ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರಕ್ಕೆ ಭೇಟಿ ನೀಡಿದ್ದ ಪ್ರಶಾಂತ್‌ ತಂಡದ 23 ಮಂದಿಗೆ ಜಾಮೀನು

|
Google Oneindia Kannada News

ಅಗರ್ತಲಾ, ಜು.29: ತ್ರಿಪುರಕ್ಕೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನ ಕೆಲವು ಸಮೀಕ್ಷೆಗಳನ್ನು ಮಾಡಲು ತೆರಳಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡದ ಎಲ್ಲ 23 ಸದಸ್ಯರಿಗೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಯಾವುದೇ ಷರತ್ತುಗಳಿಲ್ಲದೆ ಬಂಧನಕ್ಕೆ ಪೂರ್ವ ಜಾಮೀನು ನೀಡಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಪರಿಸ್ಥಿತಿ ಮತ್ತು ಸಂಭಾವ್ಯ ಬೆಂಬಲ ನೆಲೆದ ಬಗ್ಗೆ ಸಮೀಕ್ಷೆ ನಡೆಸಲು ನಿರ್ಣಯಿಸಲು ಐಪಿಎಸಿ ನೌಕರರು ಅಗರ್ತಲಾದಲ್ಲಿದ್ದರು. ಆದರೆ ಕೋವಿಡ್‌ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹೊಟೇಲ್‌ನಿಂದ ಹೊರಗೆ ಹೋಗಲು ಬಿಟ್ಟಿರಲಿಲ್ಲ. ಈ ಬೆನ್ನಲ್ಲೇ ತಮ್ಮನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಪ್ರಶಾಂತ್‌ ಕಿಶೋರ್‌ ತಂಡವು ಹೇಳಿತ್ತು.

'ತ್ರಿಪುರದ ಹೊಟೇಲ್‌ನಿಂದ ಹೊರಹೋಗಲು ಬಿಡುತ್ತಿಲ್ಲ': ಪ್ರಶಾಂತ್‌ ತಂಡಕ್ಕೆ ಗೃಹ ಬಂಧನ?'ತ್ರಿಪುರದ ಹೊಟೇಲ್‌ನಿಂದ ಹೊರಹೋಗಲು ಬಿಡುತ್ತಿಲ್ಲ': ಪ್ರಶಾಂತ್‌ ತಂಡಕ್ಕೆ ಗೃಹ ಬಂಧನ?

ಐಪಿಎಸಿಯ ಕೆಲವು ಸದಸ್ಯರಿಗೆ ಆಗಸ್ಟ್ 1 ರಂದು ಪೊಲೀಸರು ಸಮನ್ಸ್‌ ನೀಡಿದ್ದರು. ಬಂಧಿಸಲು ಅವಕಾಶ ನೀಡುವ ಕ್ರಿಮಿನಲ್ ಕಾನೂನಿನ ಒಂದು ವಿಭಾಗದ ಅಡಿಯಲ್ಲಿ ತಂಡದ ಸದಸ್ಯರಿಗೆ ನೋಟಿಸ್ ನೀಡಲಾಗಿದೆ.

 Employees of Prashant Kishors Firm, On Visit To Tripura, Get Bail

ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ತಾವು ಹೋಟೆಲ್‌ನಿಂದ ಹೊರಹೋಗದಂತೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್‌ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡವನ್ನು ತಡೆಯಲಾಗಿದೆ ಎಂದು ತಂಡವು ಆರೋಪಿಸಿತ್ತು.

''ತ್ರಿಪುರ ಪೊಲೀಸರು ಬೆಳಿಗ್ಗೆಯಿಂದ ಹೋಟೆಲ್ ಲಾಬಿ ಮತ್ತು ಹೊರಗಡೆ ನಿಂತಿದ್ದಾರೆ. ಐಪಿಎಸಿ ತಂಡದ ಸದಸ್ಯರನ್ನು ಯಾರಿಗೂ ಆವರಣದಿಂದ ಹೊರಹೋಗಲು ಅವಕಾಶ ನೀಡುತ್ತಿಲ್ಲ,'' ಎಂದು ಸಂಘಟನೆಯ ಮೂಲಗಳು ತಿಳಿಸಿತ್ತು.

ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ

ಪೊಲೀಸರು ಈ ಗೃಹ ಬಂಧನಕ್ಕೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ. ಐಪಿಎಸಿ ತಂಡವು ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಮಾತ್ರ ಹೇಳುತ್ತದೆ. ತಂಡವು ಅಗತ್ಯವಿರುವ ಎಲ್ಲಾ ಕೋವಿಡ್ ಸಂಬಂಧಿತ ಮಾನದಂಡವನ್ನು ಪಾಲಿಸಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಹೊಂದಿದೆ ಎಂದು ಐಪಿಎಸಿ ಮೂಲಗಳು ತಿಳಿಸಿವೆ.

ಆದರೆ ಹೋಟೆಲ್‌ನಲ್ಲಿ ತಂಡವನ್ನು ಪ್ರಶ್ನಿಸುವುದು ಸಾಮಾನ್ಯ ತಪಾಸಣೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ತ್ರಿಪುರದ ಪೊಲೀಸ್ ಅಧೀಕ್ಷಕ ಮಾಣಿಕ್ ದಾಸ್, "ಹೊರಗಿನವರು ಸುಮಾರು 22 ಜನರು ವಿವಿಧ ಸ್ಥಳಗಳಲ್ಲಿ ಸುತ್ತಾಡುತ್ತಿದ್ದರು. ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವುದರಿಂದ, ಈ ಜನರು ಆಗಮಿಸಲು ಹಾಗೂ ನಗರದಲ್ಲಿ ಉಳಿಯುವ ಹಿಂದಿನ ಕಾರಣಗಳನ್ನು ನಾವು ವಿಚಾರಿಸುತ್ತಿದ್ದೇವೆ. ಈ ಜನರು ಎಲ್ಲರೂ ಸೋಮವಾರ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದರು. ವರದಿಗಳು ಇನ್ನಷ್ಟೇ ಬರಬೇಕಾಗಿದೆ,'' ಎಂದು ತಿಳಿಸಿದ್ದರು.

"ಇನ್ನು ಈ ಐಪಿಎಸಿ ಸದಸ್ಯರ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಗಳು ನಾಳೆ ಬರಲಿವೆ. ಸಂಶೋಧನೆಗೆ ಸಂಬಂಧಿಸಿದ ಕೆಲವು ಕೆಲಸಗಳಿಗಾಗಿ ತಂಡವು ಇಲ್ಲಿದೆ ಎಂದು ತಿಳಿಸಿದ್ದಾರೆ. ಕೋವಿಡ್‌ ಪರೀಕ್ಷಾ ಫಲಿತಾಂಶಗಳು ಮತ್ತು ತನಿಖೆಯ ವರದಿ ಬಂದ ಬಳಿಕ ಈ ತಂಡದ ಬಿಡುಗಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ಕೂಡಾ ಪಶ್ಚಿಮ ತ್ರಿಪುರದ ಪೊಲೀಸ್ ಅಧೀಕ್ಷಕ ಮಾಣಿಕ್ ದಾಸ್ ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
All 23 members of poll strategist Prashant Kishor's IPAC (Indian Political Action Committee), in Tripura on assignment for Mamata Banerjee, have been granted pre-arrest bail without conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X