ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದಿಂದ ಸಿಹಿ ಸುದ್ದಿ: ಉದ್ಯೋಗಿಗಳ ಭತ್ಯೆಗೆ ತೆರಿಗೆ ವಿನಾಯಿತಿ!

|
Google Oneindia Kannada News

ನವದೆಹಲಿ, ಜೂನ್ 29: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಂಡಿಸಿದ ಹೊಸ ಆದಾಯ ತೆರಿಗೆ ಅವಧಿಯಲ್ಲಿ ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಪ್ರಯಾಣ ಭತ್ಯೆ ಮೇಲೆ ಆದಾಯ ತೆರಿಗೆ ವಿನಾಯತಿ ಪಡೆದುಕೊಳ್ಳಬಹುದು.

Recommended Video

HD Deve Gowda has withdrawn protest : ದೇವೇಗೌಡರ ಬೇಡಿಕೆಗಳನ್ನು ಈಡೇರಿಸಿದ ಯಡಿಯೂರಪ್ಪ | Oneindia Kannada

ಕೇಂದ್ರೀಯ ನೇರ ತೆರಿಗೆ ಮಂಡಳಿ ( ಸಿಬಿಡಿಟಿ ) ಹೊಸ ಕಡಿಮೆ ತೆರಿಗೆ ದರಗಳ ವ್ಯವಸ್ಥೆಯಲ್ಲಿ ತೆರಿಗೆ ವಿನಾಯಿತಿ ಪಡೆದ ಉದ್ಯೋಗದಾತರಿಗೆ ಹೊಸ ಅಧಿಸೂಚನೆ ಹೊರಡಿಸಿದ್ದು, ಹೊಸ ತೆರಿಗೆ ನಿಯಮವು 2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ ಗಳಿಕೆಗೆ ಅನ್ವಯಿಸುತ್ತದೆ. ಹೊಸ ನಿಯಮದ ಪ್ರಕಾರ, ಉದ್ಯೋಗದಾತ(employer)ರಿಂದ ಉದ್ಯೋಗಿ(employee)ಗಳು ಪಡೆಯುವ ಕೆಲವು ಭತ್ಯೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ .

ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಪ್ರಕಟ, ವಿವರ ಇಲ್ಲಿದೆಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಪ್ರಕಟ, ವಿವರ ಇಲ್ಲಿದೆ

ಉದ್ಯೋಗಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (14) ರ ಅಡಿಯಲ್ಲಿ ಪ್ರವಾಸ ಭತ್ಯೆ ಅಥವಾ ವರ್ಗಾವಣೆ ಭತ್ಯೆಗೆ ಅರ್ಹರಾಗಿದ್ದು, ತೆರಿಗೆ ವಿನಾಯಿತಿ ಪಡೆಯಬಹುದು. ಇದಲ್ಲದೆ, ಪ್ರಯಾಣದ ಸಮಯದಲ್ಲಿ ದಿನಭತ್ಯೆಗೆ ಪ್ರತಿಯಾಗಿ ಕಂಪನಿಯು ಪಡೆಯುವ ಭತ್ಯೆಗಳು ತೆರಿಗೆ ವಿನಾಯಿತಿಯ ವ್ಯಾಪ್ತಿಗೆ ಬರುತ್ತವೆ ಎಂದು ಈ ನಿಯಮ ಹೇಳುತ್ತದೆ.

Employees Allowed To Claim Conveyance Allowance Under New Tax Regime

ಅಂಗವಿಕಲ ಉದ್ಯೋಗಿಗಳಿಗೆ ಕಂಪನಿಯು ನೀಡುವ ಸಾರಿಗೆ ಭತ್ಯೆಯೂ ವಿನಾಯಿತಿ ವ್ಯಾಪ್ತಿಗೆ ಬರುತ್ತದೆ . ಅವರು ತಿಂಗಳಿಗೆ 3,200 ರೂ . ಗಳವರೆಗೆ ರಿಯಾಯಿತಿ ಪಡೆಯಬಹುದು.

ಸಂಸ್ಥೆಯಿಂದ ನೀಡಲಾಗುವ ಉಚಿತ ಆಹಾರ, ಆಲ್ಕೋಹಾಲ್ ರಹಿತ ಪಾನೀಯಗಳ ಮೇಲೆ ವಿನಾಯಿತಿ ಇರುವುದಿಲ್ಲ ಎಂದು ಸಿಬಿಡಿಟಿ ಹೇಳಿದೆ.

English summary
The government has allowed individuals under new lower tax regime to claim I-T exemption on conveyance allowance received from employers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X