ್ರಸ್ತುತ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಬಡ್ಡಿ ದರ ಏರಿಕೆ ಮಾಡಲಾಗಿದೆ. ಶೇ. 8.75ರಿಂದ ಶೇ 9ರಷ್ಟು ಏರಿಕೆ ಮಾಡಬೇಕಾದರೆ ಸಂಸ್ಥೆಗೆ 1, 220 ಕೋಟಿ ಹಣ ಬೇಕಾಗುವುದರಿಂದ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
( ನಿಮ್ಮ ಪಿಎಫ್ ಖಾತೆಗೂ ಕನ್ನ ಬಿದ್ದಿರಬಹುದು ಈಗ್ಲೇ ನೋಡ್ಕೊಳ್ಳಿ )

2012-13ನೇ ಸಾಲಿನಲ್ಲಿ ಶೇ 8.5
2011-12ನೇ ಸಾಲಿನಲ್ಲಿ ಶೇ 8.25
2013-14ನೇ ಸಾಲಿನಲ್ಲಿ ಶೇ 8.75

English summary
Employees' PF deposits to get 8.75 percent interest for FY14 - Employees' Provident Fund Organisation. Employees' Provident Fund Organisation (EPFO) has decided to provide 8.75 percent interest on PF deposits for 2013-14, Oscar Fernandes said in a statement. The EPFO, which is estimated to have an Income of Rs 20,796.96 crore in the current fiscal, needs Rs 20,740 crore to pay 8.5 percent interest to the subscribers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X